ಜಾವಗಲ್: ಹೋಬಳಿಯ ಗೇರುಮರ ಗ್ರಾಮಕ್ಕೆ ಆಗಮಿಸಿದ್ದ ರಾಜ್ಯ ಒಕ್ಕಲಿಗ ನಿಗಮದ ನಿರ್ದೇಶಕರಾದ ಸುರಭಿರಘು ಮಾತನಾಡಿ ಈಡಿ ಜಗತ್ತಿನಲ್ಲಿ ಹರಡಿರುವ ಕರೋನಾ ಅಂತ ಸಾಂಕ್ರಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ 100 ಕೋಟಿ ಜನಸಂಖ್ಯೆಗೆ ಲಸಿಕೆ ಹಾಕುವ ಮುಖೇನ ಮೋದಿ ನೇತೃತ್ವದ ಸರ್ಕಾರ ಅತ್ಯುತ್ತಮ ಕಾರ್ಯನಿರ್ವಹಿಸುತ್ತಿದೆ,
ರಾಜ್ಯದಲ್ಲಿ ಪೃಕೃತಿ ವಿಕೋಪ, ಕರೋನಾ ಇಂತಹ ಸಂದರ್ಭದಲ್ಲೂ ಕೂಡ ಮಾನ್ಯ ಯಡಿಯೂರಪ್ಪನವರು ಹಾಗೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ನೇತೃತ್ವದ ಸರ್ಕಾರ ಅತ್ಯುತ್ತಮ ಆಡಳಿತ ನಡೆಸುತ್ತಿದ್ದಾರೆ ಎಂಬುದು ಜನತೆಯ ಅರಿವಿಗಿದೆ, ವಿರೋದ ಪಕ್ಷಗಳ ಕೆಲವು ಉನ್ನತ ಹುದ್ದೆಯಲ್ಲಿ ಇರುವ ನಾಯಕರುಗಳು
ಮಾಧ್ಯಮದ ಮುಂದೆ ಮಾಡುತ್ತಿರುವ ಟೀಕೆಗೆ
ವಯಕ್ತಿಕ ನಿಂದನೆಗಳಿಗೆ ಹಾನಗಲ್ ಹಾಗೂ ಸಿಂಧಗಿ
ಕ್ಷೇತ್ರದ ಜನತೆ ಬಿ ಜೆ ಪಿ ಗೆ ಮತ ನೀಡುವುದರ ಮುಖೇನ ಸರಿಯಾದ ಉತ್ತರ ನೀಡುತ್ತಾರೆ,
ಬೇಲೂರು ನನ್ನ ತವರೂರು ಇಲ್ಲಿ ನಿರಂತರವಾಗಿ
ನಮ್ಮ ಚಟುವಟಿಕೆ ನಡೆಯುತ್ತಿರುತ್ತವೆ ಬೇಲೂರು
ನಗರದಲ್ಲಿ ವೃದ್ದರಿಗೆ ಸೈನಿಕರಿಗೆ ಸರ್ಕಾರಿ ಕಚೇರಿ
ಹಾಗೂ ಸರ್ಕಾರಿ ಕೆಲಸಕ್ಕೆ ಓಡಾಡಲು ಉಚಿತ ಆಟೋ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ,
ಕರೋನಾ ಸಂದರ್ಭದಲ್ಲಿ ಬೇಲೂರು ಹಾಗೂ ಹಗರೆ
ಸರ್ಕಾರಿ ಆಸ್ಪತ್ರೆ ಗೆ ಉಚಿತ ಅಂಬುಲೆನ್ಸ ನೀಡಿ ಕಾರ್ಯನಿರ್ವಹಿಸಿದ್ದೆವೆ, ಶಾಲಾ ಮಕ್ಕಳನ್ನು ಗುರುತಿಸಿ ಸ್ಕಾಲರಶೀಪ್ ನೀಡುತ್ತಿದ್ದೆವೆ ಕ್ಷೇತ್ರದಾದ್ಯಂತ ಪ್ರತಿನಿತ್ಯ ಒಂದಲ್ಲ ಒಂದು ಕಾರ್ಯನಿರ್ವಹಿಸುತ್ತಿದ್ದೆವೆ ಬೇಲೂರು ನನ್ನ ತವರೂರು ರಾಜ್ಯ ಸಂಘಟನೆ ಜೊತೆಗೆ ತವರೂರಿಗೆ
ಹೆಚ್ಚು ಒತ್ತು ನೀಡುತ್ತಿದ್ದೆನೆಂದರು
ಈ ಸಂದರ್ಭದಲ್ಲಿ
ಜಿಲ್ಲಾ ಮಹಿಳಾ ಮೋರ್ಚ ಅಧ್ಯಕ್ಷರಾದ ರತ್ನಪ್ರಭಾ
ಪ್ರಕಾಶ್, ನಗರ ಮೋರ್ಚ ಅಧ್ಯಕ್ಷರಾದ ಸುಧಾ ಕಲ್ಯಾಣ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ್
ವಿಕ್ರಮ್,ಕರಗುಂದ ಗ್ರಾ. ಪಂ ಅಧ್ಯಕ್ಷರಾದ ದಯಾನಂದ, ಗ್ರಾ ಪಂ ಸದಸ್ಯ ನಾಗೇಂದ್ರ, ಉಂಡಿಗನಾಳು ರಮೇಶ, ಶಿವು ಮತ್ತಿತರರು ಉಪಸ್ಥಿತಿಯಿದ್ದರು.