ಅನಂತರಾಜೇಅರಸು ಬೇಲೂರು
ಇಲ್ಲಿನ ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆ ಸೋಮವಾರ ನಡೆಯಲಿದ್ದು ಈ ಹಿನ್ನಲೆಯಲ್ಲಿ ಪುರಸಭೆಯನ್ನು ಅಂದಗೊಳಿಸಲಾಗುತ್ತಿದೆ.
| ಬೇಲೂರು ಪುರಸಭೆಯ ಹೊರ ಆವರಣದಲ್ಲಿ ಅಲಂಕಾರಿಕ ಗಿಡಗಳ ಕುಂಡಗಳನ್ನು ಇಟ್ಟಿರುವುದು ಮತ್ತು ಪುರಸಭೆ ಬೇಲೂರು ಹೆಸರು ನಿರ್ಮಿಸುವಲ್ಲಿ ಕೆಲಸಗಾರ ನಿತರರಾಗಿರುವುದು |
ಪುರಸಭೆಯ ಮುಂಭಾಗದಲ್ಲಿ ಹೆಚ್ಚುವರಿ ಕೊಠಡಿಗಳೊಂದಿಗೆ ಅಂದವಾದ ಪೋಟಿಕೊ ಅನ್ನು ನಿರ್ಮಿಸಲಾಗಿದ್ದು ಉದ್ಘಾಟನೆಯಷ್ಟೇ ಬಾಕಿಯಿತ್ತು. ಇದೀಗ ನೂತನ ಆಡಳಿತ ಮಂಡಳಿಗೆ ಉದ್ಘಾಟನೆ ಭಾಗ್ಯ ಕೂಡಿಬಂದಿದೆ.
ಇದೀಗ ಸೋಮವಾರ (ಅಕ್ಟೋಬರ್ ೪ ರಂದು) ಬೆಳಿಗ್ಗೆ ೧೧ ಗಂಟೆಗೆ ನಡೆಯಲಿರುವ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಹಿನ್ನಲೆಯಲ್ಲಿ ಪುರಸಭೆಯ ಮುಂಭಾಗವನ್ನು ಸ್ವಚ್ಛಗೊಳಿಸಿದ್ದಲ್ಲದೆ, ಪುರಸಭೆ ಬೇಲೂರು ಎಂಬುದಾಗಿ ಸೀಮೆಂಟಿನಿAದ ಅಕ್ಷರ ಜೋಡಣೆ ಜೊತೆಗೆ ಹಿತ್ತಾಳೆಯ ಅಕ್ಷರದಲ್ಲೂ ಪುರಸಭೆ ಬೇಲೂರು ಹೆಸರು ಅಳವಡಿಸಿಲಾಗಿದೆ. ಗೋಡೆಗೆ ಹೊಂದಿಕೊಂಡಂತೆ ಮತ್ತು ಶಿವನ ವಿಗ್ರಹದ ಕೆಳಗೆ ವಿವಿಧ ಅಲಂಕಾರಿಕ ಗಿಡಗಳ ಕುಂಡಗಳನ್ನು ಇಟ್ಟು ಅಲಂಕರಿಸಲಾಗಿದೆ.