(ಅನಂತ ರಾಜೇಅರಸು ಬೇಲೂರು)
ಬೇಲೂರು
ಇಲ್ಲಿನ ವಿಶ್ವ ವಿಖ್ಯಾತ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದ ಮರದ ದೊಡ್ಡ ರಥಕ್ಕೆ ಸೂಕ್ತ ರಕ್ಷಣಾ ವ್ಯವವಸ್ಥೆ ಇಲ್ಲವಾಗಿದೆ. ರಥದ ಮೇಲೆ ದೂಳು, ಸೆಲುಬೆ ಕಟ್ಟಿದೆ. ರಥದ ಕಲ್ಲಿನ ಮಂಟಪವು ಎತ್ತರ ಇರುವುದರಿಂದ ಮತ್ತು ರಥದ ಮಂಟಪಕ್ಕೂ ರಥಕ್ಕೂ ಕೇವಲ 6 ಅಡಿ ಅಂತರ ಇದ್ದು, ಬಿಸಿಲು, ಜೋರಾಗಿ ಮಳೆ ಬಂದಾಗ ಮಳೆಯ ನೀರು ರಥಕ್ಕೆ ತಗುಲಿದೆ ಮತ್ತು ಗಾಳಿಯು ಸಹ ರಥಕ್ಕೆ ಬಡಿದು ಗುಣಮಟ್ಟ ಕಳೆದುಕೊಳ್ಳುವ ಸಾಧ್ಯತೆ ಇದೆ.
| ಬೇಲೂರಿನ ಶ್ರೀ ಚನ್ನಕೇಶವ ಸ್ವಾಮಿ ದೊಡ್ಡರಥದ ಗೇಟ್ ಬೀಗ ಹಾಕದೆ ತೆರೆದಿರುವುದು |
ಇದರ ಜೊತೆಗೆ ರಥದ ಕಲ್ಲು ಮಂಟಪಕ್ಕೆ ಅಳವಡಿಸಿರುವ ಕಬ್ಬಿಣದ ಗೇಟ್ ಗೂ ಸಹ ಬೀಗ ಹಾಕದ ಕಾರಣ ರಾತ್ರಿವೇಳೆ ರಥದ ಹಿಂಭಾಗದಲ್ಲಿ ಮದ್ಯಪಾನ ಮಾಡಲು ಬಳಕೆ ಮಾಡಿಕೊಂಡಿರುವುದು ಕಂಡುಬರುತ್ತಿದೆ.
| ರಥದ ಬಳಿ ಮದ್ಯಪಾನ ಮಾಡಿರುವುದು |
ಮೈಸೂರು ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರು ಲೋಕಾರ್ಪಣೆ ಮಾಡಿದಂತ ಈ ರಥಕ್ಕೆ ಸೂಕ್ತ ರಕ್ಷಣಾ ವ್ಯವಸ್ಥೆ ಮಾಡಬೇಕೆಂದು ಭಕ್ತರಾದ ಸಿದ್ದಾರ್ಥ ಹಾಗೂ ಆನಂದ್ ಒತ್ತಾಯಿಸಿದ್ದಾರೆ.
ರಥದ ಮೇಲೆ ದೂಳು ಇದ್ದು ಮತ್ತು ಸೆಲುಬೆ ಕಟ್ಟಿರುವುದು |
| ಭಕ್ತರು ಹೇಳಿಕೆ ನೀಡುತ್ತಿರುವುದು |
Tags
ಬೇಲೂರು