ಬೇಲೂರಿನಲ್ಲಿ ವಾಲ್ಮೀಕಿ ಸಂಘದಿಂದ ವಾಲ್ಮೀಕಿ ಜಯಂತಿ

ಬೇಲೂರು : ಪಟ್ಟಣದ ಕೋಟೆ ಬ್ಯಾಡರಕೇರಿ ಬಡಾವಣೆಯಲ್ಲಿ ವಾಲ್ಮೀಕಿ ಸಂಘದಿಂದ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು.

ಬೇಲೂರಿನಲ್ಲಿ ವಾಲ್ಮೀಕಿ ಸಂಘದಿಂದ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು

ಬಿಜೆಪಿ ಜಿಲ್ಲಾಧ್ಯಕ್ಷ ಹುಲ್ಲಹಳ್ಳಿಸುರೇಶ್ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಜಯಂತಿಗೆ ಚಾಲನೆ ನೀಡಿ ಮಾತನಾಡಿದ ಅವರು, ಆದಿಕವಿ, ರಾಮಾಯಣದ ಕರ್ತೃ ಶ್ರೀವಾಲ್ಮೀಕಿ ಮಹರ್ಷಿ ಆಗಿದ್ದಾರೆ. ಮಹಾನ್ ಪುರುಷರ ಜೀವನ ಶೈಲಿ, ಚರಿತ್ರೆಗಳ ಅಧ್ಯಯನ ಮಾಡುವ ಮೂಲಕ ನಾವು ನಮ್ಮ ಬದುಕಿನ ಚಿತ್ರಣ ಬದಲಾವಣೆ ಮಾಡಿಕೊಳ್ಳಬಹುದಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಾಲ್ಮೀಕಿ ಸಂಘದ ಅಧ್ಯಕ್ಷರಾದ ಕುಮಾರ್, ಬೇಲೂರು ನಗರ ಬಿಜೆಪಿ ಅಧ್ಯಕ್ಷ ವಿನಯ್, ಬೇಲೂರು ಪುರಸಭೆ ಸದಸ್ಯ ಪ್ರಭಾಕರ್ ಜಿಲ್ಲಾ ಉಪಾಧ್ಯಕ್ಷ ಚೇತನಕುಮಾರ್, ಪ್ರಮುಖರಾದ ರವಿ, ಚೇತನ್, ರಾಮನಾಯಕ್, ಲಕ್ಷ್ಮಣ್‌ನಾಯಕ್, ರಂಗನಾಥ್, ಅರುಣ್‌ಕುಮಾರ್, ಪ್ರಕಾಶ್, ಹೇಮಂತ್, ರಾಘವೇಂದ್ರ, ಮಹೇಶ್ ವಿಜಯಲಕ್ಷ್ಮೀ, ಜಾನಕಮ್ಮ, ದ್ರಾಕ್ಷಾಯಿಣಿ ಇತರರು ಉಪಸ್ಥಿತರಿದ್ದರು.


Post a Comment

Previous Post Next Post