ಕಾಡಾನೆಗಳ ದಾಳಿಯಿಂದ ಭತ್ತದ ಬೆಳೆ ಸಂಪೂರ್ಣ ಹಾನಿ. ಕಣ್ಣೀರು ಹಾಕಿದ ರೈತ


ವರದಿ ಸತೀಶ್ ಚಿಕ್ಕಕಣಗಾಲು
ಆಲೂರು : ತಾಲೂಕಿನ ಕೆ. ಹೊಸಕೋಟೆ ಹೋಬಳಿ ವ್ಯಾಪ್ತಿಯಲ್ಲಿ ಮುಂದುವರೆದ ಕಾಡಾನೆಗಳ ಹಾವಳಿಯಿಂದ ಅಪಾರ ಪ್ರಮಾಣದ ಬೆಳೆಹಾನಿ

ಮಾದಿಹಳ್ಳಿ ಗ್ರಾಮದ  ಸಮೀಪವಿರುವ  ದೊಡ್ಡ ಬೆಟ್ಟ ಅರಣ್ಯ ಪ್ರದೇಶದ ಕಾಡಂಚಿನಲ್ಲಿರುವ  ರೈತರ ಜಮೀನುಗಳಿಗೆ ಕಾಡಾನೆಗಳ ಹಿಂಡು ಸೋಮುವಾರ ರಾತ್ರಿ ಲಗ್ಗೆಯಿಟ್ಟು ಭತ್ತದ  ಬೆಳೆಯನ್ನು ತಿಂದು ತುಳಿದು  ನಾಶಪಡಿಸಿವೆ.
ಮಾದಿಹಳ್ಳಿ ಗ್ರಾಮದ ರೈತ ಯೋಗಾನರಸಿಂಹಯ್ಯ ಎಂಬುವರ ಒಂದು ಎಕರೆ ಭತ್ತದ ಗದ್ದೆಯನ್ನು ಸಂಪೂರ್ಣ ತುಳಿದು ನಾಶಪಡಿಸಿರುವ ಕಾಡಾನೆಗಳು.

ಸಾಲಸೋಲದಿಂದ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿರುವೆ ಸ್ವಾಮಿ. ಪದೇ ಪದೇ ಕಾಡಾನೆಗಳು ದಾಳಿ ಮಾಡುತ್ತಿದ್ದು ವಿಷಕುಡಿದು ಸಾಯೋ ಪರಿಸ್ಥಿತಿ ನಿರ್ಮಾಣವಾಗಿದೆ.  ನಮ್ಮ ಪಾಡು ಹೇಳತೀರದಂತಾಗಿದೆ ಎಂದು ಅಳಲು ತೋಡಿಕೊಂಡ ರೈತ ಯೋಗಾನರಸಿಂಹಯ್ಯ.

ಕೃಷಿಯೇ ಈ ಭಾಗದ ರೈತರ ಜೀವಾಳವಾಗಿದ್ದು, ತಮ್ಮ ಜಮೀನಿನಲ್ಲಿ  ಬೆಳೆದ ಬೆಳೆಗಳನ್ನು ಕಾಡಾನೆಗಳಿಂದ ರಕ್ಷಿಸಿ ಫಸಲು ಪಡೆಯುವುದು ಸವಾಲ್ ಆಗಿ ಪರಿಣಮಿಸಿದೆ

Post a Comment

Previous Post Next Post