ಹಾಸನ: ಅಧಿ ದೇವತೆ ಹಾಸನಾಂಬೆ ದೇವಿ ದರ್ಶನವನ್ನು ಸಾರ್ವಜನಿಕರಿಗೆ ನೀಡಿ ವಿಐಪಿ ಗಣ್ಯರನ್ನು ಮನೆಯಲ್ಲಿ ಕೂರಿಸಲಿ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಒತ್ತಾಯಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ವಿಐಪಿಗಳನ್ನು ಗಣ್ಯರನ್ನು ಮನೆಯಲ್ಲಿ ಕೂರಿಸಿ ಬಡವರಿಗೆ ಹಾಸನಾಂಬ ದೇವರ ದರ್ಶನ ಮಾಡಲು ಅವಕಾಶ ಕಲ್ಪಿಸಲಿ. ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ದರ್ಶನ ವ್ಯವಸ್ಥೆ ಮಾಡಿದ್ದಾರೆ. ಪ್ರಧಾನಿ ಮೋದಿ ೧೦೦ ಕೋಟಿ ಲಸಿಕೆ ನೀಡಿದರು ಸಾರ್ವಜನಿಕರಿಗೆ ಪ್ರವೇಶ ನೀಡಲು ಜಿಲ್ಲಾಡಳಿತಕ್ಕೆ ಭಯ ಯಾಕೆ ಎಂದು ಪ್ರಶ್ನಿಸಿದರು. ಬಡವರಿಗೆ ದೇವರ ದರ್ಶನಕ್ಕೆ ಬಿಡಲು ನಿರಾಕರಣೆ ಮಾಡಿದ್ದಾರೆ ನಾನೆ ಸಾರ್ವಜನಿಕರನ್ನು ಹಾಗು ಬಡವರನ್ನು ಕರೆದುಕೊಂಡು ಒಳ ನುಗ್ಗಿಸುತ್ತೆನೆ. ಯಾವ ಪೊಲೀಸರು ಎನು ಮಾಡುತ್ತಾರೆ ನೋಡುತ್ತೆನೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಕಡಿಮೆ ಮಾಡಲು ಹಾಸನಾಂಬ ದರ್ಶನಕ್ಕೆ ಜನರಿಗೆ ಅವಕಾಶ ಕಲ್ಪಿಸಲಿ. ಹಾಸನಾಂಬ ದೇವಾಲಯ ಅಲಂಕಾರ ಟೆಂಡರ್ ಅವ್ಯವಹಾರ ಪ್ರತಿ ರೂಪಾಯಿ ಹಣವನ್ನು ಜಿಲ್ಲಾಧಿಕಾರಿ ಲೆಕ್ಕ ಕೊಡಬೇಕೆಂದು ಆಗ್ರಹಿಸಿದರು.
ರಾಜ್ಯದ ಎರಡು ಉಪಚುನಾವಣೆಯಲ್ಲಿ. ಎರಡು ರಾಷ್ಟ್ರೀಯ ಪಕ್ಷಗಳು ಪರಸ್ಪರ ಹಣದ ಚಿಲ ಆರೋಪ ಹಾಗು ಪ್ರತ್ಯರೋಪ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಹಾಗು ಬಿಜೆಪಿಗೆ ಪಕ್ಷಗಳಿಗೆ ಜೆಡಿಎಸ್ ಪಕ್ಷ ಕಂಡರೆ ಭಯವಿದೆ. ರಾಜ್ಯದಲ್ಲಿ ಕಾಂಗ್ರೆಸ್ ಹೀನಾಯ ಸ್ಥಿತಿಗೆ ಹೊಗಿದೆ. ಕಾಂಗ್ರೆಸ್ ಗೆ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಅಭ್ಯರ್ಥಿ ಸಿಗದೆ ಜೆಡಿಎಸ್ ಅಭ್ಯರ್ಥಿಯನ್ನು ಕರೆದುಕೊಂಡು ಹೋಗಿ ಚುನಾವಣೆಗೆ ನಿಲ್ಲಿಸಿದ್ದಾರೆ ಎಂದರು. ಸಿಂದಗಿ ಚುನಾವಣೆಯಲ್ಲಿ ಅಭ್ಯರ್ಥಿ ಕುಟುಂಬ ೨೫ ವರ್ಷಗಳಿಂದ ಜೆಡಿಎಸ್ ಜೊತೆ ಇದ್ದ ಮುಸ್ಲಿಂ ಕುಟುಂಬಕ್ಕೆ ಟಿಕೆಟ್ ಕೊಡಲು ಹಿಂದೂ ಜನಾಂಗದವರು ಹೇಳಿದರು. ಆದ ಕಾರಣ ಮುಸ್ಲಿಂ ಮಹಿಳೆಗೆ ಟಿಕೆಟ್ ನೀಡಿದ್ದೆವೆ. ರಾಜ್ಯಸಭೆ ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿ ಸೋಲಿಸಲು ೭ ಜನ ಜೆಡಿಎಸ್ ಶಾಸಕರಿಗೆ ಕಾಂಗ್ರೆಸ್ ಮುಖಂಡರು ಎಷ್ಟೆಟ್ಟು ಹಣ ಕೊಟ್ಟು ಮುಸಲ್ಮಾನ ಅಭ್ಯರ್ಥಿ ಸೋಲಿಸಿದರು. ಕುಮಾರಸ್ವಾಮಿ ಮೇಲೆ ಸೂಟ್ ಕೆಸ್ ಆರೋಪ ಮಾಡುವ ವ್ಯಕ್ತಿ ಮೊದಲು ಸೂಟಕೆಸ್ ಪಡೆಯುತ್ತಾನೆ ಎಂದು ದೂರಿದರು. ನಮ್ಮ ಬಳಿ ಸೂಟ್ ಕೆಸ್ ಸಿಗದೆ ಇದ್ದಿದ್ದಕ್ಕೆ ಪಾರ್ಟಿ ಬಿಟ್ಟು ಹೋದ. ನಮ್ಮ ಹತ್ತಿರ ಬರಿ ಖಾಲಿ ಚೀಲಗಳು ಇವೆ ಅಷ್ಟೆ. ಬಿಜೆಪಿ ಜೊತೆ ಮೈತ್ರಿ ಆದಾಗಲೆ ಜಮೀರ್ ಅಹಮದ್ ಪಕ್ಷ ಬಿಟ್ಟು ಹೋಗಬೇಕಾಗಿತ್ತು. ತುಮಕೂರು ಹಾಗು ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಹಣ ಪಡೆದು ಬಿಜೆಪಿ ಜೊತೆ ಸೇರಿ ದೇವೇಗೌಡರನ್ನು ಸೋಲಿಸಿದರು. ಕಾಂಗ್ರೆಸ್ ರಾಷ್ಟ್ರದಲ್ಲಿ ನೆಲಕಚ್ಚುತ್ತಿದೆ. ಹಾಸನ ದಲ್ಲಿ ನಮ್ಮ ವಿರುದ್ದ ಬಿಜೆಪಿ ಬಿ ಟೀಂ ಎಂದು ಪ್ರಚಾರ ಮಾಡಿ ಬೀ ಟಿಂ ಮನೆಗೆ ಬಂದು ಸರ್ಕಾರ ರಚನೆ ಮಾಡಲು ಕಾಲು ಹಿಡಿದರು ಎಂದು ಟಾಂಗ್ ನೀಡಿದರು. ಸಿಂದಗಿ ಚುನಾವಣೆಯಲ್ಲಿ ಎಂ.ಎ. ಪದವಿಧರರಿಗೆ ಟಿಕೆಟ್ ನೀಡಿದ್ದವೆ. ಎರಡು ರಾಷ್ಟ್ರೀಯ ಪಕ್ಷಗಳು ಜೆಡಿಎಸ್ ಮುಗಿಸಲು ಹೋರಟ ಮಾಡುತ್ತಾವರೆ. ಯಾರು ಜೆಡಿಎಸ್ ಪಕ್ಷ ಮುಗಿಸಲು ಸಾಧ್ಯವಿಲ್ಲ. ಗುಬ್ಬಿ ಶಾಸಕರ ಬಗ್ಗೆ ನಾ ಮಾತನಾಡಲ್ಲ. ಎಂ.ಎಲ್.ಸಿ. ಕಾಂತರಾಜುಗೆ ದೇವೇಗೌಡರು ಇಲ್ಲ ಅಂದಿದ್ದರೆ ವಾರದಲ್ಲಿ ನೆಲಮಂಗಲದಲ್ಲಿ ಹೊಡೆದು ಹಾಕಿ ಬಿಡೊರೋ ದೇವೇಗೌಡರು ಅವನನ್ನು ಬದುಕಿಸಿದ್ದಾರೆ ಎಂದರು.
ಹಾಸನ ಜಿಲ್ಲೆಯಲ್ಲಿ ಕಾಲುಬಾಯಿ ರೋಗ ಜಾಸ್ತಿಯಾಗಿದೆ. ಇದುವರೆಗು ಹಸುಗಳಿಗೆ ಕಾಲುಬಾಯಿ ಜ್ವರದ ಇಂಜೆಕ್ಷನ್ ನೀಡಿಲ್ಲ. ಕಳೆದ ೨ ವರ್ಷದಿಂದ ಕಾಲುಬಾಯಿ ರೋಗ ಜ್ವರಕ್ಕೆ ಕೇಂದ್ರ ಹಾಗು ರಾಜ್ಯ ಸರ್ಕಾರದ ಹಣ ಬಿಡುಗಡೆಯಾಗಿಲ್ಲ. ಜಿಲ್ಲೆಯಲ್ಲಿ ಕಾಲುಬಾಯಿ ರೋಗದಿಂದ ೨೫೦೦ ಹಸುಗಳು ಸತ್ತುಹೋಗಿವೆ. ಮೋದಿಯವರು ಕೊಡಲಿ. ಬಸವರಾಜ್ ಬೊಮ್ಮಾಯಿಯವರು ಕೊಡಲಿ, ಮೊದಲು ದನಗಳಿಗೆ ವ್ಯಾಕ್ಸಿನೇಷನ್ ಕೊಡಬೇಕು. ಪಶುಸಂಗೋಪನೆ ಸಚಿವರಿಗೆ ಕನ್ನಡ ಬರೋದಿಲ್ಲ. ಬರಿ ಬೀದರ್ ಕ್ಲಿನ್ ಮಾಡುತ್ತಾವರೆ. ಕೆ.ಎಂ.ಎಫ್. ಅಧ್ಯಕ್ಷರು ಹಾಲಿನ ದರ ಏರಿಕೆ ಮಾಡಬಾರದು. ಇದರಿಂದ ಖಾಸಗಿಯವರಿಗೆ ಅನುಕೂಲವಾಗುತ್ತದೆ ಎಂದು ಕುಟುಕಿದರು.