ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿಗೆ ಲಿಖಿತ ಪರೀಕ್ಷೆ ಬರೆದ ಉದ್ಯೋಗಕಾಂಕ್ಷಿಗಳು

ಹಾಸನ: ಕರ್ನಾಟಕ ಪೊಲೀಸ್ ಇಲಾಖೆಯು 2021ನೇ ಸಾಲಿನ 4000 ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಉದ್ಯೋಗಕಾಂಕ್ಷಿಗಳು ಸ್ಪರ್ಧಾತ್ಮಕ ಪರೀಕ್ಷೆಯನ್ನು ಭಾನುವಾರದಂದು ಬರೆದರು.

      ಕೊರೊನಾ 3ನೇ ಅಲೆ ಅಥವಾ ಇತರೆ ಯಾವುದೇ ಅಡೆತಡೆಗಳು ಎದುರಾದಲ್ಲಿ ಮಾತ್ರ ದಿನಾಂಕದಂದು ಪರೀಕ್ಷೆ ರದ್ದು ಮಾಡಿ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ ಮಾಡಬೇಕಾಗಿತ್ತು. ಆದರೇ ಕೊರೋನಾ ಶೇಕಡವಾರು ಕಡಿಮೆಯಾಗಿದ್ದರಿಂದ ಅಕ್ಟೋಬರ್ 24 ರಂದು ಪಿಸಿ ಪರೀಕ್ಷೆ ನಡೆಸಲು ನಿರ್ಧರಿಸಿದಂತೆ ಬಿಗಿ ಬಂದುಸ್ತಿನಲ್ಲಿ ಯಶಸ್ವಿಯಾಗಿ ನಡೆಸಲಾಯಿತು. ಪರೀಕ್ಷೆ ಇರುವುದು 12 ರಿಂದ 1:30 ವರೆಗೆ, ಆದರೇ ನಗರದ ಸರಕಾರಿ ಕಲಾ ಕಾಲೇಜಿನ ಸೆಂಟರ್ ನಲ್ಲಿ ಪರೀಕ್ಷೆ ಬರೆಯುವ ಮೊದಲು ಉದ್ಯೋಗಕಾಂಕ್ಷಿಗಳು ಬೆಳಿಗ್ಗೆ 9 ರಿಂದಲೇ ಸರದಿ ಸಾಲಿನಲ್ಲಿ ನಿಂತಿದ್ದು, ಪರೀಕ್ಷಾರ್ತಿಗಳ ದಾಖಲೆಯನ್ನು ಪರಿಶೀಲಿಸಿದರು. ಪಿಯುಸಿ ಮುಗಿಸಿದವರು ಪಿಸಿ ಪರೀಕ್ಷೆ ಬರೆಯಲು ಅರ್ಹರು. ಆದರೇ ಅತ್ಯುನ್ನತ ಶಿಕ್ಷಣ ಪಡೆದವರು ಕೂಡ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಹಾಸನದಲ್ಲಿ ಒಟ್ಟು ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳು ಖಾಲಿ ಇದೆ ಎಂದು ತಿಳಿದು ಬಂದಿದೆ. ಕಳೆದ ಪರೀಕ್ಷೆಯಲ್ಲಿ ಇಬ್ಬರೂ ಮತ್ತೊಬ್ಬರ ಹೆಸರಲ್ಲಿ ನಕಲಿ ವ್ಯಕ್ತಿಗಳು ಪರೀಕ್ಷೆ ಬರೆಯುವಾಗ ಸಿಕ್ಕಿ ಬಿದ್ದಿದ್ದರು. ಎಚ್ಚರಿಕೆ ವಹಿಸಿದ ಇಲಾಖೆ ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಬೆರಳಚ್ಚು ಪಡೆದು ಆಧಾರದ ಕಾರ್ಡ್ ಮೂಲಕ ಗುರುತಿಸುವ ಕೆಲಸ ಮಾಡಿದರು.

      ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಪರೀಕ್ಷೆಯನ್ನು ಬರೆದರು. ಹಾಸನ ನಗರ ಒಂದರಲ್ಲೆ 20 ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿತ್ತು. ಸುಮಾರು 10 ಸಾವಿರಕ್ಕಿಂತ ಹೆಚ್ಚು ಜನ ಹಾಸನ ಜಿಲ್ಲೆಯಿಂದ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಾಗಿ ಪರೀಕ್ಷೆ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಕರ್ನಾಟಕ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಂತರ ಸಹಿಷ್ಣುತೆ ಪರೀಕ್ಷೆ, ದೇಹದಾರ್ಢ್ಯತೆ ಪರೀಕ್ಷೆಗಳು ಸೇರಿದಂತೆ ನೇಮಕಾತಿ ಹಂತದಲ್ಲಿ ಇರುತ್ತವೆ. ನಂತರ ವೈದ್ಯಕೀಯ ಪರೀಕ್ಷೆ, ಮೂಲದಾಖಲೆಗಳ ಪರಿಶೀಲನೆ ನಡೆಸಿ ಅಂತಿಮವಾಗಿ ಅಭ್ಯರ್ಥಿ ಆಯ್ಕೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ.

Post a Comment

Previous Post Next Post