ಬೇಲೂರು: ಭಾರತ ೧೦೦ ಕೋಟಿ ಡೋಸ್ ಲಸಿಕೆಯ ಮೈಲುಗಲ್ಲು ಸಾಧಿಸಿದ ಹಿನ್ನೆಲೆ ಹಗರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಕಾರ್ಯಕರ್ತರು, ವೈದ್ಯರು ಹಾಗೂ ಸಿಬ್ಬಂದಿ ವರ್ಗದವರು ಶತಕೋಟಿ ಲಸಿಕಾಕರಣ ಸಂಭ್ರಮವನ್ನು ಸರಳವಾಗಿ ಆಚರಿಸಿ ಸಂಭ್ರಮಿಸಿದರು.
ವೈದ್ಯಾಧಿಕಾರಿ ಡಾ ಶಾಲಿನಿ, ಶತಕೋಟಿ ಲಸಿಕಾಕರಣ ಎಂಬ ಕವಿತೆಯನ್ನು ರಚಿಸಿ ವಾಚಿಸಿದ್ದು ವಿಶೇಷವಾಗಿತ್ತು. ಕರೋನ ಪ್ರಾರಂಭದಲ್ಲಿ ಸಾವಿನ ಮನೆಯಾಗಿತ್ತು ನೋವಿಗೆ ಕೊನೆಯಿಲ್ಲದಂತೆ ಜೀವನ ಅಸ್ತವ್ಯಸ್ತವಾಗಿದ್ದನ್ನ ಸ್ಮರಿಸಿದ ಅವರು, ವಿಜ್ಞಾನಿಗಳ ಆವಿಷ್ಕಾರ ಜ್ಞಾನಕ್ಕೊಂದು ಪುರಸ್ಕಾರ ಎಂಬಂತೆ ಲಸಿಕೆಯ ಆಗಮನವಾಗಿದ್ದು ಜನ ಜೀವನಕ್ಕೊಂದು ಪುನಶ್ಚೇತನ ನೀಡಿದಂತಾಗಿದೆ. ಸರ್ಕಾರ ಅಧಿಕಾರಿಗಳ ಕ್ರಿಯಾಯೋಜನೆ ಹಗಲು ಇರುಳೆನ್ನದೆ ಸಾರ್ವಜನಿಕರಿಗೆ ಆರೋಗ್ಯ ಸಿಬ್ಬಂದಿಗಳು, ಸಂಘಟನೆಗಳು ಸ್ವಯಂಪ್ರೇರಿತರು ಅರಿವು ಮೂಡಿಸಿದ್ದು ಈ ಸಂಭ್ರಮಕ್ಕೆ ಕಾರಣವಾಗಿದೆ ಎಂದರು.
ಶತಕೋಟಿ ಮುಟ್ಟಿದ ಲಸಿಕಾಕರಣ ಹೊಸ ಕ್ರಾಂತಿ ಇದಾಗಿದ್ದು ಏನೇ ಬರಲಿ ಏನೇ ಆಗಲಿ ನಿರಂತರ ಕಾಯಕ ದೇಶದ ಹಿತಕ್ಕಾಗಿ ಕೊನೆಯ ತನಕ ನಾವು ಹೋರಾಡುತ್ತೇವೆ ಎಂದರು. ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತರು, ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಇದ್ದರು.
Tags
ಬೇಲೂರು