ಗ್ರಾಮಕ್ಕೆ ಅಗತ್ಯವಿರುವ ಹಾಗೂ ವಾಲ್ಮೀಕಿ ಸಮುದಾಯಕ್ಕೆ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ : ಸುರಭಿ ರಘು

 ಬೇಲೂರು ಕ್ಷೇತ್ರದ ಜಾವಗಲ್ ಹೋಬಳಿ ನೇರ್ಲಿ ಗೆ ಗ್ರಾಮದಲ್ಲಿ  ಶ್ರೀ ವಾಲ್ಮೀಕಿ ಸಮಿತಿ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ನಡೆದ ಶ್ರೀ ಮಹಶ್ರೀ ವಾಲ್ಮೀಕಿ ಜಯಂತಿಯ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಪೂಜ್ಯ ಶ್ರೀ ಶ್ರೀ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ರಾಜ್ಯ ಒಕ್ಕಲಿಗ ನಿಗಮದ ನಿರ್ದೇಶಕರಾದ ಸುರಭಿರಘು ಉದ್ಘಾಟಿಸಿದರು.


   ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸುರಭಿರಘು ರವರು ಹಳ್ಳಿಗಳಲ್ಲಿ ಒಗ್ಗಟ್ಟು ಇರಬೇಕು ಕರೋನಾದಂತ ಸಂಕಷ್ಟಗಳು ನಮ್ಮ ಎದುರಿಗೆ ಇದ್ದರು ಕೂಡ ಇಂತಹ ಸಮೂಹ ಕಾರ್ಯಕ್ರಮದಲ್ಲಿ ಇಡೀ ಗ್ರಾಮದ ಮಹಿಳೆಯರು ಹಾಗೂ ಗ್ರಾಮಸ್ಥರು ಇಷ್ಟೊಂದು ಸಂಖ್ಯೆಯಲ್ಲಿ ಭಾಗವಹಿಸಿರುವುದು ಈ ಗ್ರಾಮದ ಒಗ್ಗಟ್ಟನ್ನು ಪ್ರದರ್ಶಿಸುತ್ತದೆ, ಈ ಊರಿಗೆ ಬೇಕಾಗಿರುವ ಹಾಗೂ ವಾಲ್ಮೀಕಿ ಸಮುದಾಯಕ್ಕೆ ಸರ್ಕಾರದಿಂದ ಸಿಗುವ  ಸವಲತ್ತುಗಳನ್ನು ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದೆಂದರು,


   ಪರಮಪೂಜ್ಯ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮೀಜಿಗಳು ಆಶೀರ್ವಚನ ನೀಡಿ ನಮ್ಮ ಭವ್ಯ ಭಾರತದ ಪರಂಪರೆ ಉಳಿದಿರುವುದು ನಮ್ಮ ಧರ್ಮಗಂಥಗಳಾದ ರಾಮಾಯಣ ಮಹಾಭಾರತಗಳಿಂದ ಇಂತಹ ಕಾರ್ಯಕ್ರಮಗಳು ಭಾರತ ದೇಶದ

ಭವ್ಯಪರಂಪರೆ ಉಳಿಸುತ್ತವೆ, ಇತ್ತಿಚಿನ ದಿನಗಳಲ್ಲಿ ಯುವಕರು ದುಶ್ಚಟ ಹಾಗೂ ಮೊಬೈಲ್ ದಾಸರಾಗಿದ್ದಾರೆ, ತಂದೆ ತಾಯಿಗಳನ್ನು ವೃದ್ದಾಶ್ರಮಕ್ಕೆ ಕಳಿಸುತ್ತಿದ್ದಾರೆ, ಇದು ಮನರಂಜನೆಗೆ ಮಾಡಿದ ಕಾರ್ಯಕ್ರಮವಲ್ಲ ವಾಲ್ಮೀಕಿ ಮಹರ್ಷಿಗಳ ಆದರ್ಶ ಗುಣಗಳನ್ನು ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಈ ಗ್ರಾಮದ ಮುಂದಿನ ಪೀಳಿಗೆ ಯುವಕರು ಅಲೋಚಿಸಿ ಸಂಸ್ಕರಾಯುತ ಯುವಕರ ತಂಡ ಸಿದ್ದವಾಗಬೇಕೆಂದರು,


  ಈ ಸಂದರ್ಭದಲ್ಲಿ ಶ್ರೀ ಶ್ರೀ ಸಂಜಯ ಕುಮಾರನಂದ ಸ್ವಾಮೀಜಿಗಳು, ಶಾಸಕ ಕೆ ಎಸ್ ಲಿಂಗೇಶ್, ಪೋಲಿಸ್ ಉಪ ನಿರೀಕ್ಷಕರಾದ ಶೋಭಾ ಭರಮಣ್ಣನವರು,ಸಾಹಿತಿ ಚಟ್ನಳ್ಳಿ ಮಹೇಶ್, ಗ್ರಾ ಪಂ ಅಧ್ಯಕ್ಷೆ ವಿಮಲಾ ನಾಗರಾಜು, ಉಪಾಧ್ಯಕ್ಷೆ  ಮೀನಾಕ್ಷಿ ರಾಮಚಂದ್ರ,ಎ ಪಿ ಎಂ ಸಿ ನಿರ್ದೇಶಕ ದೇಶಾಣಿ ರಾಜು, ಬಿ ಜೆ ಪಿ ಯುವ ಮೋರ್ಚ ತಾಲ್ಲೂಕು ಅಧ್ಯಕ್ಷ ನಂದಕುಮಾರ್,,ಸ್ವತಂತ್ರ ಹೋರಾಟಗಾರರಾದ ಎನ್ ಎಮ್  ಬಸವರಾಜು, ವಾಲ್ಮೀಕಿ ಸಮುದಾಯದ ಜಿಲ್ಲಾ ಅಧ್ಯಕ್ಷ  ಬಿ ಎಸ್ ರವಿ    ಸಮುದಾಯದ ಹಿರಿಯರಾದ ಕರಿನಾಯ್ಕ ಸಿದ್ದಮಲ್ಲಾನಾಯ್ಕ, ಕಲ್ಲಳ್ಳಿ ನಾಗರಾಜು, ಎನ್ ಬಿ ಸೋಮಶೇಖರ್ಮಾಜಿ ಗ್ರಾ ಪಂ ಅಧ್ಯಕ್ಷರಾದ ಜಗದೀಶ್, ಕರುಣಾಕರ , ಜಗದೀಶ್ ಹಾಗೂ ಎಲ್ಲಾ ಗ್ರಾ ಪಂ ಸದಸ್ಯರು ಹಾಗೂ ಸಹಕಾರ ಸಂಘದ ನಿರ್ದೇಶಕರು ಹಾಗೂ ಗ್ರಾಮಸ್ಥರು ಉಪಸ್ಥಿತಿಯಿದ್ದರು.

Post a Comment

Previous Post Next Post