ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಪುನರ್ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಶಾಸಕ ಕೆ ಎಸ್ ಲಿಂಗೇಶ್ ಚಾಲನೆ

 ಬೇಲೂರು ಕ್ಷೇತ್ರದ ಜಾವಗಲ್ ಹೋಬಳಿ ಗುಡ್ಡೇನಹಳ್ಳಿ ಗ್ರಾಮದಲ್ಲಿ ನೂತನ ಅಂಗನವಾಡಿ ಕಟ್ಟಡ ಉದ್ಘಾಟನೆ ಹಾಗೂ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಪುನರ್ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಶಾಸಕ ಕೆ ಎಸ್ ಲಿಂಗೇಶ್ ಚಾಲನೆ ನೀಡಿದರು,


ಉದ್ಘಾಟಿಸಿ ಮಾತನಾಡಿದ ಶಾಸಕರು ಗ್ರಾಮೀಣ ಪ್ರದೇಶದಲ್ಲಿ  ಸರ್ಕಾರಿ ಶಾಲೆಗಳು ಉಳಿಯಬೇಕು, ಸರ್ಕಾರಿ ಶಾಲೆಯಲ್ಲಿ ತರಬೇತಿ ಹೊಂದಿದ ಶಿಕ್ಷಕರು ನೇಮಕ ಗೊಂಡಿರುತ್ತಾರೆ,  ಗ್ರಾಮೀಣ ಪ್ರದೇಶದ ಶಾಲೆಯಲ್ಲಿ ಓದಿದ ಸಾಕಷ್ಟು ಜನ ಇವತ್ತು ಉನ್ನತ ಹುದ್ದೆಯಲ್ಲಿ ಇದ್ದಾರೆ, ಖಾಸಗಿ ಶಾಲೆಯಲ್ಲಿ ಓದಿದವರು ಐ ಟೆ ಬಿಟಿ ಅಡಿಯಾಳಗಿದ್ದಾರೆ, ಕನ್ನಡಕ್ಕೆ ಹೆಚ್ಚು ಪ್ರಾಶಸ್ತ ನೀಡಬೇಕು ,ಸರ್ಕಾರಿ ಶಾಲೆಯಲ್ಲಿ    ಸೌಲಭ್ಯಗಳನ್ನು ಉಚಿತವಾಗಿ ನೀಡುತ್ತದೆ ಆದರು ಕೂಡ ಖಾಸಗಿ ಶಾಲಾ ವ್ಯಾಮೋಹ ಇದೆ ಈ ವ್ಯಾಮೋಹವನ್ನು ನಾವುಗಳು ಬಿಡಬೇಕಾಗಿದೆ, ಮಾಜಿ ಮುಖ್ಯಮಂತ್ರಿ ಹೆಚ್, ಡಿ ಕುಮಾರಸ್ವಾಮಿ ಗ್ರಾಮೀಣ ಪ್ರದೇಶದ ಪೋಷಕರ ಮನದಾಳವನ್ನು ಅರಿತು ಹೋಬಳಿಗೊಂದು ಪಬ್ಲಿಕ್‌ ಶಾಲೆ ತೆರೆಯಲು ಸಾಕಷ್ಟು ಪ್ರೋತ್ಸಾಹ ನೀಡಿದ್ದರು ಯಾವುದೇ ಸರ್ಕಾರಗಳಿರಲಿ ಇಂತಹ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಬೇಕೆಂದರು,

 

 ಬಿ ಇ ಓ ಮೋಹನ್ ಕುಮಾರ್ ಮಾತನಾಡಿ ಎಂಟು ವರ್ಷದಿಂದ ಮುಚ್ಚಿದ್ದ ಶಾಲೆ ಇಂದು ಪ್ರಾರಂಭವಾಗಿರುವುದು ಅತ್ಯಂತ ಸಂತೋಷದ ವಿಷಯ ಊರಲ್ಲಿ ಒಂದು ಶಾಲೆ ದೇವಾಲಯ ಇದ್ದಂತೆ ಇಂತಹ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ಗ್ರಾಮದ ಮುಖಂಡರು ನಿಗಾವಹಿಸಿ ಖಾಸಗಿ ಶಾಲಾ ವ್ಯಾಮೋಹ ಪೋಷಕರು ನಿಲ್ಲಿಸಬೇಕು ಸರ್ಕಾರಿ ಶಾಲೆಯಲ್ಲಿ ಎಲ್ಲಾ ಸೌಲಭ್ಯ ಗಳಿದ್ದು ಸರ್ಕಾರಿ ಶಾಲೆಗೆ ಪೋಷಕರು ಸಹಕಾರ ಅತಿಮುಖ್ಯವೆಂದರು,

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ವಿಮಲಾ ನಾಗರಾಜು, ಸಿ ಡಿ ಪಿ ಓ, ಶಂಕರಮೂರ್ತಿ ಇ ಸಿ ಓ ಅಣ್ಣಾಜಿರಾವ್, ಉಪಾಧ್ಯಕ್ಷರಾದ ಮೀನಾಕ್ಷಿ ರಾಮಚಂದ್ರ, ಹಿರಿಯರಾದ ರಾಂ ಪುರ ರಾಜಶೇಖರ್, ರಾಜಪ್ಪ,ಶಿವಪ್ಪನವರುಪ್ರೆಸ್ಚಂದ್ರಶೇಖರ್,ಶಿವನಂಜೇಗೌಡರು,ಶಿವಕುಮಾರ್,ಕುಬೇರಪ್ಪಪನವರು,

ಕಲ್ಲಳ್ಳಿ ನಾಗರಾಜು,ನೇರ್ಲಿಗೆ ಸೋಮಶೇಖರ್ ಗ್ರಾ ಪಂ ಸದಸ್ಯರಾದ ಆನಂದಪ್ಪ ಶಿಕ್ಷಕರಾದ ಸೋಮಶೇಖರ್ ಹಾಗೂ ಈಶ್ವರಪ್ಪನವರು ಹೋಬಳಿಯ ಯುವ ಮುಖಂಡರಾದ ಅರವಿಂದ ಮಧು ,ದಿನೇಶ್, ಗುತ್ತಿಗೆದಾರರಾದ ಬಾಬು  ಹಾಗೂ ಗ್ರಾ ಪಂ ಸದಸ್ಯರು,ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು,ಸಹಕಾರ ಸಂಘದ ನಿರ್ದೇಶಕರುಗಳು ಹಾಗೂ ಗ್ರಾಮಸ್ಥರು ಉಪಸ್ಥಿತಿಯಿದ್ದರು

Post a Comment

Previous Post Next Post