ಬೇಲೂರು ವಿಷ್ಣಸಮುದ್ರ ಕೆರೆ ಭರ್ತಿ: ಜಲಪಾತದಂತೆ ಕೋಡಿ ಮೇಲೆ ಹರಿದ ನೀರು

 ಬೇಲೂರು : 

ಕಳೆದ 6 ದಿನದಿಂದ ಬರುತ್ತಿರುವ ಮಳೆಯು ನಿನ್ನೆ ರಾತ್ರಿ ಹೆಚ್ಚಾದ ಕಾರಣ ಇಲ್ಲಿನ ಇತಿಹಾಸ ಪ್ರಸಿದ್ದ ವಿಷ್ಣುಸಮುದ್ರ ಕೆರೆಯು ಭರ್ತಿಯಾಗಿ ಕೋಡಿ ಮೇಲೆ ನೀರು ಹರಿಯಿತು.

ಸುಮಾರು 92 ಎಕರೆ ಪ್ರದೇಶದಲ್ಲಿ ಇರುವ ಈ ಕೆರೆ ಪಟ್ಟಣದ ಹೃದಯ ಭಾಗದಲ್ಲಿ  ಬೇಲೂರಿನಿಂದ ಸಕಲೇಶಪುರಕ್ಕೆ ತೆರಳುವ ಮಾರ್ಗಮಧ್ಯದಲ್ಲಿದೆ. 

ಕೆರೆ ಭರ್ತಿಯಾಗಿ ಕೋಡಿಮೇಲೆ ಹರಿಯುವ ನೀರು ಚಿಕ್ಕ ಹಳ್ಳದ ಬಂಡೆಗಳ ನಡುವೆ ಹರಿಯುವಾಗ ಜೋಗಜಲಪಾತದಂತೆ ಕಂಡುಬರುವ  ಮನಮೋಹಕ ದೃಶ್ಯ ಕಣ್ತುಂಬಿಸಿಕೊಳ್ಳಲು ಜನ ಬರುತ್ತಾರೆ.

ಕೋಡಿಬಿದ್ದ ನೀರು ಚಿಕ್ಕ ಹಳ್ಳದ ಮೂಲಕ ಯಗಚಿ ನದಿ ಸೇರ್ಪಡೆಯಾಗುತ್ತದೆ.

Post a Comment

Previous Post Next Post