ಬೇಲೂರು / ಅರೇಹಳ್ಳಿ :
ವಿಕಲಚೇತನರ ಬಗ್ಗೆ ಅನುಕಂಪ ವ್ಯಕ್ತಪಡಿಸುವುದಕ್ಕಿಂತ ಬದುಕಿಗೆ ಅನುಕೂಲ ಆಗುವಂತೆ ಅವಕಾಶಗಳನ್ನು ನೀಡುವ ಅಗತ್ಯವಿದೆ ಎಂದು ಅರೇಹಳ್ಳಿ ಸಮುದಾಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಮತ ಹೇಳಿದರು.
ಬೇಲೂರು ತಾ.ಅರೇಹಳ್ಳಿಯಲ್ಲಿ ಮಧುಮೇಹ ದಿನಾಚರಣೆಯನ್ನು ಉದ್ಘಾಟಿಸಲಾಯಿತು |
ಅರೇಹಳ್ಳಿ ಸಮುದಾಯ ಅರೋಗ್ಯ ಕೇಂದ್ರದಲ್ಲಿ ಆಯೋಜಿಸಿದ ವಿಶ್ವ ಮಧುಮೇಹ ಜಾಗೃತಿ ದಿನ ಮತ್ತು ಮಕ್ಕಳ ದಿನಾಚರಣೆಯಲ್ಲಿ ಮಾತನಾಡಿ, ವಿಕಲಚೇತನರ ಕುರಿತು ವೇದಿಕೆಗಳಲ್ಲಿ ಕಾರ್ಯಕ್ರಮಗಳಲ್ಲಿ ಅನುಕಂಪದ ಮಾತುಗಳನ್ನು ಆಡುತ್ತೇವೆ. ಆದರೆ ಅವರಿಗೆ ಬೇಕಾಗಿರುವುದು ಅನುಕಂಪಕ್ಕಿಂತ ಜೀವನ ನಡೆಸಲು ಅಗತ್ಯ ವ್ಯವಸ್ಥೆ. ಈ ಕುರಿತು ಪ್ರತಿಯೊಬ್ಬರೂ ಆಲೋಚಿಸುವ ಅಗತ್ಯವಿದೆ. ವಿಕಲಚೇತನ ಮಕ್ಕಳಿಗೆ ಅಭಿರುಚಿ ಇರುವ ಕ್ಷೇತ್ರದಲ್ಲಿ ಮುನ್ನಡೆಯಲು ಅವರಿಗೆ ಬೆಂಬಲವಾಗಿ ಇರಬೇಕಾಗಿದೆ ಎಂದರು.
ಎನ್.ಸಿ.ಡಿ ಕೌನ್ಸಿಲರ್ ನಟೇಶ್ ಮಾತನಾಡಿ, ಮಧುಮೇಹ ಕಾಯಿಲೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ನಾವು ಸೇವಿಸುವ ಆಹಾರ ಪದ್ಧತಿ ಕಾರಣವಾಗಿದೆ. ಆರೋಗ್ಯಕ್ಕೆ ಪೂರಕವಾಗಿ ಸೀರಿದಾನ್ಯ ಪದಾರ್ಥಗಳನ್ನು ಉಪಯೋಗಿಸಿದರೆ ಅರೋಗ್ಯವನ್ನು ಕಾಪಾಡಿಕೊಳ್ಳಬಹುದು. ಪ್ರತಿದಿನ ವ್ಯಾಯಾಮ ಮಾಡಿ ಹೆಚ್ಚು ಒತ್ತಡವನ್ನು ತೆಗೆದುಕೊಳ್ಳು ಬೇಡಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಅರೇಹಳ್ಳಿ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಯ ಎಲ್ಲಾ ಹಳ್ಳಿಗಳಿಂದ ವಿಕಲಚೇತನ ಮತ್ತು ಬುದ್ಧಿಮಾಂದ್ಯ ಮಕ್ಕಳ ಮತ್ತು ಪೋಷಕರ ಆರೋಗ್ಯ ತಪಾಸಣೆ, ಕೋವಿಡ್ ವ್ಯಾಕ್ಸಿನೇಷನ್, ರಕ್ತದೊತ್ತಡ, ಮಧುಮೇಹ, ಹೆಚ್.ಬಿ. ಪರೀಕ್ಷೆಗಳನ್ನು ಮಾಡಲಾಯಿತು. ವೈದ್ಯಾಧಿಕಾರಿ ಡಾ.ಮಮತ ಎಲ್ಲಾ ವಿಭಾಗದ ಹಾಗೂ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಇದ್ದರು.