ಹಾಸನ: ಜಿಲ್ಲೆಯಲ್ಲಿಂದು 06 ಮಂದಿ ಕೊರೋನಾ ಸೋಂಕಿತರಾಗಿದ್ದಾರೆ, ಸೋಂಕಿ ತರ ಸಂಖ್ಯೆ ಯಲ್ಲಿ ಪ್ರತಿದಿನ ಏರಿ ಳಿತ ಕಾಣುತ್ತಿದೆ.ಅಲ್ಲದೆ ಸಕ್ರೀಯ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿ ರುವುದು ಆತಂಕಕ್ಕೀಡುಮಾಡಿದೆ. ಜಿಲ್ಲೆ ಹಾಗೂ ತಾಲ್ಲೂಕು ಕೊವಿಡ್ ಕೇಂದ್ರ ಸೇರಿದಂತೆ 07 ಮಂದಿ ಕೊವಿಡ್ ಚಿಕಿತ್ಸಾ ಕೇಂದ್ರದಿಂದ ಇಂದು ಡಿಸ್ಚಾರ್ಜ್ ಮಾಡಲಾಗಿದೆ . ಜಿಲ್ಲೆಯಲ್ಲಿ ಇದುವರೆಗೆ 112086 ಕೊರೋನಾ ಪಾಸಿಟಿವ್ ಸೋಂಕಿತರು ಪತ್ತೆಯಾಗಿದ್ದು 107 ಮಂದಿ ಸಕ್ರಿಯ ಸೋಂಕಿತರಿಗೆ ತಾಲ್ಲೂಕು ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಿಎಚ್‌ಒ ಡಾ. ಸತೀಶ್ ತಿಳಿಸಿದ್ದಾರೆ . ಜಿಲ್ಲೆಯಲ್ಲಿ ಇದುವರೆಗೆ 2382 ಮಂದಿ ಕೊ ರೋನಾ ಸೋಂಕಿನಿಂದ ಬಲಿಯಾ ದಂತಾಗಿದೆ