ಮತದಾನಕ್ಕೂ ಮುನ್ನ ಗ್ರಾಮಪಂಚಾಯತಿ ಸದಸ್ಯರಿಗೆ ಹಣ ಹಂಚುವ ಕುರಿತು ಶಾಸಕ ಶಿವಲಿಂಗೇಗೌಡ ಅವರು ಗ್ರಾ.ಪಂ ಸದಸ್ಯನಿಗೆ ಹಣದ ಆಮಿಷ ಹೊಡ್ಡಿದ್ದಾರೆಂದು ಆರೋಪಿಸಲಾಗಿದೆ.
ಶಿವಲಿಂಗೇಗೌಢರು ಈ ಹಿಂದಿನ ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸೋಲಲು ಕಾರಣವೇನು ಎಂಬ ಬಗ್ಗೆಯೂ ವಿವರಿಸಿದ್ದು ಕಾಂಗ್ರೆಸ್ನವರು ಅಂದು ಕುಕ್ಕರ್ ಹಾಗೂ ಹಣವನ್ನು ಹಂಚಿದರು, ನಾವು 10 ಸಾವಿರ ಮಾತ್ರ ಕೊಟ್ಟಿದ್ದೆವು.. ಎಂಬ ಬಗ್ಗೆ ಮಾಹಿತಿಯನ್ನು ಹೇಳುತ್ತಿರುವ ಆಡಿಯೋ ಬಹಿರಂಗವಾಗಿದೆ .
ಅಲ್ಲದೇ ಆಡಿಯೋದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರು ಕುರಿತು ಪ್ರಸ್ತಾಪಿಸಿರುವ ಶಿವಲಿಂಗೇಗೌಡರು ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಹಣ ಹಾಗೂ ಶ್ರೀ ಮಂಜುನಾಥ ಸ್ವಾಮಿ ಚಿತ್ರವಿರುವ ಬೆಳ್ಳಿನಾಣ್ಯ ನೀಡುತ್ತೇವೆ ಗ್ರಾಮ ಪಂಚಾಯಿತಿ ಸದಸ್ಯರಿಗೆ ತಲಾ 1 ಲಕ್ಷ ರೂ ನಗದು ಹಾಗೂ ಬೆಳ್ಳಿನಾಣ್ಯ ನೀಡುವುದು ಖಚಿತವಾಗಿದೆ ಎಂದು ಹೇಳಿದ್ದಾರೆ.
ಕಣಕಟ್ಟೆ ಹೋಬಳಿ ಗ್ರಾಮ ಪಂಚಾಯಿತಿಯ 11 ಸದಸ್ಯರಿಗೆ ತಲಾ 1ಲಕ ರೂ ನೀಡುವ ಕುರಿತು ಮಾತನಾಡಿದ್ದಾರೆ.
ಅಲ್ಲದೆ ಇನ್ನುಳಿದ ಒಬ್ಬ ಸದಸ್ಯನಿಗೆ ನಂತರ ಕೊಡುವುದಾಗಿ ಹೇಳುತ್ತಿರುವ ಧ್ವನಿ ಮುದ್ರಿತ ಆಡಿಯೋ ಬಹಿರಂಗ ವಾಗಿದೆ. ಹಾಗೂ ನೀವು ಮತ ಯಾರಿಗೆ ಹಾಕಿದ್ದೀರಿ ಎಂದು ಗೊತ್ತಾಗುತ್ತದೆ ಎಂಬ ವಿಷಯವನ್ನು ಶಾಸಕರು ಮಾತನಾಡುತ್ತಿದ್ದು ಎಲ್ಲಾ ಮಾಹಿತಿಯು ಆಡಿಯೋ ರೂಪದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಆದರೆ ಇದರಲ್ಲಿ ಶಾಸಕ ಶಿವಲಿಂಗೇಗೌಡ ಅವರೇ ಮಾತನಾಡಿದ್ದಾರೆಯೇ ಅಥವಾ ಮಿಮಿಕ್ರಿ ಮೂಲಕ ಆಡಿಯೋ ಸೃಷ್ಟಿ ಮಾಡಲಾಗಿದೆಯೇ ಎಂಬ ಬಗ್ಗೆ ಗೊಂದಲ ಮುಂದುವರೆದಿದೆ.
ಅದೇನೇ ಇದ್ದರೂ ಜಿಲ್ಲೆಯಲ್ಲಿ ಕದನ ಕುತೂಹಲಕ್ಕೆ ಕಾರಣವಾಗಿರುವ ವಿಧಾನ ಪರಿಷತ್ ಚುನಾವಣೆಯನ್ನು ಎಲ್ಲಾ ಮೂರು ಪಕ್ಷಗಳು ಪ್ರತಿಷ್ಠೆಯಾಗಿ ಪರಿಗಣಿಸಿದ್ದು ಜೆಡಿಎಸ್ ಅತ್ಯಧಿಕ ಬಹುಮತಗಳಿಂದ ಜಯಬೇರಿ ಭಾರಿಸುತ್ತದೆ ಎಂಬ ವಿಶ್ಲೇಷಣೆ ಕೇಳಿ ಬರುತ್ತಿದೆ.
ಆದರೆ ಜೆಡಿಎಸ್ ಪಕ್ಷಕ್ಕೆ ಟಕ್ಕರ್ ಕೊಡಲು ಬಿಜೆಪಿ ಹಾಗೂ ಕಾಂಗ್ರೆಸ್ ಕೈ ಜೋಡಿಸುವ ಸಾಧ್ಯತೆಯೂ ಅಲ್ಲಗಳೆಯುವಂತಿಲ್ಲ.
ಈಗಾಗಲೇ ಜೆಡಿಎಸ್ ಕೆಲ ಭಾಗಗಳಲ್ಲಿ ಪ್ರತಿ ಗ್ರಾ.ಪಂ ಸದಸ್ಯರಿಗೆ 40 ಸಾವಿರ, 3 ಸಾವಿರ ಹಾಗೂ ಒಂದು ಬೆಳ್ಳಿ ನಾಣ್ಯ ಕೊಟ್ಟಿದೆ ಎಂಬ ಸುದ್ದಿಗಳು ಹರಿದಾಡುತ್ತಿರುವುದು ಒಂದೆಡೆಯಾದರೆ ಕಾಂಗ್ರೆಸ್ ಅಭ್ಯರ್ಥಿ ಕೂಡ ಕೆಲ ಭಾಗಗಳಲ್ಲಿ 10 ಸಾವಿರ ಹಾಗು ಒಂದು ಮಾರ್ಮಿಕವಾದ ಟೋಕನ್ ಕೊಟ್ಟು ಬಂದಿದ್ದಾರೆAಬ ಸುದ್ದಿಯು ಕೇಳಿ ಬರುತ್ತಿದೆ.
ಇನ್ನು ಬಿಜೆಪಿ ಅಚ್ಚರಿ ಫಲಿತಾಂಶ ಪಡೆಯುವ ಇರಾದೆಯ ನಡುವೆಯೂ ಅದು ಕೇವಲ 1200ಮತಗಳಿಗೆ ತಲಾ 30ಸಾವಿರ ಕೊಡುತ್ತದೆ ಎಂಬ ಮಾತುಗಳಲ್ಲಿ ಅಲ್ಲಲ್ಲಿ ಕೇಳಿ ಬರುತ್ತಿವೆ.