ಸಕಲೇಶಪುರ :- ತಾಲೂಕಿನ ಹಾನುಬಾಳು ಹೋಬಳಿ ಅಗನಿ ಗ್ರಾಮದ ಸದಾ ಅವರ ಕಾಫೀ ತೂಟದಲ್ಲಿ ಕಾಲು ಮುರಿದ ಜಿಂಕೆಯೊಂದು ಪತ್ತೆಯಾಗಿದ್ದು ಆ ಜಿಂಕೆಗೆ ಸೂಕ್ತ ಚಿಕಿತ್ಸೆ ನೀಡಲು ಅರಣ್ಯ ಅಧಿಕಾರಿಗಳು ಧಾವಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ವಿಚಾರವಾಗಿ ಮಾಧ್ಯಮದವರಿಗೆ ಮಾಹಿತಿ ನೀಡಿರುವ ಗ್ರಾಮಸ್ಥರು, ದಿನಾಂಕ 05-12-2021 ರಂದು ಗ್ರಾಮದ ಸದಾ ಇವರ ತೋಟದಲ್ಲಿ ಕಾಲು ಮುರಿದು ಘಾಸಿಗೊಂಡಿದ್ದ ಜಿಂಕೆಯೊಂದು ಪತ್ತೆಯಾಗಿದ್ದು ಇದನ್ನು ಕಂಡ ಸದಾ ಅವರು ಸ್ಥಳೀಯರ ಸಹಾಯದಿಂದ ಜಿಂಕೆಯನು ತಂದು ಸದಾ ಅವರ ಕೊಟ್ಟಿಗೆ ಇರಿಸಿ ಕಳೆದ 8 ದಿನಗಳಿಂದ ಜಿಂಕೆ ಮರಿಯನ್ನು ಆರೈಕೆ ಮಾಡುತ್ತಿದ್ದಾರೆ.
ಈ ಜಿಂಕೆಗೆ ಸೂಕ್ತ ಚಿಕಿತ್ಸೆ ಹಾಗೂ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇರುವುದರಿಂದ ಸಕಲೇಶಪುರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಚಾರ ತಿಳಿಸಿದರು ಇವರಿಗೆ ಯಾವುದೇ ಅಧಿಕಾರಿಗಳು ಇತ್ತ ಸುಳಿದಿಲ್ಲ, ಆದ್ದರಿಂದ ಸಂಬಂಧಿಸಿದ ಅರಣ್ಯ ಇಲಾಖಾಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿ ಜಿಂಕೆ ಮರಿಗೆ ಸೂಕ್ತ ಚಿಕಿತ್ಸೆ ಕೊಡಿಸುವುದರೊಂದಿಗೆ ಅದರ ಜೀವ ಉಳಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Tags
ಸಕಲೇಶಪುರ