ಸಕಲೇಶಪುರ: ಅಕ್ರಮ ಮದ್ಯ ಮಾರಾಟ ಹೆಚ್ಚಾಗಿದ್ದರಿಂದ ರೊಚ್ಚಿಗೆದ್ದ ಗ್ರಾಮಸ್ಥರು, ಮದ್ಯದ ಪ್ಯಾಕೆಟ್ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಸಕಲೇಶಪುರ ತಾಲೂಕಿನ ಬ್ಯಾಡರಜಗಲಿಯಲ್ಲಿ ನಡೆದಿದೆ.
ಅಕ್ರಮ ಮದ್ಯ ಸೇವಿಸಿ ಕಳೆದ 15 ದಿನಗಳ ಹಿಂದೆ ಗ್ರಾಮದ ಚನ್ನಯ್ಯ ಎಂಬ ವ್ಯಕ್ತಿ ಮೃತಪಟ್ಟಿದ್ದರು. ಹೀಗಾಗಿ, ಮದ್ಯ ಮಾರಾಟ ಮಾಡದಂತೆ ಗ್ರಾಮದ ಬೈರಯ್ಯ ಹಾಗೂ ಮುತ್ತಣ್ಣ ಎಂಬುವವರಿಗೆ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದರು.
ಆದರೂ ಕೂಡ ಮುತ್ತಣ್ಣ ಎಂಬುವವರು ನಿನ್ನೆ ರಾತ್ರಿ ಮದ್ಯದ ಪ್ಯಾಕೆಟ್ಗಳನ್ನು ಗ್ರಾಮಕ್ಕೆ ತರುತ್ತಿದ್ದಾಗ, ಅವುಗಳನ್ನು ವಶಪಡಿಸಿಕೊಂಡು ನಡುರಸ್ತೆಯಲ್ಲಿ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.