ಗುತ್ತಿಗೆದಾರರು ಹೇಳಿದಂತೆ ಸರ್ಕಾರ ನಡೆಯುತ್ತಿದೆಯೇ : ಎ.ಟಿ.ರಾಮಸ್ವಾಮಿ

ಬೆಳಗಾವಿ: 'ಗುತ್ತಿಗೆದಾರರು ಹೇಳಿದಂತೆ ಸರ್ಕಾರ ನಡೆಯುತ್ತಿದೆಯೇ' ಎಂದು ಜೆಡಿಎಸ್‌ನ ಎ.ಟಿ.ರಾಮಸ್ವಾಮಿ ಮಂಗಳವಾರ ಕಟುವಾಗಿ ಪ್ರಶ್ನಿಸಿದರು.


ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ರಾಮಸ್ವಾಮಿ ಪ್ರಶ್ನೆಗೆ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು, 'ಅರಕಲಗೂಡು ಕ್ಷೇತ್ರದ ಮಲ್ಲಿಪಟ್ಟಣ ಏತ ನೀರಾವರಿ ಯೋಜನೆಯ ಕಾಮಗಾರಿಯನ್ನು 2022ರ ಮೇ ಒಳಗೆ ಪೂರ್ಣಗೊಳಿಸುವುದಾಗಿ ಗುತ್ತಿಗೆದಾರರು ಒಪ್ಪಿ ಪರಿಷ್ಕೃತ ಪಟ್ಟಿ ಸಲ್ಲಿಸಿದ್ದಾರೆ' ಎಂದರು.

ಈ ಮಾತಿನಿಂದ ಅಸಮಾಧಾನಗೊಂಡ ರಾಮಸ್ವಾಮಿ, 'ಸರ್ಕಾರ ಹೇಳಿದಂತೆ ಗುತ್ತಿಗೆದಾರರು ಕೇಳಬೇಕಲ್ಲ' ಎಂದು ಪ್ರಶ್ನಿಸಿದರು

Post a Comment

Previous Post Next Post