ಅಡ್ಡಹೊಳೆ-ಸಕಲೇಶಪುರ-ಹಾಸನ ನಡುವಿನ ರಸ್ತೆ ದುರಸ್ತಿ ಮಾಡುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅಧಿಕಾರಿಗಳಿಗೆ ಸೂಚನೆ

ಅಡ್ಡಹೊಳೆ-ಸಕಲೇಶಪುರ-ಹಾಸನ ನಡುವಿನ ರಾ.ಹೆ.75ನ್ನು ಕೂಡಲೇ ದುರಸ್ತಿ ಮಾಡುವಂತೆ ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ರಾಜ್ಯ ಬಿಜೆಪಿ ಅಧ್ಯಕ್ಷ ಮತ್ತು ಸಂಸತ್ ಸದಸ್ಯ ನಳಿನ್ ಕುಮಾರ್ ಕಟೀಲು, ಮೈಸೂರು ಸಂಸತ್ ಸದಸ್ಯ ಪ್ರತಾಪಸಿಂಹ ಬುಧವಾರ ದೆಹಲಿಯಲ್ಲಿ ಸಚಿವರನ್ನು ಭೇಟಿ ಮಾಡಿ ರಾಷ್ಟ್ರೀಯ ಹೆದ್ದಾರಿಯ ದುರಸ್ತಿ ಮಾಡಬೇಕಾದ ಆವಶ್ಯಕತೆಯನ್ನು ಮನವರಿಕೆ ಮಾಡಿ ಕೊಟ್ಟರು.ಸಂಸತ್ ಸದಸ್ಯರಿಬ್ಬರು ಸಚಿವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

Post a Comment

Previous Post Next Post