ಅರಕಲಗೂಡು: ತಾಲೂಕು ದಂಡಾದಿಕಾರಿಗಳಾಗದ ಶ್ರೀನಿವಾಸ್ ಕೆ ಆರ್ .ಇವರು 2014 ನೇ ಸಾಲಿನ ಕೆ.ಎ.ಎಸ್ ಬ್ಯಾಚ್ನವರಾಗಿದ್ದು ಈ ಹಿಂದೆ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು. ಮತ್ತು ಹೊಳೆನರಸೀಪುರ ಗಳಲ್ಲಿ ತಾಸಿಲ್ದಾರ ಆಗಿ ಕರ್ತವ್ಯ ನಿರ್ವಹಿಸಿರುತ್ತಾರೆ..
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಲಾಖೆಗೆ ಸಂಬಂಧಿಸಿದಂತಹ ಕೆಲಸಗಳಿಗೆ ಸಾರ್ವಜನಿಕರಿಗೆ ಕೆಲಸ ಮಾಡಿಕೊಡಲು ಸದಾ ಸಿದ್ಧನಗಿರುತ್ತೇನೆ,ಪೌತಿ ಖಾತೆ .ಪಹಣಿ ತಿದ್ದುಪಡಿ. ಪಿಂಚಣಿ. ಹಾಗೂ ಇತರ ಸೇವೆಗಳನ್ನು ಪಡೆಯಲು ಸಾರ್ವಜನಿಕರು ಅಗತ್ಯ ದಾಖಲಾತಿಗಳೊಂದಿಗೆ ಕಚೇರಿ ಹಾಗೂ ಸಂಬಂಧಪಟ್ಟ ನಾಡ ಕಚೇರಿಗಳಿಗೆ ಅರ್ಜಿ ಸಲ್ಲಿಸಿ ಸೂಕ್ತ ಪರಿಹಾರ ಪಡೆದುಕೊಳ್ಳಬಹುದು.
ಇದಕ್ಕೆ ಸಂಬಂಧಿಸಿದಂತೆ ತಾಸಿಲ್ದಾರ್ ಅವರು ಕಚೇರಿ ವೇಳೆಯಲ್ಲಿ ಸಂಜೆ 4:00 ಗಂಟೆಯಿಂದ 5:30 ಗಂಟೆಯೊಳಗೆ ತುರ್ತು ಸಂದರ್ಭಗಳನ್ನು ಹೊರತುಪಡಿಸಿ ತಾಲೂಕು ಕಚೇರಿಯಲ್ಲಿ ಸಾರ್ವಜನಿಕರು ಭೇಟಿ ಮಾಡಬಹುದು ಎಂದು ತಿಳಿಸಿದರು..
ಹಾಗೂ ಎಲ್ಲಾ ಹೋಬಳಿ ಉಪ ತಾಸಿಲ್ದಾರ್/ರಾಜಸ್ವ ನಿರೀಕ್ಷಕರು. ಗ್ರಾಮ ಲೆಕ್ಕಿಗರು. ಹೋಬಳಿಯ ನಾಡಕಛೇರಿಗಳಲ್ಲಿ ಲಭ್ಯವಿರುತ್ತಾರೆ. ಇದನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು..
ಈ ಸಂದರ್ಭದಲ್ಲಿ ತಾಲೂಕು ಕಚೇರಿಗೆ ಬರುವ ಸಾರ್ವಜನಿಕರಿಗೆ ಶೌಚಾಲಯ ವ್ಯವಸ್ಥೆ ಸರಿಯಿಲ್ಲದ ಕಾರಣ ಸ್ಥಳಕ್ಕೆ ಭೇಟಿ ನೀಡಿ ಇರುವ ಶೌಚಾಲಯ ಪರಿಶೀಲಿಸಿ ಮೂರು ದಿನಗಳಲ್ಲಿ ಸೂಕ್ತ ಪರಿಹಾರ ವ್ಯವಸ್ಥೆಯನ್ನು ಕಲ್ಪಿಸಿಕೊಡುತ್ತೇವೆ ಎಂದು ಮಾಧ್ಯಮಗಳೊಂದಿಗೆ ಮಾತನಾಡಿದರು..
Tags
ಅರಕಲಗೂಡು