ಕೋವಿಡ್ ನಿಂದ ಮೃತರಾದ ಕುಟುಂಬಗಳಿಗೆ ಪರಿಹಾರ ಧನದ ಚೆಕ್ ವಿತರಣೆ...

ಅರಸೀಕೆರೆ :- ತಾಲೂಕಿನ ಕಣಕಟ್ಟೆ ಹೋಬಳಿ ಜೆಸಿಪುರ ಗ್ರಾಮದ ನಾಸೀರ್ ಅಹಮದ್ ಮತ್ತು ಶ್ರೀಮತಿ ಸಂಸದ ಬಾನು ಅವರಿಗೆ ಒಂದು ಲಕ್ಷ ರೂಪಾಯಿಯ ಪರಿಹಾರ ಧನದ ಚೆಕ್ ಅನ್ನು ಕ್ಷೇತ್ರ ಶಾಸಕರಾದ ಕೆ ಎಂ ಶಿವಲಿಂಗೇಗೌಡ ಇಂದು ವಿತರಿಸಿದರು.
 ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕರು,ಕೇಂದ್ರ ಮತ್ತು ರಾಜ್ಯ ಸರ್ಕಾರದ ವತಿಯಿಂದ ಬಿ.ಪಿ.ಎಲ್ ಕುಟುಂಬಗಳಿಗೆ ತಲಾ 1.00 ಲಕ್ಷ, ಎ.ಪಿ.ಎಲ್ ಕುಟುಂಬಗಳಿಗೆ ತಲಾ 50 ಸಾವಿರ ಪರಿಹಾರ ಧನ ಬಿಡುಗಡೆ  ಮಾಡುತ್ತಿದೆ,ಕೋವಿಡ್‌ನಿಂದ ನನ್ನ  ಕ್ಷೇತ್ರದಲ್ಲಿ ಸುಮಾರು207 ಬಿ.ಪಿ.ಎಲ್ ಮತ್ತು 156 ಎ.ಪಿ.ಎಲ್ ಕುಟುಂಬದ ವ್ಯಕ್ತಿಗಳು ಮರಣ ಹೊಂದಿದ್ದಾರೆ... ಆ ಸಂದರ್ಭದಲ್ಲಿ ನಾನು ಈ ಕುಟಂಬಗಳನ್ನು ಗುರುತಿಸಿ ತಲಾ 10 ಸಾವಿರ ಹಣ ಮತ್ತು ಆಹಾರ ಕಿಟ್ ವಿತರಣೆ ಮಾಡಿದ್ದೆ, ಇದೊಂದು ರಾಷ್ಟ್ರೀಯ ವಿಪತ್ತು, ಮೃತಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುತ್ತವೆ ಸರ್ಕಾರದ ವತಿಯಿಂದಲೂ ಹೆಚ್ಚಿನ ಪ್ರಮಾಣದ ಹಣ ಬಿಡುಗಡೆ ಮಾಡಬೇಕೆಂದು ಅನೇಕ ಬಾರಿ ಸದನದ ಒಳಗೂ ಮತ್ತು ಹೊರಗೂ ಸರ್ಕಾರವನ್ನೂ ಒತ್ತಾಯಿಸಿದ್ದರ ಪರಿಣಾಮ ಇಂದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪರಿಹಾರ ಬಿಡುಗಡೆ ಮಾಡಿದ್ದು, ಇದರಿಂದ ಸದರಿ ಕುಟುಂಬಗಳಿಗೆ‌ ಅನುಕೂಲವಾಗಲಿದೆ ಎಂದರು.
ಕಣಕಟ್ಟೆ ಹೋಬಳಿ ಕಂದಾಯ ನಿರೀಕ್ಷಕ ಶಾಂತಕುಮಾರ್, ಸ್ಥಳೀಯ ಮುಖಂಡರಾದ ಜೆ.ಸಿ.ಪುರ ಮಲ್ಲಿಕಣ್ಣ, ಮಂಜಣ್ಣ ಚಿಲ್ಕಹಲ್ಕೂರು ಸಿದ್ದಪ್ಪ, ರಾಂಪುರ ಗ್ರಾ.ಪಂ.ಅಧ್ಯಕ್ಷ ಸಂತೋಷ, ಮಾಜಿ ಅಧ್ಯಕ್ಷ ಸುರೇಶ, ಶಶಿವಾಳ ಗಂಗಾಧರ್  ಮತ್ತಿತರು ಹಾಜರಿದ್ದರು.

Post a Comment

Previous Post Next Post