ಕನ್ನಡ ಧ್ವಜಕ್ಕೆ ಬೆಂಕಿ: ಬೇಲೂರಿನಲ್ಲಿ ಜಯಕರ್ನಾಟಕದಿಂದ ಪ್ರತಿಭಟನೆ

 ಬೇಲೂರು: ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿದ ಶಿವಸೇನೆ ಕಾರ್ಯಕರ್ತರ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಾಲೂಕು ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ಪಂಜಿನ ಮೆರವಣಿಗೆ ನಡೆಸಿದರು.

ಬೇಲೂರು ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿದ ಶಿವಸೇನೆ ಕಾರ್ಯಕರ್ತರ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ತಾಲೂಕು ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರುಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪಂಜು ಹಿಡಿದು ಪ್ರತಿಭಟಿಸುತ್ತಿರುವುದು

ಪಟ್ಟಣದ ಪ್ರವಾಸಿ ಮಂದಿರದಿಂದ ಬಸವೇಶ್ವರ ವೃತ್ತಕ್ಕೆ ಪಂಜಿನೊಂದಿಗೆ ಮೆರವಣಿಗೆ ತೆರಳಿ ಮಹಾರಾಷ್ಟç ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ಸಂದರ್ಭ ಮಾತನಾಡಿದ ಜಯಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಎಸ್.ಎಂ.ರಾಜು, ಕೊಲ್ಹಾಪುರದಲ್ಲಿ ಶಿವಸೇನಾ ಕಾರ್ಯಕರ್ತರು ಕರ್ನಾಟಕ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿ ಕನ್ನಡದ ಬಾವುಟ ಸುಟ್ಟು ಹಾಕಿರುವುದನ್ನು ತಾಲ್ಲೂಕು ಜಯ ಕರ್ನಾಟಕ ಖಂಡಿಸುತ್ತದೆ.

ಕರ್ನಾಟಕ-ಮಹಾರಾಷ್ಟç ಗಡಿಯಲ್ಲಿ ಕನ್ನಡಿಗರು ಮತ್ತು ಮರಾಠಿಗರು ಸೌಹಾರ್ಧಯುತವಾಗಿ ಜೀವನ ನಡೆಸುತಿದ್ದಾರೆ. ಆದರೆ ಎಂಇಎಸ್‌ನವರು ಇಲ್ಲಿ ಗಲಾಟೆ, ಗದ್ದಲ ಸೃಷ್ಠಿಸಿ ಶಾಂತಿ ಕದಡಲು ಯತ್ನಿಸುತಿದ್ದು, ಅವರ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಎಂ.ಕೆ.ಆರ್.ಸೋಮೇಶ್ ಮಾತನಾಡಿ, ಬೆಳಗಾವಿ ಕರ್ನಾಟಕದ ಆಸ್ತಿ, ಕನ್ನಡಿಗರ ಆಸ್ತಿ ಕಸಿಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ಎಂಇಎಸ್‌ನವರ ಆಟ ಇಲ್ಲಿ ನಡೆಯೋದಿಲ್ಲ. ಕನ್ನಡಿಗರಾದ ನಾವು ನಾಡು, ನುಡಿ, ನೆಲ, ಜಲಕ್ಕಾಗಿ ಪ್ರಾಣ ಬೇಕಾದರೂ ಕೊಡುತ್ತೇವೆ ಹೊರತು ಬೆಳಗಾವಿಯನ್ನು ಬಿಟ್ಟು ಕೊಡುವುದಿಲ್ಲ. ಅಲ್ಲದೆ ಎಂಇಎಸ್ ಮಹಾ ಮೇಳವ ನಡೆಸುತಿದ್ದವರ ಮೇಲೆ ಮಸಿ ಹಾಕಿದ ಕನ್ನಡಪರ ಸಂಘಟನೆ ಹೊರಾಟಗಾರ ದೀಪಕ್ ದೇಸಾಯಿ ವಿರುದ್ಧ ಬೆಳಗಾವಿ ಪೊಲೀಸರು ದಾಖಲಿಸಿರುವ ಪ್ರಕರಣವನ್ನು ರಾಜ್ಯ ಸರ್ಕಾರ ವಾಪಸ್ ಪಡೆದು ಕನ್ನಡಿಗರಿಗೆ ನ್ಯಾಯ ದೊರಕಿಸಿ ಕೊಡಬೇಕು. ಇಲ್ಲದಿದ್ದಲ್ಲಿ ರಾಜ್ಯಾದಾಧ್ಯಂತ ಜಯ ಕರ್ನಾಟಕ ಸಂಘಟನೆಯಿಂದ ಉಗ್ರವಾಗಿ ಪ್ರತಿಭಟಿಸ ಬೇಕಾಗುತ್ತದೆ ಎಂದು ಎಚ್ಚರಿಸಿದರು. 

ಪ್ರತಿಭಟಿನೆಯಲ್ಲಿ ಜಯಕರ್ನಾಟಕ ಸಂಘಟನೆ ತಾಲೂಕು ಕಾರ್ಯಾಧ್ಯಕ್ಷ ಬಿ.ಎಲ್.ಲಕ್ಷö್ಮಣ್, ಜಿಲ್ಲಾ ಉಪಾಧ್ಯಕ್ಷ ಶ್ರೇಯಸ್, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ತಾಲೂಕು ಉಪಾಧ್ಯಕ್ಷ ಗುರುಮೂರ್ತಿ, ವಿದ್ಯಾರ್ಥಿ ಘಟಕದ ಅಧ್ಯಕ್ಷ ಶ್ರೇಯಸ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಕ್ಮಲ್, ಉಪಾಧ್ಯಕ್ಷ ಮುಜಮಿಲ್, ಯುವ ಘಟಕದ ಉಪಾಧ್ಯಕ್ಷ ಕುಮಾರ್, ಮುಖಂಡರಾದ ಹನುಮಂತು, ಯೋಗೀಶ್, ಕೃಷ್ಣಯ್ಯ, ಧರ್ಮಯ್ಯ, ಪ್ರದೀಪ್ ಇತರರಿದ್ದರು.


Post a Comment

Previous Post Next Post