ಬೇಲೂರು ಪುರಸಭೆಗೆ ಐವರು ನಾಮನಿರ್ದೇಶನ ಸದಸ್ಯರು

 ಬೇಲೂರು: ಇಲ್ಲಿನ ಪುರಸಭೆಗೆ ರಾಜ್ಯ ಸರ್ಕಾರ ಐದು ಜನರನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.

ಬೇಲೂರು ಪುರಸಭೆಗೆ ನಾಮನಿರ್ದೇಶನಗೊಂಡಿರುವ ಸದಸ್ಯರುಗಳು

೨೩ ವಾರ್ಡ್ ಗಳಿಗೆ ಕಳೆದ ೫ ತಿಂಗಳ ಹಿಂದೆ ಚುನಾವಣೆ ನಡೆದಿತ್ತಾದರೂ ಸರ್ಕಾರ ನಾಮ ನಿರ್ದೇಶನ ಸದಸ್ಯರನ್ನು ನೇಮಕ ಮಾಡಿರಲಿಲ್ಲ. ನಾಮ ನಿರ್ದೇಶನ ಸದಸ್ಯರಾಗಿ ಎಪಿಎಂಸಿ ಮಾಜಿ ಸದಸ್ಯ ಎಸ್.ರವಿ.(ಪೈಂಟ್ ರವಿ) ಪುರಸಭೆ ಮಾಜಿ ಅಧ್ಯಕ್ಷ ಎಚ್.ಎಂ.ದಯಾನಂದ್, ಬಿ.ಎಂ.ಜಗದೀಶ್, ಪುರಸಭೆ ಮಾಜಿ ಸದಸ್ಯ ಬಿ.ಎಸ್.ಮಂಜುನಾಥ್ ಹಾಗೂ ಅಶ್ವಿನಿಶರತ್ ಎಂಬವರನ್ನು ನೇಮಕ ಮಾಡಿದೆ.

ಪತ್ರಿಕೆಯೊಂದಿಗೆ ಮಾತನಾಡಿದ ನೂತನ ಪುರಸಭೆ ನಾಮಿನಿ ಸದಸ್ಯ ಪೈಂಟ್ ರವಿ, ಭಾರತೀಯ ಜನತಾ ಪಾರ್ಟಿ ದೇಶದ ಕಟ್ಟಕಡೆಯ ವ್ಯಕ್ತಿಯನ್ನು ಸಮಾನ ಮನಸ್ಸಿನಲ್ಲಿ ಗುರುತಿಸಲ್ಪಡುತ್ತದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಇದಕ್ಕೆ ನಮ್ಮ ಪಕ್ಷದ ರಾಷ್ಟ್ರೀಯ ಹಾಗೂ ರಾಜ್ಯದ ಹಾಗೂ ಜಿಲ್ಲೆಯ ಮತ್ತು ತಾಲೂಕಿನ ಎಲ್ಲಾ ನಾಯಕರುಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಾನು ಕಳೆದ ಅವಧಿಯಲ್ಲಿ ಸದಸ್ಯನಾಗಿದ್ದು ಅಲ್ಲಿನ ಅನುಭವವಿದೆ. ಬೇಲೂರು ಪಟ್ಟಣದಾದ್ಯಂತ ೨೩ ವಾರ್ಡ ಗಳಲ್ಲಿ ಸಮಸ್ಯೆಗಳ ಮಹಾಪೂರವೇ ಇದೆ. ಪಟ್ಟಣದಾದ್ಯಂತ ನಮ್ಮ ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರ ಮೂಲಕ ಸಮಸ್ಯೆಗಳನ್ನು ತಿಳಿದು ಪುರಸಭೆ ಗಮನ ಸೆಳೆಯುವು ದರೊಂದಿಗೆ ಹಾಗೂ ನಮ್ಮ ಸರ್ಕಾರದಿಂದ ಬರುವಂತ ಅನುದಾನವನ್ನು ಪಟ್ಟಣದ ೨೩ ವಾರ್ಡ್ಗಳಿಗೆ ಅಭಿವೃದ್ಧಿಗಳಿಗೆ ಸಮಾನ ಹಂಚಿಕೆಯಾಗುವಂತೆ ಅಧಿಕಾರಿಗಳ ಗಮನ ಸೆಳೆಯಲಾಗುವುದು ಎಂದು ಹೇಳಿದರು.


Post a Comment

Previous Post Next Post