ಎತ್ತಿನಹೊಳೆ ವಲಸೆ ಕಾರ್ಮಿಕರಿಂದ ತಡರಾತ್ರಿಯಲ್ಲಿ ಫಲೇರಿಯಾ-ಮಲೇರಿಯಾ ರಕ್ತಲೇಪನ ಸಂಗ್ರಹ: ಒಬ್ಬರಲ್ಲಿ ರೋಗದ ಶಂಕೆ

ಬೇಲೂರು : ತಾಲ್ಲೂಕಿನ ಕೆಸಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದ ಪಡುವಳು ಉಪ ಕೇಂದ್ರದ ಡಣಾಯಕನಹಳ್ಳಿ ಗ್ರಾಮದ ಎತ್ತಿನಹೊಳೆ ಯೋಜನೆಯ ವಲಸೆ ಕಾರ್ಮಿಕರಿಂದ ರಾತ್ರಿವೇಳೆ ಫಲೇರಿಯಾ ಹಾಗೂ ಮಲೇರಿಯಾ ರೋಗದ ರಕ್ತಲೇಪನ ಸಂಗ್ರಹಿಸಲಾಯಿತು.

ಡಣಾಯಕನಹಳ್ಳಿ ಗ್ರಾಮದವರು ಕೂಲಿಕಾರ್ಮಿಕರಾಗಿದ್ದು ಇವರು ಕತ್ತಲೆಯ ನಂತರ ಗ್ರಾಮಕ್ಕೆ ಬರುವುದರಿಂದ ರಾತ್ರಿ ಸುಮಾರು ೧೧ ಗಂಟೆ ಸಮಯದಲ್ಲಿ ೧೦೬ ಸ್ಲೆöÊಡ್ ಮಾದರಿ ರಕ್ತವನ್ನು ಸಂಗ್ರಹಿಸಲಾಗಿದ್ದು ಇದರಲ್ಲಿ ಒಬ್ಬರ ರಕ್ತದ ಪರೀಕ್ಷೆ ವೇಳೆ ಆನೆಕಾಲು ರೋಗ ಇರುವ ಕುರಿತು ಸಂಶಯಾಸ್ಪದವಾಗಿ ಕಂಡುಬಂದಿದ್ದು ಹೆಚ್ಚಿನ ವರದಿಗಾಗಿ ಲ್ಯಾಬ್‌ಗೆ ಕಳುಹಿಸಿಕೊಡಲಾಗಿದೆ.

ರಕ್ತ ಸಂಗ್ರಹದ ಸಂದರ್ಭ ಗ್ರಾಮಸ್ಥರಿಗೆ ಸ್ವಚ್ಛತೆ ಕುರಿತು ಕೆಲವೊಂದು ಸಲಹೆ ಹಾಗೂ ತಿಳುವಳಿಕೆ ನೀಡಲಾಯಿತು. ಈ ವೇಳೆ ಡಾ.ಸಂಜೀವ ಅವರೊಂದಿಗಿನ ತಂಡದಲ್ಲಿ ಹೆಚ್‌ಐಒ ರುದ್ರಯ್ಯ, ಪ್ರಯೋಗಶಾಲಾ ತಂತ್ರಜ್ಞ ಶಂಭುಗೌಡ, ಶಿವನಾಯಕ್, ಹೆಚ್‌ಐಒ ಪಿಹೆಚ್‌ಸಿಒಗಳಾದ ಜಯಲಕ್ಷಿö್ಮÃ, ಮಲ್ಲಿಗಮ್ಮ, ತನುಜಾ, ಆಲೋನ ಆಶಾಕಾರ್ಯಕರ್ತೆ ಲಕ್ಷಿö್ಮÃ ಇತರರು ಇದ್ದರು.



Post a Comment

Previous Post Next Post