ಬೆಂಗಳೂರು: ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಪುತ್ರ ನಿಶಾಂತ್ ವಿರುದ್ಧ ನಕಲಿ ವಿಡಿಯೋ ಒಂದನ್ನ ಸೃಷ್ಟಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿರುವ ಆರೋಪ ಕೇಳಿಬಂದಿದೆ. ಈ ಕೇಸ್ ಸಂಬಂಧ ಈಗ ಆಡುಗೋಡಿಯ ಸೈಬರ್ ಕ್ರೈಂ ಪೊಲೀಸರು ಪ್ರಮುಖ ಆರೋಪಿ ರಾಹುಲ್ ಭಟ್ ಎಂಬುವರನ್ನು ಅರೆಸ್ಟ್ ಮಾಡಿದ್ದಾರೆ. ರಾಹುಲ್ ಭಟ್ ಸೇರಿ ಐವರನ್ನು ವಶಕ್ಕೆ ಪಡೆದಿರೋ ಸಿಸಿಬಿ ಪೊಲೀಸರು ಬೆಂಗಳೂರಿನಲ್ಲೇ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ರಾಹುಲ್ ಭಟ್ ನಗರದ ಪ್ರತಿಷ್ಠಿತ ಜ್ಯೋತಿಷಿ ಚಂದ್ರಶೇಖರ್ ಸ್ವಾಮೀಜಿ ಮಗ ಎಂದು ತಿಳಿದು ಬಂದಿದೆ. ನಗರದ ಆರ್‌ಟಿ ನಗರದಲ್ಲಿ ಸ್ವಾಮೀಜಿ ಮನೆ ಇದೆ. ಮಗ ಅರೆಸ್ಟ್ ಆಗುತ್ತಿದ್ದಂತೆಯೇ ಸ್ವಾಮೀಜಿ ಕಾನೂನು ತಜ್ಞರ ಮೊರೆ ಹೋಗಿದ್ದಾರೆ.
ಸದ್ಯ ಮನೆ ಬಿಟ್ಟು ಹೋದ ಸ್ವಾಮೀಜಿ ಮಗನನ್ನು ಬಿಡಿಸೋಕೆ ಕಾನೂನು ತಜ್ಞರ ಮೊರೆ ಹೋಗಿದ್ದಾರೆ. ಹೇಗಾದರೂ ಮಾಡಿ ಮಗನನ್ನು ಬಿಡಿಸಲೇಬೇಕೆಂದು ಮುಂದಾಗಿದ್ದಾರೆ. ಇನ್ನೊಂದೆಡೆ ರಾಹುಲ್ ಭಟ್‌ನನ್ನು ವಿಚಾರಣೆಗೆ ಒಳಪಡಿಸಿರೋ ಪೊಲೀಸ್ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.