ರಾಮನಗರ: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ನ ಮಹತ್ವದ 10 ದಿನಗಳ ಪಾದಯಾತ್ರೆಗೆ ಚಾಲನೆ ಸಿಕ್ಕ ಬೆನ್ನಲ್ಲೇ ಆರಂಭಿಕ ಆಘಾತವಾಗಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಅನಾರೋಗ್ಯದ ಕಾರಣದಿಂದ ಪಾದಯಾತ್ರೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ನಿನ್ನೆಯಿಂದ ಕೆಮ್ಮು, ನೆಗಡಿ, ಮತ್ತು ಜ್ವರದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆದು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಇಂದು ಪಾದಯಾತ್ರೆಗೆ ಅಧಿಕೃತ ಚಾಲನೆ ಸಿಕ್ಕ ನಂತರ ಕೆಲ ಹೊತ್ತು ಹೆಜ್ಜೆ ಹಾಕಿದ್ದಾರೆ.
ಭೊಜನ ವಿರಾಮದ ನಂತರ ವಿಶ್ರಾಂತಿ ಪಡೆದ ಅವರು ಅನಾರೋಗ್ಯದ ಕಾರಣದಿಂದ ಇವತ್ತಿನ ಪಾದಯಾತ್ರೆಯಿಂದ ವಾಪಸ್ ಆಗಿದ್ದಾರೆ. ನಾಳೆ ಪುನಃ ಪಾದಯಾತ್ರೆಗೆ ಮರಳಲಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.