ಬೇಲೂರು ಬಳಿ ರಸ್ತೆಸಾರಿಗೆ ಬಸ್ ಕಾರಿನ ನಡುವೆ ಅಪಘಾತ: ಐವರ ಸಾವು

ವರದಿ: ಅನಂತರಾಜೇಅರಸು

ಬೇಲೂರು : ತಾಲ್ಲೂಕಿನ ಹಾಸನ ರಸ್ತೆಯ ಸಂಕೇನಹಳ್ಳಿ ಗ್ರಾಮದ ಬಳಿ ಹಾರೋಹಳ್ಳಿ ತಿರುವಿನಲ್ಲಿ ರಸ್ತೆಸಾರಿಗೆ ಸಂಸ್ಥೆ ಬಸ್ ಹಾಗೂ ಆಲ್ಟೋ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಐವರು ಯುವಕರು ಮೃತಪಟ್ಟಿರುವ ಧಾರುಣ ಘಟನೆ ಜರುಗಿದೆ.

ಇಂದು ಮಧ್ಯಾಹ್ನ ಸುಮಾರು ೧ ಗಂಟೆ ಸಮಯದಲ್ಲಿ ಹಾಸನದಿಂದ ಬರುತ್ತಿದ್ದ ಬಸ್ ಹಾಗೂ ಬೇಲೂರಿನಿಂದ ತೆರಳುತ್ತಿದ್ದ ಕಾರಿನ ನಡುವೆ ಡಿಕ್ಕಿ ಸಂಭವಿಸಿದ್ದು ಕಾರಿನಲ್ಲಿದ್ದ ಮಹ್ಮದ್ ಹಸನ್ (೨೦) ಮಹ್ಮದ್‌ಕೈಫ್ (೧೯) ರಿಹಾನ್ (೧೮) ಜಿಲಾನಿ (೧೯) ಸ್ಥಳದಲ್ಲೆ ಮೃತಪಟ್ಟರೆ ಹಾಸನ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದಾರಿ ಮಧ್ಯದಲ್ಲಿ ಅಕ್ಮಲ್ ಮೃತಪಟ್ಟಿದ್ದಾನೆ.  ಮೃತರೆಲ್ಲರೂ ಬೇಲೂರು ಪಟ್ಟಣದವರಾಗಿದ್ದು ಇವರೆಲ್ಲರೂ ಕಾಲೇಜು ವಿದ್ಯಾರ್ಥಿಗಳೆಂದು ತಿಳಿದುಬಂದಿದೆ.

ಕಾರಿನ ಶೇ.೫೦ ಭಾಗ ನಜ್ಜುಗುಜ್ಜಾಗಿದ್ದು ಅಪಘಾತದ ತೀವ್ರತೆಗೆ ಸಾಕ್ಷಿಯಾಗಿತ್ತು. ಕಾರಿನೊಳಗೆ ಅಂಟಿಕೊAಡಿದ್ದ ಮೃತದೇಹ ಹೊರತೆಗೆಯಲು ಪೊಲೀಸರು, ಸ್ಥಳೀಯರು ಹರಸಾಹಸ ಪಡಬೇಕಾಯಿತು. ಮೃತದೇಹಗಳನ್ನು ಆಸ್ಪತ್ರೆಗೆ ತಂದವೇಳೆ ಮೃತರ ಸಂಬAಧಿಕರ ಆಕ್ರಂಧನ ಮುಗಿಲು ಮುಟ್ಟಿತ್ತು. ಅಪಘಾತದ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ತೆರಳಿ ಪ್ರಕರಣ ದಾಖಲಿಸಿಕೊಂಡರು. 


Post a Comment

Previous Post Next Post