ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಇಂದು ಚೊಚ್ಚಲ ಬಜೆಟ್ ಮಂಡಿಸಲು ರೆಡಿಯಾಗಿದ್ದಾರೆ. 2022-2023 ಸಾಲಿನ ಈ ಬಜೆಟ್ನತ್ತ ರಾಜ್ಯ ಜನರು ಚಿತ್ತ ಹರಿಸಿದ್ದಾರೆ. ಕೊರೊನಾ, ಆರ್ಥಿಕ ಸಂಕಷ್ಟದ ನಡುವೆ ಜನರಿಗೆ ಕೆಲ ಮಹತ್ವದ ಯೋಜನೆಗಳನ್ನ ಘೋಷಿಸಬೇಕಿದೆ. ಜೊತೆಗೆ 2023ರ ಚುನಾವಣೆ ದೃಷ್ಟಿಯಿಂದಲೂ ಈ ಬಜೆಟ್ ಸಾಕಷ್ಟು ಕುತೂಹಲ ಮೂಡಿಸಿದೆ.
ಚೊಚ್ಚಲ ಬಜೆಟ್ ಮಂಡನೆಗೆ ಬೊಮ್ಮಾಯಿ ಸಿದ್ಧ!
ಸಿಎಂ ಬಸವರಾಜ ಬೊಮ್ಮಾಯಿ ಚೊಚ್ಚಲ ಬಜೆಟ್ ಮಂಡನೆಗೆ ಸಿದ್ಧರಾಗಿದ್ದಾರೆ. ಕೊರೊನಾ ಕಷ್ಟ ಕಾಲವನ್ನ ಎದುರಿಸಿರುವ ಸರ್ಕಾರ, ರಾಜ್ಯದ ಜನರಿಗಾಗಿ ಜನಪರ ಬಜೆಟ್ ಮಂಡಿಸಲು ಸಿದ್ಧರಾಗಿದ್ದಾರೆ. ಇಂದು ಮಧ್ಯಾಹ್ನ 12.30ಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಚೊಚ್ಚಲ ಬಜೆಟ್ ಮಂಡಿಸಲಿದ್ದಾರೆ. ಚಿಕ್ಕದಾದ, ಚೊಕ್ಕವಾದ ಜನಪರ ಬಜೆಟ್ ನೀಡಲು ಸಿಎಂ ಮುಂದಾಗಿದ್ದಾರೆ. 2023ರ ಚುನಾವಣೆಯ ದೃಷ್ಟಿಯಿಂದಲೂ ಈ ಬಜೆಟ್ ಕುತೂಹಲ ಮೂಡಿಸಿದೆ.
‘ಚುನಾವಣಾ ಬಜೆಟ್’ ನಿರೀಕ್ಷೆಗಳೇನು?
* ಬೆಲೆ ಏರಿಕೆ ಆಗುವುದಿಲ್ಲ ಎಂದು ನಂಬಿರುವ ಜನಸಾಮಾನ್ಯರು
* ಕೊರೊನಾದಿಂದ ಕುಸಿದಿರೋ ಆರ್ಥಿಕತೆಗೆ ಚೇತರಿಕೆಯ ಕೊಡುಗೆ
* ಕೊರೊನಾದಿಂದ ಮೃತಪಟ್ಟವರ ಕುಟುಂಬಗಳಿಗೆ ಅನುದಾನ ಘೋಷಣೆ
*' ಕೈ ' ಪಾದಯಾತ್ರೆ ಹಿನ್ನೆಲೆ ಕೃಷ್ಣಾ , ಕಾವೇರಿ ಕೊಳ್ಳದ ಜನರಿಗೆ ಸಿಹಿಸುದ್ದಿ
* ಶಿಕ್ಷಣ ಕ್ಷೇತ್ರವನ್ನು ಇನ್ನಷ್ಟು ಸದೃಢಗೊಳಿಸಲು ಹೊಸ ಯೋಜನೆ !
* ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ರಾಜ್ಯದ ಸುಂಕ ಇಳಿಕೆ ಸಾಧ್ಯತೆ
* ಸರ್ಕಾರದ ಎಲ್ಲಾ ಇಲಾಖೆಗಳಿಗೆ ಅನುದಾನ ಹೆಚ್ಚಳ ಮಾಡೋ ನಿರೀಕ್ಷೆ
2023ರ ಚುನಾವಣೆಗೂ ಮುನ್ನ ಬರಲಿರೋ ಬಿಬಿಎಂಪಿ ಎಲೆಕ್ಷನ್ಗೆ ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್ನಲ್ಲಿ ಗಿಫ್ಟ್ ನೀಡೋಕೆ ಸಿಎಂ ಮುಂದಾಗಿದ್ದಾರೆ ಎನ್ನಲಾಗ್ತಿದೆ. ಬೆಂಗಳೂರಿಗರ ಬಹು ವರ್ಷಗಳ ಬೇಡಿಕೆಯಾದ ಬಿ ಖಾತೆ ಆಸ್ತಿಗಳನ್ನು ಎ ಖಾತಾಗೆ ಪರಿವರ್ತನೆ, ಅಕ್ರಮ ಸಕ್ರಮ ಯೋಜನೆ, ಟಿಡಿಆರ್ ಬ್ಯಾಂಕ್ ಸ್ಥಾಪನೆ ಮಾಡುವ ಮೂಲಕ ರಸ್ತೆ ಅಗಲೀಕರಣಕ್ಕೆ ಆದ್ಯತೆ ನೀಡುವ ಸಾಧ್ಯತೆ ಇದೆ. ಇದ್ರ ಜೊತೆಗೆ ಬೆಂಗಳೂರಿಗರನ್ನು ಗಮನದಲ್ಲಿಟ್ಟುಕೊಂಡು ಹಲವು ಗಿಫ್ಟ್ ಘೋಷಣೆ ಮಾಡೋ ಸಾಧ್ಯತೆ ಇದೆ.
ಬಜೆಟ್ ಮಂಡಿಸಲು ಸಿಎಂ ಬಸವರಾಜ ಬೊಮ್ಮಾಯಿ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. 2023ರ ಚುನಾವಣೆಯನ್ನ ಗಮನದಲ್ಲಿಟ್ಟುಕೊಂಡು ಮತದಾರರನ್ನ ಸೆಳೆಯೋ ಕೆಲಸ ಈ ಬಜೆಟ್ನಿಂದ ಆಗುತ್ತಾ ಅನ್ನೋದು ನೋಡಬೇಕಿದೆ.