ಬೇಲೂರು : ಶಿವನನ್ನು ಆರಾಧಿಸುವ, ಪೂಜಿಸುವ, ಭಜನೆ, ಕೀರ್ತನೆಯೊಂದಿಗೆ ಶಿವರಾತ್ರಿ ಹಬ್ಬ ಆಚರಿಸುವ ಮೂಲಕ ನಾಡಿನ ಅಭ್ಯುದಯಕ್ಕೆ ಪ್ರಾರ್ಥಿಸೋಣ ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು.
ಬೇಲೂರು ತಾಲೂಕು ಬಿರಣಗೋಡು ಗ್ರಾಮದ ಕಾಲಬೈರವೇಶ್ವರ ದೇಗುಲದಲ್ಲಿ ಶಿವರಾತ್ರಿ ಹಬ್ಬದ ವೇಳೆ ಶಾಸಕ ಕೆ.ಎಸ್.ಲಿಂಗೇಶ್ ಮಾತನಾಡಿದರು. ಪಾಲ್ಗೊಂಡಿರುವ ಭಕ್ತಸಮೂಹ |
ತಾಲ್ಲೂಕಿನ ಬಿರಣಗೋಡು ಗ್ರಾಮದ ಶ್ರೀಕಾಲಬೈರವೇಶ್ವರ ದೇಗುಲದಲ್ಲಿ ಏರ್ಪಡಿಸಿದ್ದ ಮಹಾಶಿವರಾತ್ರಿ ಪೂಜಾಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಂದು ಉಕ್ರೇನ್ ರಷ್ಯಾ ನಡುವಿನ ಯುದ್ಧ ಅಂತ್ಯಗೊಳ್ಳಲಿ, ಅಲ್ಲಿರುವ ಭಾರತೀಯರು ಸುರಕ್ಷಿತವಾಗಿ ಬರಲಿ ಎಂದ ಅವರು, ಕ್ಷೇತ್ರಕ್ಕೆ ಕಳೆದ ವರ್ಷ ಬಂದವೇಳೆ ದೇವರ ವನವನ್ನು ಅರಣ್ಯ ಇಲಾಖೆಯಿಂದ ಮಾಡಿಸಿಕೊಡುವುದಾಗಿ ತಿಳಿಸಿದ್ದೆ. ಆದರೆ ಕೊರೊನಾ ಕಾರಣದಿಂದ ಸಾಧ್ಯವಾಗಲಿಲ್ಲ. ಈಗ ಅದಕ್ಕೆ ಚಾಲನೆ ಕೊಡಲಾಗುವುದು ಎಂದು ತಿಳಿಸಿದರು.
೬೦೦ ವರ್ಷಗಳ ಇತಿಹಾಸ ಇರುವ ಚೋಳರ ಕಾಲದ ದೇಗುಲದಲ್ಲಿ ಶ್ರೀಗುರುಸ್ವಾಮಿ ಶಾಸ್ತಿçÃಜಿ ಪೂಜಾಕಾರ್ಯ ನೆರವೇರಿಸಿದರು. ರುದ್ರಾಭಿಷೇಕ, ರುದ್ರಹೋಮ ನಡೆಸಲಾಯಿತು. ಸುಮಾರು ೩ ಸಾವಿರಕ್ಕೂ ಅಧಿಕ ಭಕ್ತರು ದೇವರ ದರ್ಶನ ಪಡೆದರು. ಇದೆ ವೇಳೆ ಹರಿಕಥಾ ಚಕ್ರವರ್ತಿ ಬಸವಶ್ರೀ ಪುರಸ್ಕೃತ ಬಿ.ಶಿವಕುಮಾರ ಶಾಸ್ತಿç ಇವರು ಹರಿಕಥೆ ನಡೆಸಿಕೊಟ್ಟರು.
ಈ ದೇಗುಲ ೫೮ ಗ್ರಾಮಗಳ ನಾಡದೇವರಾಗಿದ್ದು ಅಪಾರ ಭಕ್ತರನ್ನು ಹೊಂದಿದೆ. ಈ ದೇಗುಲದಲ್ಲಿ ಮೇಲುಪಾಲು, ಮಧ್ಯಪಾಲು, ಕೆಳಪಾಲು ಎಂಬ ೩ ದ್ವಾರಗಳಿದ್ದು ಆ ದ್ವಾರಕ್ಕೆ ಸಂಬAಧಿಸಿದ ಗ್ರಾಮಗಳ ಭಕ್ತರು ಶಿವರಾತ್ರಿ ಹಬ್ಬದಂದು ದ್ವಾರದ ಬಳಿ ಹಣ್ಣುತುಪ್ಪ ಇಟ್ಟು ಪೂಜಿಸುವುದು ನಡೆದುಕೊಂಡು ಬಂದಿರುವ ಪದ್ಧತಿ. ದೇಗುಲಕ್ಕೆ ಭೇಟಿ ನೀಡಿದ ಶಾಸಕ ಕೆ.ಎಸ್.ಲಿಂಗೇಶ್ ದೇವರ ದರ್ಶನ ಪಡೆದರು.
ಈ ಸಂದರ್ಭ ದೇಗುಲ ಸಮಿತಿಯ ಅಧ್ಯಕ್ಷ ಎಂ.ಆರ್.ಪ್ರಸನ್ನಕುಮಾರ್, ಪ್ರಧಾನ ಕಾರ್ಯದರ್ಶಿ ಎ.ಬಿ.ರುದ್ರೇಗೌಡ, ಉಪಾಧ್ಯಕ್ಷ ಮಲ್ಲೇಗೌಡ, ಖಜಾಂಚಿ ರೇಣುಕಾ, ಶಂಕರೇಗೌಡ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಹಿರಿಯಣ್ಣಗೌಡ, ಸದಸ್ಯ ಮೊಗಪ್ಪಗೌಡ, ಹೋಬಳಿ ಜೆಡಿಎಸ್ ಅಧ್ಯಕ್ಷ ಕುಮಾರ್, ತಾ.ಪಂ.ಸದಸ್ಯೆ ಪದ್ಮಾಕ್ಷಿಸತ್ಯನಾರಾಯಣ ಇತರರು ಇದ್ದರು.