ಕೃಷಿಕ ಮಹಿಳೆ ಲತಾಚಂದ್ರಶೇಖರ್‌ಗೆ ಬಿಜೆಪಿ ಸನ್ಮಾನ

ಬೇಲೂರು : 

ಅಂತರಾಷ್ಟಿçÃಯ ಮಹಿಳಾ ದಿನಾಚರಣೆ ಅಂಗವಾಗಿ ತಾಲ್ಲೂಕಿನ ಲಿಂಗಪ್ಪನಕೊಪ್ಪಲು ಗ್ರಾಮದ ಕೃಷಿಕ ಮಹಿಳೆ ಲತಾಚಂದ್ರಶೇಖರ್ ಅವರನ್ನು ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್.ಕೆ.ಸುರೇಶ್ ಸನ್ಮಾನಿಸಿದರು.

ಬೇಲೂರು ತಾ.ಲಿಂಗಪ್ಪನಕೊಪ್ಪಲು ಗ್ರಾಮದ ಲತಾಚಂದ್ರಶೇಖರ್ ಅವರನ್ನು ಸನ್ಮಾನಿಸಲಾಯಿತು 

ಕೃಷಿಕ ಮಹಿಳೆಯ ನಿವಾಸಕ್ಕೆ ಪಕ್ಷದ ಪ್ರಮುಖರೊಂದಿಗೆ ತೆರಳಿದ ಅವರು ಗೌರವಿಸಿದರು. ಈ ಸಂದರ್ಭ ಮಾತನಾಡಿದ ಹೆಚ್.ಕೆ.ಸುರೇಶ್, ಬಿಜೆಪಿ ಪಕ್ಷದ ಸೂಚನೆಯಂತೆ ಕೃಷಿಯಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಗುರುತಿಸಿ ಸನ್ಮಾನಿಸಲಾಗಿದೆ. ಲತಾಚಂದ್ರಶೇಖರ್ ಹತ್ತಾರು ಸಾಧನೆ ಮಾಡಿ ಪ್ರಶಸ್ತಿ ಪುರಸ್ಕಾರಗಳ ಪಡೆದಿದ್ದಾರೆ. ಪಟ್ಟಣ ಪ್ರದೇಶದಲ್ಲಿದ್ದವರು ಗ್ರಾಮೀಣ ಪ್ರದೇಶಕ್ಕೆ ಬಂದು ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡುವುದು ಸುಲಭದ ಮಾತಲ್ಲ. ಅದನ್ನು ಮಾಡಿ ಮಾದರಿಯಾಗಿದ್ದಾರೆ ಎಂದರು. ಮಂಡಲ ಅಧ್ಯಕ್ಷ ಅಡಗೂರು ಆನಂದ್, ಮಹಿಳಾ ಘಟಕದ ಅಧ್ಯಕ್ಷ ಶೋಭಾಗಣೇಶ್, ಚನ್ನಕೇಶವಸ್ವಾಮಿ ದೇಗುಲ ಸಮಿತಿ ಸದಸ್ಯೆ ವಿಜಯಲಕ್ಷಿö್ಮÃ ಇತರರು ಇದ್ದರು.


Post a Comment

Previous Post Next Post