ಬೇಲೂರು ದೇಗುಲದಲ್ಲಿ ಧಾರ್ಮಿಕ ದಿನ ಆಚರಣೆ: ಭಜನೆ ಸರದಿಯಲ್ಲಿ ದೇವರ ದರ್ಶನ: ಭಕ್ತರಿಗೆ ಬೇವುಬೆಲ್ಲ ವಿತರಣೆ

ಅನಂತರಾಜೇಅರಸು ಬೇಲೂರು : 

ಇಲ್ಲಿನ ಶ್ರೀ ಚನ್ನಕೇಶವ ಸ್ವಾಮಿ ದೇಗುಲದಲ್ಲಿ ಚಾಂದ್ರಮಾನ ಯುಗಾದಿ ಹಬ್ಬದ ದಿನವಾದ ಶನಿವಾರ ಶ್ರೀಚನ್ನಕೇಸ್ವಾಮಿ ದೇವರ ವರ್ಷದ ಪ್ರಥಮ ಅಡ್ಡೆ ಉತ್ಸವ ಹಾಗೂ ಲಕ್ಷ್ಮೀ ದೇವರ ಉತ್ಸವವೂ ಜರುಗಿತು. 

ಬೇಲೂರು ದೇಗುಲದಲ್ಲಿ ನಡೆದ ಚನ್ನಕೇಶವ ಹಾಗೂ ಲಕ್ಷಿö್ಮÃ ಅಡ್ಡೆ ಉತ್ಸವ


ಕೋವಿಡ್ ಹಿನ್ನೆಲೆಯಲ್ಲಿ ೨ ವರ್ಷದಿಂದ ಉತ್ಸವ ಸ್ಥಗಿತಗೊಂಡಿದ್ದರಿಂದ ಉತ್ಸವದ ದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ರಾತ್ರಿ ೭.೩೦ ಗಂಟೆ ಸಮಯದಲ್ಲಿ ಬಂದ ಮಳೆಯಿಂದ ಭಕ್ತರಿಗೆ ಅನಾನುಕೂಲವಾಯಿತು.

ಬೇಲೂರು ದೇಗುಲದಲ್ಲಿ ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದ ಭಕ್ತರು

ಇದೆ ವೇಳೆ ರಾಜ್ಯ ಸರಕಾರದ ಆದೇಶದಂತೆ ಧಾರ್ಮಿಕ ದಿನವನ್ನು ಆಚರಿಸಲಾಯಿತು. ಬೆಳಿಗ್ಗೆ ದೇವರಿಗೆ ಅಭಿಷೇಕ, ನಿತ್ಯಕಟ್ಲೆ ನಂತರ ಆಭರಣ ಧರಿಸಲಾಯಿತು. ದೇಗುಲಕ್ಕೆ ಆಗಮಿಸಿದ ಭಕ್ತರಿಗೆ ಬೇವುಬೆಲ್ಲ ವಿತರಿಸಲಾಯಿತು. ದೇಗುಲದ ಆವರಣದಲ್ಲಿ ಮದ್ವಪದಿ ಹಾಗೂ ಚೌಡೇಶ್ವರಿ ಭಜನಾ ಮಂಡಳಿಯವರು ಭಜನೆ ನಡೆಸಿಕೊಟ್ಟರು. ಭಕ್ತರಿಗೆ ಬೇವುಬೆಲ್ಲ ವಿತರಿಸಲಾಯಿತು.

ಬೇಲೂರು ದೇಗುಲದಲ್ಲಿ ಮಹಿಳೆಯರು ಭಜನೆ ನಡೆಸಿಕೊಟ್ಟರು

ಬೆಳಗಿನ ಪೂಜಾಕರ್ಯದಲ್ಲಿ ಜಿಲ್ಲಾಧಿಕಾರಿ ಆರ್.ಗಿರೀಶ್ ಕುಟುಂಬ ಹಾಗೂ ಶಾಸಕ ಕೆ.ಎಸ್.ಲಿಂಗೇಶ್ ಪಾಲ್ಗೊಂಡಿದ್ದರು. ದೇಗುಲ ಇಒ ವಿದ್ಯುಲ್ಲತಾ ಇದ್ದರು. 


Post a Comment

Previous Post Next Post