ಬೇಲೂರು : ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ಗೇಟ್ ಬಳಿ ಚರಂಡಿಗೆ ಅಡ್ಡಲಾಗಿ ಅವೈಜ್ಞಾನಿಕವಾಗಿ ಅಳವಡಿಸಿರುವ ಕಂಬಿಗಳ ಸಂದಿಯಲ್ಲಿ ವ್ಯಕ್ತಿಯೋರ್ವರ ಕಾಲು ಸಿಲುಕಿಕೊಂಡ ಘಟನೆ ನಡೆಯಿತು.
![]() |
ಬೇಲೂರು ಸರ್ಕಾರಿ ಆಸ್ಪತ್ರೆಯ ಮುಖ್ಯಗೇಟಿನ ಬಳಿ ಚರಂಡಿಗೆ ಅಳವಡಿಸಿರುವ ಕಂಬಿಯ ನಡುವೆ ಕಾಲು ಸಿಲುಕಿರುವುದು |
ಮಧ್ಯಾಹ್ನ ಆಸ್ಪತ್ರೆಗೆ ತೆರಳಿ ವಾಪಸ್ಸು ಬರುವ ವೇಳೆ ಕಂಬಿಯ ನಡುವೆ ಇರುವ ಸಂದಿಯಲ್ಲಿ ಕಾಲು ಸಿಲುಕಿ ತೊಡೆಯವರಗೂ ಕಳೆಭಾಗಕ್ಕೆ ಹೋಯಿತು. ಸ್ಥಳದಲ್ಲಿದ್ದವರು ಕಂಬಿಯನ್ನು ಮೀಟಿ ಕಾಲನ್ನು ಹೊರತೆಗೆದರು. ಇದಕ್ಕಾಗಿ ಸಾಕಷ್ಟು ಸಮಯ ಹಿಡಿಯಿತು. ಈ ರೀತಿ ಇದೆ ಸ್ಥಳದಲ್ಲಿ ಹಲವು ಬಾರಿ ನಡೆದಿದ್ದು ಹಲವರು ಗಾಯಗೊಂಡಿದ್ದಾರೆ. ಆದರೂ ಆಸ್ಪತ್ರೆಯ ಅಧಿಕಾರಿಗಳು ಸಮರ್ಪಕ ವ್ಯವಸ್ಥೆಗೆ ಕ್ರಮ ಕೈಗೊಂಡಿಲ್ಲದಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Tags
ಬೇಲೂರು