ಅರಕಲಗೂಡು ತಾಲೂಕಿನಲ್ಲಿ ಎಲ್ಲಾ ಹೋಬಳಿ ಕೇಂದ್ರಗಳಲ್ಲಿ ಬೃಹತ್ ಆರೋಗ್ಯ ಮೇಳ

ಅರಕಲಗೂಡು: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಎಸ್.ಜಿ. ಚಾರಿಟಬಲ್ ಟ್ರಸ್ಟ್ .ಮತ್ತು ಶ್ರೀಧರ್ಗೌಡರ ಅಭಿಮಾನಿಗಳ ಬಳಗ ಅರಕಲಗೂಡು, ಇವರ ಸಂಯುಕ್ತಾಶ್ರಯದಲ್ಲಿ ಸುದ್ದಿಗೋಷ್ಠಿ ನಡೆಸಿದರು..
ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್ ಪಿ ಶ್ರೀಧರ್ಗೌಡ. ಕಾಂಗ್ರೆಸ್ ಮುಖಂಡರು ತಾಲೂಕಿನಲ್ಲಿ ಎಲ್ಲಾ ಹೋಬಳಿ ಕೇಂದ್ರಗಳಲ್ಲಿ ಬೃಹತ್ ಆರೋಗ್ಯ ಮೇಳ ನಡೆಸುತ್ತಿದ್ದೇವೆ ಇದರ ಸದುಪಯೋಗವನ್ನು ತಾಲೂಕಿನ ಜನತೆ ಪಡೆದುಕೊಳ್ಳಬೇಕು 

ಸಾಂಕ್ರಮಿಕ ಕಾಯಿಲೆಯ ಪರಿಣಾಮವಾಗಿ ಇಡೀ ನಮ್ಮ ತಾಲ್ಲೂಕಿನ ಜನರು ಕಳೆದ ಎರಡು ವರ್ಷಗಳಿಂದ ಬಹಳ ಸಂಕಷ್ಟದ ದಿನಗಳನ್ನು ಎದುರಿಸುತ್ತಿರುವುದರ ಜೊತೆ ಜೊತೆಗೆ ತಮ್ಮ ಹಾಗೂ ತಮ್ಮಗಳ ಕುಟುಂಬದವರ ಸದೃಢ ಆರೋಗ್ಯಕ್ಕಾಗಿ ಇಂದಿಗೂ ಸದಾ ಪ್ರಯತ್ನಿಸುತ್ತಿರುವುದನ್ನು ಅರಿತುಕೊಂಡಿದ್ದೇನೆ. ನಿಮ್ಮೆಲ್ಲರ ಪ್ರೀತಿಯ ಆಶೀರ್ವಾದ ಮತ್ತು ಹಾರಕದ ಸಾಮಾಜಿಕವಾಗಿ ಸಾಧ್ಯವಾದಷ್ಟು ಸೇವೆ ಸಲ್ಲಿಸಲು ಅವಕಾಶ ದೊರೆತಿರುವ ನನಗೆ ಇದನ್ನೆಲ್ಲಾ ಕಂಡು ಕೂಡ ಸುಮ್ಮನಿರುವುದು ಸರಿಯಲ್ಲ ಎಂಬುದನ್ನು ಮನಗಂಡು, ನಮ್ಮ ಕ್ಷೇತ್ರದ ಜನರು ತಮ್ಮ ಕುಟುಂಬದ ಸದಸ್ಯರುಗಳೊಂದಿಗೆ ಉತ್ತಮ ಆರೋಗ್ಯದಿಂದ ಇರಬೇಕೆಂಬ ಹಂಬಲದಿಂದ 
ನಿಮ್ಮೆಲ್ಲರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು, ಕ್ಷೇತ್ರದ ನೊಂದ ಜನರ ಬದುಕಿನ ಜೊತೆಯಲ್ಲಿರಲು ಬಯಸುತ್ತೇನೆ..

ಆರೋಗ್ಯಕರ ಅರಕಲಗೂಡಿಗಾಗಿ

ಬೃಹತ್ ಉಚಿತ ಆರೋಗ್ಯ ಮೇಳ

ಶಿಬಿರ ನಡೆಯುವ ದಿನಾಂಕ ಮತ್ತು ಸ್ಥಳ
ದಿನಾಂಕ : 01-05-2022ನೇ ಭಾನುವಾರ ಕೊಣನೂರು 
ದಿನಾಂಕ : 08-05-2022ನೇ ಭಾನುವಾರ ಅರಕಲಗೂಡು ದಿನಾಂಕ : 15-05-2022ನೇ ಭಾನುವಾರ ಹಳ್ಳಿಮೈಸೂರು ದಿನಾಂಕ : 22-05-2022ನೇ ಭಾನುವಾರ ಮಲ್ಲಿಪಟ್ಟಣ
 ದಿನಾಂಕ : 29-05-2022ನೇ ಭಾನುವಾರ ದೊಡ್ಡಮಗ್ಗೆ
 ದಿನಾಂಕ : 05-06-2022ನೇ ಭಾನುವಾರ ರಾಮನಾಥಪುರ

ಶಿಜರದಲ್ಲಿ ಪಾಲ್ಗೊಳ್ಳಲಿರುವ ತಜ್ಞ ವೈದ್ಯರುಗಳು
ವೈದ್ಯಕೀಯ ಸೇವೆಗಳನ್ನು ನೀಡಲು ಆಗಮಿಸುತ್ತಿದ್ದಾರೆ
* ಪ್ರಸೂತಿ & ಸ್ತ್ರೀ ರೋಗ ತಜ್ಞರು
* ಮಕ್ಕಳ ತಜ್ಞರು
* ಹೃದ್ರೋಗ ತಜ್ಞರು
* ಕಿವಿ, ಮೂಗು & ಗಂಟಲು ತಜ್ಞರು ನಮ್ಮ
* ಮೂಳೆ & ಕೀಲು ತಜ್ಞರು.
* ನೇತ್ರ ತಜ್ಞರು 
* ಮಾನಸಿಕ ರೋಗ ತಜ್ಞರು
* ನರರೋಗ ತಜ್ಞರು 
* ಗ್ಯಾಸ್ಟ್ರಿಕ್ ಸಂಬಂಧಿತ ತಪಾಸಣೆ 
* ಫಿಜಶಿಯನ್
* ದಂತ ತಜ್ಞರು
* ಮೂತ್ರ ಶಾಸ್ತ್ರ ತಜ್ಞರು
* ಚರ್ಮರೋಗ ತಜ್ಞರು
* ಜನರಲ್ ಸರ್ಜನ್
* ಬಿ.ಪಿ. & ಶುಗರ್ ಪರೀಕ್ಷೆ 
* ಇ.ಸಿ.ಜಿ. ಪರೀಕ್ಷೆ 
* ಕ್ಯಾನ್ಸರ್ ತಪಾಸಣೆ
* ರಕ್ತ ಗುಂಪು ಪರೀಕ್ಷೆ 
* ಜನರಲ್ ಮೆಡಿಸನ್,
ದಿನಾಂಕ: 01-05-2022 ರಿಂದ ದಿನಾಂಕ: 05-06-2022 ರವರೆಗೆ ಪ್ರತಿ ಭಾನುವಾರದಂದು 6 ವಾರಗಳು ಅರಕಲಗೂಡು ತಾಲ್ಲೂಕು ವಿಧಾನಸಭಾ ಕ್ಷೇತ್ರದ ಪ್ರತಿ ಹೋಬಳಿ ಕೇಂದ್ರಗಳಲ್ಲಿ  “ಬೃಹತ್ ಆರೋಗ್ಯ ತಪಾಸಣಾ ಮೇಳ” ವನ್ನು ಏರ್ಪಡಿಸಿದ್ದೇವೆ. ನಮ್ಮ ಕ್ಷೇತ್ರದ ಸಾರ್ವಜನಿಕ ಬಂಧುಗಳು,ಮಧ್ಯಾಹ್ನ ಊಟದ ವ್ಯವಸ್ಥೆ ಇರುತ್ತದೆ.
ಬೆಂಗಳೂರು, ಮೈಸೂರು ಹಾಗೂ ಹಾಸನ ಭಾಗದ ಸುಮಾರು 40 ಕ್ಕೂ ಅಧಿಕ ನುರಿತ ತಜ್ಞ ವೈದ್ಯರುಗಳನ್ನೊಳಗೊಂಡ ತಂಡವು ಈ ಶಿಬಿರದಲ್ಲಿ ನೀಡುವ ಎಲ್ಲಾ ಆರೋಗ್ಯ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಾಗಿ ಈ ಮೂಲಕ ಪ್ರಾರ್ಥಿಸಿಕೊಳ್ಳುತ್ತೇನೆ..

ಉಚಿತ ಕನ್ನಡಕ ವಿತರಣೆ, ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ, ಜ.ಪಿ-ಶುಗರ್, ಥೈರಾಡ್ ಹಾಗೂ ವಿಟಮಿನ್, ಕ್ಯಾಪ್ತಿಯಂ, ರಕ್ತ ಹೀನತೆ ಮತ್ತು ಇನ್ನಿತರೆ ಕಾಯಿಲೆಗಳಿಗೆ ಉಚಿತ ಮಾತ್ರೆಗಳ ವಿತರಣೆ ಹಾಗೂ ಇ.ಸಿ. ಪರೀಕ್ಷೆಗಳನ್ನು ಮಾಡಲಾಗುವುದು. ಹಾಗೂ ಸ್ಥಳದಲ್ಲಿಯೇ ರಕ್ತ ಪರೀಕ್ಷೆ, ಮೂತ್ರ ಪರೀಕ್ಷೆ ಇರುತ್ತದೆ...
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಜಿಮ್ ಸೋಮು ಜಾಮಿಯಾ ಮಸೀದಿ ಅಧ್ಯಕ್ಷ ಸಲಿo ಮಹಮದ್ ದಶರಥ ಕಂತೆನಹಳ್ಳಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸಾಲ್ ಗೇರಿ ಗುರು,ಆಟೋ ಧರ್ಮ ಆಟೋ ವಿಜಿ,  ಮುಂತಾದವರು ಹಾಜರಿದ್ದರು.

Post a Comment

Previous Post Next Post