ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ: ರಾಜ್ಯಕ್ಕೆ ಹಾಸನ ನಂ.1

ರಾಜ್ಯದ ಗುಣಾತ್ಮಕ ಫಲಿತಾಂಶಕ್ಕಿಂತ ಜಿಲ್ಲೆಯ ಗುಣಾತ್ಮಕ ಫಲಿತಾಂಶವೇ ಹೆಚ್ಚು 

ಜಿಲ್ಲೆಯ ಫಲಿತಾಂಶ 95.60 %,  ಗುಣಾತ್ಮಕ ಫಲಿತಾಂಶ  87.37%

 ಪ್ರಕಟ ಜಿಲ್ಲೆಯಲ್ಲಿ 19115 ವಿದ್ಯಾರ್ಥಿಗಳು ಉತ್ತೀರ್ಣ

ಹಾಸನ: ಜಿಲ್ಲೆಯಲ್ಲಿ ಒಟ್ಟು 19994 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 19115 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಒಟ್ಟಾರೆ ಜಿಲ್ಲೆಯ ಫಲಿತಾಂಶ 95.60 %, ಜಿಲ್ಲೆಯ ಗುಣಾತ್ಮಕ ಫಲಿತಾಂಶ 87.37% ಇದ್ದು, ಜಿಲ್ಲೆಯು 'ಎ' ಗ್ರೇಡ್ ಪಡೆದಿದೆ.
ಗುಣಾತ್ಮಕ ಫಲಿತಾಂಶದ ಆಧಾರದ ಮೇಲೆ ಸಕಲೇಶಪುರ ತಾಲ್ಲೂಕು 92.90% ಫಲಿತಾಂಶದೊಂದಿಗೆ ಪ್ರಥಮ ಸ್ಥಾನ, ಆಲೂರು ತಾಲ್ಲೂಕು 89.09 % ಫಲಿತಾಂಶದೊಂದಿಗೆ ದ್ವಿತೀಯ ಸ್ಥಾನ ಮತ್ತು ಹಾಸನ ತಾಲ್ಲೂಕು ಶೇ.89.04 ಫಲಿತಾಂಶದೊಂದಿಗೆ ತೃತೀಯ ಸ್ಥಾನ ಪಡೆದಿದ್ದು, ಬೇಲೂರು ತಾಲ್ಲೂಕು 82.94 % ಫಲಿತಾಂಶದೊಂದಿಗೆ 8ನೇ ಸ್ಥಾನ ಪಡೆದಿರುತ್ತದೆ.

ಒಟ್ಟು ಜಿಲ್ಲೆಯಲ್ಲಿ 4617 ವಿದ್ಯಾರ್ಥಿಗಳು ಎ+ ಗ್ರೇಡ್, 5874 ವಿದ್ಯಾರ್ಥಿಗಳು ಎ ಗ್ರೇಡ್, 4414 ವಿದ್ಯಾರ್ಥಿಗಳು ಬಿ+ ಗ್ರೇಡ್, 2892 ವಿದ್ಯಾರ್ಥಿಗಳು ಬಿ ಗ್ರೇಡ್, 1234 ವಿದ್ಯಾರ್ಥಿಗಳು ಸಿ+ ಗ್ರೇಡ್, 84 ವಿದ್ಯಾರ್ಥಿಗಳು ಸಿ ಗ್ರೇಡ್ ಪಡೆದಿದ್ದು, 879 ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುತ್ತಾರೆ.

ಜಿಲ್ಲೆಯಲ್ಲಿ 9828 ಗಂಡು ಮಕ್ಕಳು ಪರೀಕ್ಷೆಗೆ ಕುಳಿತಿದ್ದು, 9294 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.94.57 ಗಂಡು ಮಕ್ಕಳ ಫಲಿತಾಂಶ ಬಂದಿರುತ್ತದೆ. ಒಟ್ಟು ಜಿಲ್ಲೆಯಲ್ಲಿ 10166 ಹೆಣ್ಣುಮಕ್ಕಳು ಪರೀಕ್ಷೆಗೆ ಕುಳಿತಿದ್ದು, 9821 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದು, ಶೇ.96.61 ಬಂದಿರುತ್ತದೆ.

ಒಟ್ಟು ಜಿಲ್ಲೆಯಲ್ಲಿ ಸರ್ಕಾರಿ ಶಾಲೆಯ ಫಲಿತಾಂಶ ಶೇ.95.09, ಅನುದಾನಿತ ಶಾಲೆಯ ಫಲಿತಾಂಶ ಶೇ.92.86 ಮತ್ತು ಅನುದಾನ ರಹಿತ ಶಾಲೆಯ ಫಲಿತಾಂಶ ಶೇ.98.81 ಬಂದಿರುತ್ತದೆ.

ಜಿಲ್ಲೆಯ ಪ್ರಥಮ ಭಾಷೆಯ ಫಲಿತಾಂಶ ಶೇ. 97.06, ದ್ವಿತೀಯ ಭಾಷೆ ಫಲಿತಾಂಶ ಶೇ.97.76, ತೃತೀಯ ಭಾಷೆ ಫಲಿತಾಂಶ ಶೇ.98.06. ಗಣಿತ ವಿಷಯದ ಫಲಿತಾಂಶ ಶೇ.97.80, ವಿಜ್ಞಾನ ವಿಷಯದ ಫಲಿತಾಂಶ ಶೇ.98.06 ಮತ್ತು ಸಮಾಜ ವಿಜ್ಞಾನ ಫಲಿತಾಂಶ ಶೇ.97.71 ಬಂದಿರುತ್ತದೆ.

ರಾಜ್ಯದಲ್ಲಿ ಒಟ್ಟು 625ಕ್ಕೆ 625 ಅಂಕಗಳನ್ನು 145 ವಿದ್ಯಾರ್ಥಿಗಳು ಪಡೆದಿದ್ದು, ಅದರಲ್ಲಿ ನಮ್ಮ ಜಿಲ್ಲೆಯ 19 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆದಿರುತ್ತಾರೆ. ಪ್ರಥಮ ಭಾಷೆಯಲ್ಲಿ 726 ವಿದ್ಯಾರ್ಥಿಗಳು 125ಕ್ಕೆ 125 ಅಂಕ ಪಡೆದಿದ್ದರೆ, ಉಳಿದಂತೆ ದ್ವಿತೀಯ ಭಾಷೆಯಲ್ಲಿ 770, ತೃತೀಯ ಭಾಷೆಯಲ್ಲಿ 1311, ಗಣಿತ ವಿಷಯದಲ್ಲಿ 486, ವಿಜ್ಞಾನ ವಿಷಯದಲ್ಲಿ 342 ಮತ್ತು ಸಮಾಜ ವಿಜ್ಞಾನ ವಿಷಯದಲ್ಲಿ 2011 ವಿದ್ಯಾರ್ಥಿಗಳು 100ಕ್ಕೆ 100 ಅಂಕಗಳನ್ನು ಪಡೆದಿರುತ್ತಾರೆ.

ರಾಜ್ಯದ ಗುಣಾತ್ಮಕ ಫಲಿತಾಂಶ ಶೇ.85.63 ಇದ್ದು, ಹಾಸನ ಜಿಲ್ಲೆಯ ಗುಣಾತ್ಮಕ ಫಲಿತಾಂಶ ಶೇ.87.37 ಬಂದಿದೆ. ರಾಜ್ಯ ಸರಾಸರಿ ಫಲಿತಾಂಶಕ್ಕಿAತ ಶೇ.1.74 ಹೆಚ್ಚಾಗಿರುತ್ತದೆ.

Post a Comment

Previous Post Next Post