ಬೇಲೂರು:ತಾಲೂಕಿನ ಅರೇಹಳ್ಳಿ ಹೋಬಳಿ ಸಂತೆಮೈದಾನದ ಬಳಿ ಇರುವ ಶಿಲ್ಪಾ ಹುಡ್ ವರ್ಕ್ಸ್ ಗೆ ವಿದ್ಯುತ್ ಬೆಂಕಿ ಅವಘಡಕ್ಕೆ ಸುಮಾರು ೧೫ ಲಕ್ಷಕ್ಕೂ ಹೆಚ್ಚು ಮೌಲ್ಯದ ಮರದ ತಾಟುಗಳು ಸಂಪೂರ್ಣ ಬಸ್ಮವಾಗಿದೆ.
ಘಟನೆ ವಿವರ
ಎಂದಿನಂತೆ ಕೆಲಸ ಮುಗಿಸಿ ಅಂಗಡಿ ಮಾಲೀಕ ಮಹೇಶ್ ಎಂದಿನಂತೆ ಬಾಗಿಲು ಮುಚ್ಚಿ ಮನೆಗೆ ತೆರಳಿದ್ದರು.ರಾತ್ರಿಯಿಂದ ಸುರಿದ ಗುಡುಗು,ಸಿಡಿಲು ಸಹಿತ ಸುರಿದ ಬಾರೀ ಮಳೆಯಿಂದಾಗಿ ಸಿಡಿಲಿನ ಹೊಡೆತಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಳಗಿನ ಜಾವ ೩-೩೦ ರ ಸಮಯದಲ್ಲಿ ಅಂಗಡಿ ಉರಿಯುತ್ತಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಎಲ್ಲರೂ ಸ್ಥಳೀಯರ ಜೊತೆಗೂಡಿ ಬೆಂಕಿ ನಂದಿಸಲು ಹರಸಾಸಹಸ ಪಟ್ಟರು.ಇಷ್ಟಾದರೂ ಅಗ್ನಿ ಶಾಮಕ ದಳ ಸ್ಥಳಕ್ಕೆ ಆಗಮಿಸದಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಯಿತು.
ನಂತರ ಸ್ಥಳಿಯರೇ ಸೇರಿ ಬೆಂಕಿಯನ್ನು ನಿಂದಿಸಿದರೂ ಸಹ ಅಷ್ಟರಲ್ಲಾಗಲೇ ಸುಮಾರು ೧೫ ಲಕ್ಷಕ್ಕೂ ಹೆಚ್ಚು ನಷ್ಠವಾಗಿದೆ ಎಂದು ಮಾಲೀಕ ಮಹೇಶ್ ಕಣ್ಣೀರು ಹಾಕಿದರು.
![]() |
Advertise |
ಸಾರ್ವಜನಿಕರ ಆಕ್ರೋಶ
ಇತ್ತೀಚಿನ ದಿನಗಳಲ್ಲಿ ಬೆಂಕಿ ಅವಘಡದಿಂದ ಬೇಲೂರು ಪಟ್ಟಣದ ಕುವೆಂಪು ನಗರದಲ್ಲಿ ದಿನಸಿ ಅಂಗಡಿಗೆ ಬೆಂಕಿ ಬಿದ್ದು ಸುಮಾರುವ೧೦ ಲಕ್ಷಕ್ಕೂ ಹೆಚ್ಚು ಮೌಲ್ಯದ ದಿನಸಿ ಸಾಮಗ್ರಿಗಳು ನಷ್ಠವಾಗಿದ್ದವು.ಬಡ ಕಾರ್ಮೀಕ ತನ್ನ ಹುಡ್ ವರ್ಕ್ಸ್ ನಲ್ಲಿ ಸಾಲಮಾಡಿ ಸುಮಾರು ೧೫ ಲಕ್ಷಕ್ಕೂ ಹೆಚ್ಚು ಮೌಲ್ಯದ ಮರದ ತಾಟುಗಳನ್ನು ತುಂಬಿ ಮಾರಾಟ ಮಾಡುತ್ತಿದ್ದರು.
ಆದರೆ ಈ ರೀತಿ ಅವಘಡದಿಂದಾಗಿ ಅವರ ಜೀವನ ನಡೆಸಲು ಸಂಕಷ್ಟಕ್ಕೆ ಬಂದಿದೆ ಅವರಿಗೆ ಕೂಡಲೇ ಪರಿಹಾರ ಒದಗಿಸಬೇಕು ಎಂದು ಯೋಗಾಚಾರಿ ಆಗ್ರಹಿಸಿದರು.