"ಬೇಲೂರಿನ ಬಸ್ಟಾಂಡ್ ಗುಂಡಿ ಹಾಗೂ ಚರಂಡಿಗಳಿಗೆ ಶಾಶ್ವತ ಪರಿಹಾರ ಎಂದು...??"

ಪ್ರಪಂಚವೆ ಬೇಲೂರಿನ ಶಿಲ್ಪಕಲೆಗೆ ನಿಬ್ಬೆರಗಾಗಿ ಶಿಲ್ಪಕಲೆಯನ್ನು ನೋಡಲು ಮೂಲೆ ಮೂಲೆಗಳಿಂದ ಬೇಲೂರಿಗೆ ಬರುತ್ತಾರೆ. ಬೇಲೂರಿನ ಬಸ್ಟಾಂಡ್ ನಲ್ಲಿಳಿದು ಜಗದ್ವಿಖ್ಯಾತ ಶ್ರೀ ಚನ್ನಕೇಶವ ಸ್ವಾಮಿ ದೇವಸ್ಥಾನದ ಕಡೆಗೆ ಹೊರಟರೆ ಮೊದಲು ಸಿಗುವುದೇ ಎಷ್ಟು ಬಾರಿ ಸರಿಪಡಿಸಿದರೂ "ಸರಿಯಾಗದ" ಈ ಗುಂಡಿ.

ಬೇಲೂರಿನ ಬಸ್ ನಿಲ್ದಾಣ

  ಬೇಲೂರು ಬಸ್ಟಾಂಡ್ ನ ಒಳಗೆ ಬಸ್ ಬರುವ (Entry) ಯ ಜಾಗದಲ್ಲಿ ಹೊಸ ಬಸ್ಟಾಂಡ್ ಮಾಡಿದಾಗಿನಿಂದಲೂ ಅದೆಷ್ಟು ಬಾರಿ ಜಲ್ಲಿ, ಸಿಮೆಂಟು ತ್ಯಾಪೆ ಹಾಕಿದರೂ ಸರಿಯಾಗುವ ಲಕ್ಷಣಗಳು ಕಾಣುತ್ತಿಲ್ಲ..

ಸಮುದ್ರದೊಳಗೆ, ಕೆರೆಗೆ ಅಂಟಿದಂತೆ ಕಟ್ಟಡ ಕಟ್ಟುವ ಟೆಕ್ನಾಲಜಿ ಇರುವಾಗ ಈ ಜಾಗದಲ್ಲಿ ಅದೆಷ್ಟೋ ವರ್ಷದಿಂದ ಈ ಜಾಗದ ಗುಂಡಿ ಮುಚ್ಚಲು ಯಾರಿಗೂ ಸಾದ್ಯವಾಗಿಲ್ಲ. 

ಬಸ್ಸು ಬೇಲೂರಿನ ಬಸ್ಟಾಂಡ್ ಒಳಗೆ ಬರುವಾಗ ಧಡ್,ಭಡ್ ಎಂದು ಶಬ್ದ ಮಾಡಿ ಪ್ರಯಾಣಿಕರನ್ನು ಕುಳಿತಲ್ಲಿಯೇ ಒಂದು ಬಾರಿ ಹಾರಿಸಿ ನಂತರ ಒಳಗೆ ಬರುತ್ತದೆ.

ಮಳೆಗಾಲದಲ್ಲಿ ಸಣ್ಣ ಕೆರೆಯ ರೀತಿ ಕಾಣುವ ಹಾಗೂ ಇದರ ಅಡಿಯಲ್ಲಿರಬೇಕಾದ ಆ "ಲೈನಿನ" ಚರಂಡಿಯೇ ಕಾಣೆಯಾಗಿದೆ ಎನಿಸುತ್ತೆ.

Advertise

ಜೊತೆಗೆ ಪ್ರತೀ ಮಳೆಗಾಲದ ಸಮಯದಲ್ಲೂ ದೇವಸ್ಥಾನದ ಸುತ್ತಮುತ್ತಲ ಮಳೆಯ ನೀರು "ಕಾಣದ" ಚರಂಡಿ ಹುಡುಕುತ್ತ ಹರ್ಡೀಕರ್ ವೃತ್ತದ ಬಳಿ "ಇಂದಿರಾ ಕ್ಯಾಂಟೀನ್" ಬಳಿ ಸಣ್ಣ ಕೆರೆಯಾಗಿ ಕಾಣಿಸಿಕೊಂಡು ವಾಹನಗಳ ಓಡಾಟದಿಂದ ಅತ್ತ ಇತ್ತ ಚಲ್ಲಾಡಿ ಹೊಳೇಬೀದಿಯ ಮನೆಗಳಿಗೂ ನುಗ್ಗುತ್ತಿದೆ. ಆ ಸಮಯದಲ್ಲಿ ಪತ್ರಿಕೆಗಳಲ್ಲಿ ಬಂದರೆ "ಮಳೆಗಾಲ ಮುಗಿದ ನಂತರ..." ಸರಿ ಮಾಡಿಸುವುದಾಗಿ ಹೇಳಿ ಸುಮ್ಮನಾಗಿಬಿಡುವ ಜಾಣ್ಮೆ, ದೊಡ್ಡ ದೊಡ್ಡ ರಾಜಕಾರಣಿಗಳ "ಹಿಂಬಾಲಕರಾದ" ಅಧಿಕಾರಿಗಳಲ್ಲಿ ಇದೆ.

Advertise

ಈ ಸಣ್ಣ ಗುಂಡಿ ಶಾಶ್ವತವಾಗಿ ಮುಚ್ಚಿ, ಚರಂಡಿಗಳನ್ನು ಹುಡುಕಿ, ಸರಿಯಾದ ರೀತಿಯಲ್ಲಿ "ಕನ್ಸ್ ಟ್ರಕ್ಷನ್" ಮಾಡಿ ಪರಿಹಾರ ನೀಡುವ ಉತ್ತಮ ಇಂಜಿನಿಯರ್ ಹಾಗೂ ಗುತ್ತಿಗೆದಾರರು "ಸುಂದರ ಬೇಲೂರು, ಹಾಗೂ ಸ್ವಚ್ಛ ಬೇಲೂರು" ಎಂದು "ಹೇಳಿಕೊಂಡು ಓಡಾಡುವ" ಅಧಿಕಾರಿಗಳನ್ನು ಭೇಟಿಯಾಗಿ ಅದನ್ನು "ಹೇಗೆ ಸರಿಮಾಡಿಸಬಹುದೆಂಬ ಮಾಹಿತಿ ನೀಡಿದರೆ" ಅದಕ್ಕೆ ಸಂಭಂಧಿಸಿದ ಅಧಿಕಾರಿಗಳು, ಹಾಗೂ ಚುನಾಯಿತ ಜನಪ್ರತಿನಿಧಿಗಳು ಸರಿಮಾಡಿಸಲು ಪ್ರಯತ್ನ ಪಡಬಹುದೇನೋ...!!


                                ✍️ಅ.ಭೀ

Post a Comment

Previous Post Next Post