ಬೇಲೂರು : ಬೇಲೂರು ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಭಯೋತ್ಪಾದನೆ ವಿರೋಧಿ ದಿನ ನಿಮಿತ್ತ ತಹಸೀಲ್ದಾರ್ ಯು ಎಮ್ ಮೋಹನ್ ಕುಮಾರ್ ರವರು ತಾಲ್ಲೂಕು ಕಛೇರಿಯ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಇಂದು ಪ್ರತಿಜ್ಞಾ ವಿಧಿ ಬೋಧಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಯೋತ್ಪಾದನಾ ವಿರೋಧಿ ದಿನವನ್ನು ಸಮಾಜದಲ್ಲಿ ಶಾಂತಿ ಮತ್ತು ಮಾನವೀಯತೆಯ ಮಹತ್ವವನ್ನು ಸಾರುವ ಮಹತ್ ಕಾರ್ಯದ ಉದ್ದೇಶದಿಂದ ಪ್ರತಿವರ್ಷವೂ ಆಚರಿಸಲಾಗುತ್ತದೆ. ಭಾರತ ಎಂದರೇ ಅದೊಂದು ವೈವಿಧ್ಯತೆಯ ತೊಟ್ಟಿಲು. ಒಂದೇ ದೇಶದಲ್ಲಿ ನಾವು ಅನುಸರಿಸುವ ಸಂಸ್ಕೃತಿ, ಆಡುವ ಭಾಷೆ, ಊಟ ಉಪಹಾರ, ಬಟ್ಟೆ ಬರೆ, ಹೀಗೆ ಒಂದೊಂದು ವಿಷಯದಲ್ಲೂ ಭಿನ್ನತೆಯಿದೆ.
![]() |
Advertise |
![]() |
Advertise |
ವೈವಿಧ್ಯತೆಯಿದೆ. ಇಷ್ಟು ವೈವಿಧ್ಯತೆಯಿದ್ದರೂ ನಾವೆಲ್ಲರೂ ಒಂದೇ ಎಂಬ ಭಾವ ನಮ್ಮದು. ಜಾತಿ, ಧರ್ಮ ಮತ್ತು ವರ್ಗಗಳಾಚೆ ನಿಂತು ನಾವೆಲ್ಲರೂ ಒಂದೇ ಎಂಬ ಭಾವವನ್ನು ಇನ್ನಷ್ಟು ಬಲಪಡಿಸಲು ಭಯೋತ್ಪಾದನಾ ವಿರೋಧಿ ದಿನವನ್ನು ಆಚರಿಸಲಾಗುತ್ತದೆ. ಭಯೋತ್ಪಾದನೆಯಿಂದ ಹತರಾದದವರ ಸ್ಮರಣೆಗೋಸ್ಕರ, ಅಮಾಯಕ -ಮುಗ್ಧ ಜೀವಿಗಳ ನೆನಪಿಗೋಸ್ಕರ ಮೇ 21ರಂದು ಭಾರತದಲ್ಲಿ ಭಯೋತ್ಪಾದನಾ ವಿರೋಧಿ ದಿನವನ್ನು ಆಚರಿಸಲಾಗುತ್ತಿದೆ, ಅಹಿಂಸೆ ಹಾಗೂ ಸಹನೆಗೆ ಹೆಸರಾದ ನಮ್ಮ ರಾಷ್ಟ್ರದ ಭವ್ಯ ಪರಂಪರೆಯಲ್ಲಿ, ದೃಢ ವಿಶ್ವಾಸವುಳ್ಳ ಭಾರತದ ಪ್ರಜೆಗಳಾದ ನಾವು. ಎಲ್ಲ ಬಗೆಯ ಭಯೋತ್ಪಾದನೆ ಮತ್ತು ಹಿಂಸೆಯನ್ನು ಶಕ್ತಿ, ಸಾಮರ್ಥ್ಯದಿಂದ ಎದುರಿಸುತ್ತೇವೆ. ಸಹಬಾಂಧವರಲ್ಲಿ ಶಾಂತಿ, ಸಾಮಾಜಿಕ ಸೌಹಾರ್ದತೆ ಮತ್ತು ಪರಸ್ಪರ ಅರಿವನ್ನು ಸಾಧಿಸಲು ಹಾಗೂ ಉತ್ತೇಜಿಸಲು ಅಲ್ಲದೇ ಮಾನವ ಜೀವಕ್ಕೆ ಹಾಗೂ ಮೌಲ್ಯಗಳಿಗೆ ಬೆದರಿಕೆಯೊಡ್ಡುತ್ತಿರುವ ವಿಚಿದ್ರಕಾರಿ ಶಕ್ತಿಗಳ ವಿರುದ್ಧ ಹೋರಾಡಲು ನಾವು ಪಣ ತೊಡುತ್ತೇವೆ ಎಂದು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಗ್ರೇಡ್ 2 ತಹಶಿಲ್ದಾರ್ ಅಶೋಕ್, ಶಿರಸ್ತೆದಾರ್ ನಾಗರಾಜ್, ಮಂಜುನಾಥ್, ಉಪತಹಸೀಲ್ದರ್ ಮೋಹನ್ ಕುಮಾರ್, ಆಹಾರ ಶೀರಸ್ತೆದಾರ್ ಮಂಜುನಾಥ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.