ಬೇಲೂರು ಕನ್ನಡಸಾಹಿತ್ಯ ಪರಿಷತ್ತಿನಿಂದ ಡಾ.ವಿಜಯಾದಬ್ಬೆ ಜನ್ಮ ದಿನ ಆಚರಣೆ ಸೇರಿದಂತೆ ಹಲವು ಕಾರ್ಯಕ್ರಮಕ್ಕೆ ನಿರ್ಧಾರ

ಬೇಲೂರು : ಹಾಸನ ಜಿಲ್ಲೆ ಬೇಲೂರು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕನ್ನಡದ ಮೇರು ಸಾಹಿತಿ ದಿವಂಗತ ಡಾ.ವಿಜಯಾದಬ್ಬೆ ಇವರ ಜನ್ಮ ದಿನಾಚರಣೆ ಹಾಗೂ ಹತ್ತನೆ ತರಗತಿ ಪರೀಕ್ಷೆಯ ಕನ್ನಡ ಭಾಷೆಯಲ್ಲಿ ೧೨೫ ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸುವುದು ಸೇರಿದಂತೆ ಹಲವು ಕಾರ್ಯಕ್ರಮಗಳ ಆಯೋಜನೆ ಕುರಿತು ತೀರ್ಮಾನ ಕೈಗೊಳ್ಳಲಾಯಿತು.

ಬೇಲೂರು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಸಭೆಯಲ್ಲಿ ಪರಿಷತ್ತು ಅಧ್ಯಕ್ಷ ರಾಜೇಗೌಡ ಮಾತನಾಡಿದರು


ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಅಧ್ಯಕ್ಷ ರಾಜೇಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾಹಿತಿ ನೀಡಿದ ರಾಜೇಗೌಡ ಅವರು, ತಾಲ್ಲೂಕಿನವರೇ ಆದಂತ ದಿವಂಗತ ಡಾ.ವಿಜಯಾದಬ್ಬೆ ಅವರ ಜನ್ಮ ದಿನ ಜೂನ್ ೮ ಆಗಿದ್ದು ೧೧ ನೇ ತಾರೀಖಿನಂದು ಜನ್ಮ ದಿನ ಆಚರಿಸುವ ಬಗ್ಗೆ ಹಾಗೂ ಹತ್ತನೆ ತರಗತಿಯಲ್ಲಿ ಕನ್ನಡ ಭಾಷೆಯಲ್ಲಿ ೧೨೫ ಅಂಕ ಪಡೆದಂತ ವಿದ್ಯಾರ್ಥಿಗಳನ್ನು ಗೌರವಿಸಲಾಗುವುದು ಎಂದು ತಿಳಿಸಿದರು.


Ads

ಜುಲೈ ೧೨ ರಂದು ಸಾಹಿತಿ ದಿವಂಗತ ಮತಿಘಟ್ಟ ಕೃಷ್ಣಮೂರ್ತಿ ಅವರ ಜನುಮ ದಿನಾಚರಣೆ ಹಾಗೂ ಆಗಸ್ಟ್ ೮ ಕ್ಕೆ ದಿವಂಗತ ಬೇಲೂರು ಕೃಷ್ಣಮೂರ್ತಿ ಅವರ ಹುಟ್ಟಿದ ದಿನಾಚರಣೆ ಆಚರಿಸಲು ನಿರ್ಧರಿಸಲಾಯಿತು. ಸುಲೇಮಾನ್ ಅವರ ಪ್ರಯೋಜಕತ್ವದಲ್ಲಿ ಮನೆ ಮನೆ ಸಾಹಿತ್ಯಗೋಷ್ಠಿಯನ್ನು ಮೇ ೨೮ ರಂದು ಆಯೋಜಿಸಲು ತೀರ್ಮಾನಿಸಲಾಯಿತು. ಕನ್ನಡಪರ ಕಸಾಪ ಮಾಜಿ ಅಧ್ಯಕ್ಷ ಮ.ಶಿವಮೂರ್ತಿ ಅವರ ೫೦ ನೇ ವಿವಾಹ ವಾರ್ಷಿಕೋತ್ಸವ ಅಂಗವಾಗಿ ಜೂನ್ ೨೬ ಕ್ಕೆ ಏರ್ಪಡಿಸಲು ತೀರ್ಮಾನಿಸಲಾಯಿತು.

Ads

ಇದೆ ವೇಳೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಘವೇಂದ್ರಹೊಳ್ಳ ಅವರನ್ನು ಕಸಾಪ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಘವೇಂದ್ರಹೊಳ್ಳ, ಪತ್ರಕರ್ತರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಒಂದೆ ನಾಣ್ಯದ ಎರಡು ಮುಖಗಳು, ಪತ್ರಕರ್ತರ ಸಂಘವು ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲಾ ಕಾರ್ಯಕ್ರಮಕ್ಕೆ ಸಹಕಾರ ನೀಡುವುದಾಗಿ ತಿಳಿಸಿದರು. ಇದೆ ಸಂದರ್ಭ ಸಂಘಟನಾ ಕಾರ್ಯದರ್ಶಿಯಾಗಿ ಬೊಮ್ಮಡಿಹಳ್ಳಿ ಕುಮಾರಸ್ವಾಮಿ ಅವರನ್ನು ನೇಮಕ ಮಾಡಿಕೊಳ್ಳಲಾಯಿತು.

ಸಭೆಯಲ್ಲಿ ಪ್ರಾರ್ಥನೆ ಶೋಭಾಹರೀಶ್, ಸ್ವಾಗತ ಕಾರ್ಯದರ್ಶಿ ಮಹೇಶ್, ನಿರೂಪಣೆ ಬೊಮ್ಮಡಿಹಳ್ಳಿಕುಮಾರಸ್ವಾಮಿ ನೆರವೇರಿಸಿದರು. ಬಿಕ್ಕೋಡು ಹೋಬಳಿ ಅಧ್ಯಕ್ಷೆ ಕಮಲಚನ್ನಪ್ಪ, ಹಳೇಬೀಡು ಹೋಬಳಿ ಅಧ್ಯಕ್ಷ ಪ್ರಥ್ವಿ, ಮಾದಿಹಳ್ಳಿ ಹೋಬಳಿ ಅಧ್ಯಕ್ಷ ವಿರೂಪಾಕ್ಷ, ಕಸಾಪ ತಾಲ್ಲೂಕು ಮಾಜಿ ಅಧ್ಯಕ್ಷರಾದ ಮ.ಶಿವಮೂರ್ತಿ, ಅನಂತರಾಜೇಅರಸು, ಕಾರ್ಯದರ್ಶಿ ಶಿವರಾಜು, ಸಂಪತ್ ಇತರರು ಇದ್ದರು.


Post a Comment

Previous Post Next Post