ಕುವೆಂಪುಗೆ ಅವಮಾನ: ತಪ್ಪಿತಸ್ಥರವಿರುದ್ಧ ಶೀಘ್ರ ಕ್ರಮಕ್ಕೆ ಕಸಾಪ ಆಗ್ರಹ

ಹಾಸನ: ರಾಷ್ಟ್ರಕವಿ ಕುವೆಂಪು ಅವರಿಗೆ ಅವಮಾನ ಮಾಡಿರುವವರ ವಿರುದ್ಧ ಪ್ರಕರಣ ದಾಖಲಿಸಿ ಶಿಸ್ತು ಕ್ರಮ ಕೈಗೊಳ್ಳುವುದು ಸರ್ಕಾರದ ಜವಾಬ್ದಾರಿ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶಗೌಡ ಹೇಳಿದರು.
ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕುವೆಂಪು ಅವರ ಸಮಕಾಲೀನ ಕವಿ ದ.ರಾ.ಬೇಂದ್ರೆ ಅವರು ಕುವೆಂಪು ಅವರನ್ನು ಯುಗದ ಕವಿ, ಜಗದ ಕವಿ ಎಂದೆಲ್ಲಾ ಹಾಡಿ ಹೊಗಳಿದ್ದಾರೆ. ಕುವೆಂಪು ಅವರನ್ನು ಮುಂದಿಟ್ಟು ಆಧುನಿಕ ಕನ್ನಡ ಸಾಹಿತ್ಯ ತನ್ನನ್ನು ವಿಶ್ವಸಾಹಿತ್ಯದ ಮುಂದೆ ಒಡ್ಡಿಕೊಳ್ಳುತ್ತಿದೆ. ಇಂಥ ಮೇರು ಕವಿಯನ್ನು ನೀಚ ಪದಗಳಿಂದ ಹೀಯಾಳಿಸಿ ಲಕ್ಷö್ಮಣ್ ಎಂಬಾತ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿರುವುದು ಖಂಡನೀಯ ಎಂದರು. ಇದು ಕುವೆಂಪು ಅವರಿಗಲ್ಲ. ಕನ್ನಡ ಸಾರಸ್ವತ ಲೋಕಕ್ಕೆ ಮಾಡಿದ ಅಪಮಾನ. ವಿಶ್ವಕವಿಯನ್ನು ನಿಂದಿಸಿರುವವರ ವಿರುದ್ಧ ಸ್ವಯಂ ಪ್ರಕರಣ ದಾಖಲಿಸಿ ಸರ್ಕಾರ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ಕೆಲಸ ಶೀಘ್ರ ಆಗಬೇಕು. ಇಲ್ಲವಾದರೆ ಸರ್ಕಾರ ಮತ್ತು ಸಾಹಿತ್ಯದ ಸೋಲಾಗಲಿದೆ ಎಂದರು.
ಕುವೆAಪು ಅವರ ಅವಹೇಳನ ಮೆಸೇಜ್‌ಗೆ ಪ್ರತಿಕ್ರಿಯೆ ನೀಡಿ, ಹಂಚಿರುವ ರೋಹಿತ್ ಚಕ್ರತೀರ್ಥ ಪಠ್ಯ ಪರಿಷ್ಕರಣೆ ಸಮಿತಿ ಅಧ್ಯಕ್ಷರಾಗಲು ಅನರ್ಹರು ಎಂದರು.
ಮುAದಿನ ತಲೆಮಾರಿಗೆ ಪಠ್ಯ ರೂಪಿಸುವುದು ಗಂಭೀರ ಹೊಣೆಗಾರಿಕೆ. ಹಾಗಾಗಿ ವಿವಾದಿತ ವ್ಯಕ್ತಿ ಇಲ್ಲಿರುವುದು ಸೂಕ್ತ ಅಲ್ಲ, ಕೂಡಲೇ ಅವರನ್ನು ಕೆಳಗಿಸಬೇಕು ಎಂದು ಆಗ್ರಹಿಸಿದರು. ಇಂಥವರಿAದ ಮಕ್ಕಳಿಗೆ ಏನು ಸಂದೇಶ ಹೋಗಲಿದೆ ಎಂಬ ಅಂಶ ಮನಗಂಡು ಹಳೆಯ ಪಠ್ಯ ಪುಸ್ತಕಗಳನ್ನೇ ವಿತರಣೆ ಮಾಡಿ ಪಾಠ ಆರಂಭಿಸಬೇಕು ಎಂದು ಮನವಿ ಮಾಡಿದರು.
ಇದು ಮುಂದುವರಿದರೆ ವಾತಾವರಣ ತಿಳಿಯಾಗಿರಲ್ಲ, ಬೇರೆ ರೂಪ ತಾಳುವ ಮುನ್ನ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕು. ಶಿಕ್ಷಣ ಸಚಿವರು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದ ಅವರು, ತಮ್ಮ ಲೇಖನ ವಾಪಸ್ ನಿರ್ಧಾರ ಮಾಡಿರುವ ಸಾಹಿತಿಗಳಿಗೆ ಅಭಿನಂದನೆ ಸಲ್ಲಿಸಿದರು.
ಇದೇ ವೇಳೆ ರೈತನಾಯಕ ಟಿಕಾಯತ್ ಮೇಲೆ ಕನ್ನಡದ ಹೆಸರಿನಲ್ಲಿ ಮಸಿ ಬಳಿದಿರುವುದು ಖಂಡನೀಯ. ತಪ್ಪಿತಸ್ಥರ ಮೇಲೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಿವೃತ್ತ ಪ್ರಾಧ್ಯಾಪಕ ಡಾ.ಹಂಪನಹಳ್ಳಿ ತಿಮ್ಮೇಗೌಡ ಮಾತನಾಡಿ, ಪಠ್ಯ ಪರಿಷ್ಕರಣೆ ಹೆಸರಿನಲ್ಲಿ ಎಲ್ಲವನ್ನೂ ಉದ್ದೇಶಪೂರ್ವಕವಾಗಿ ಮಾಡುತ್ತಿದ್ದಾರೆ. ಹಾಲಿ ಸಮಿತಿ ಒಂದು ರೀತಿಯಲ್ಲಿ ಖಾಸಗಿ ಸಂಸ್ಥೆ ರೀತಿ ಇದೆ. ಇದರಲ್ಲಿ ವಿಷಯ ತಜ್ಞರು ಇಲ್ಲ, ಶಿಕ್ಷಕರಿಲ್ಲ, ಒಂದೇ ಸಮುದಾಯವರಿಗೆ ಮಣೆ ಹಾಕಲಾಗಿದೆ. ಕೆಲವರಿಗೆ ಒಪ್ಪುವ ಸಿದ್ಧಾಂತ ತುರುಕುವುದು ಇದರ ಉದ್ದೇಶ ಎಂದು ಕಿಡಿ ಕಾರಿದರು. ಮೆಟ್ರೋದಲ್ಲಿ ಕನ್ನಡ ಬಳಕೆಗೆ ವಿರೋಧ ಮಾಡಿದ್ದವನನ್ನು ಕನ್ನಡ ಪಠ್ಯ ಪರಿಷ್ಕರಣೆ ಸಮಿತಿ ಅಧ್ಯಕ್ಷರನ್ನಾಗಿ ಮಾಡುವುದು ಸರಿಯಲ್ಲ. ಈ ವಿಷಯದಲ್ಲಿ ಶಿಕ್ಷಣ ಸಚಿವರಿಗೇ ಸ್ಪಷ್ಟತೆ ಇಲ್ಲ ಎಂದು ಅಸಮಾಧಾನ ಹೊರ ಹಾಕಿದರು.
ಸುದ್ದಿಗೋಷ್ಟಿಯಲ್ಲಿ ತಾಲೂಕು ಅಧ್ಯಕ್ಷ ಮಮತೇಶ್, ಗೌರವ ಕಾರ್ಯದರ್ಶಿ ಬಿ.ಆರ್.ಬೊಮ್ಮೇಗೌಡ, ಕಾರ್ಯಕಾರಿ ಸಮಿತಿ ಸದಸ್ಯ ಕೆ.ಜಿ.ಸುರೇಶ್, ತಾಲೂಕು ಪದಾಧಿಕಾರಿ ನಂದನ್ ಇದ್ದರು.

Post a Comment

Previous Post Next Post