ಸಕಲೇಶಪುರ: ಪ್ರೇಮ ವೈಫಲ್ಯದ ಹಿನ್ನೆಲೆಯಲ್ಲಿ ಯುವಕನೋರ್ವ ಪ್ರಿಯತಮೆಯ ಮನೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹಾಲೇಬೇಲೂರು ಗ್ರಾಮದಲ್ಲಿ ನಡೆದಿದೆ.
ಅನಿಲ್‌ಕುಮಾರ್ (26) ಮೃತ ದುರ್ದೈವಿ. ತಾಲೂಕಿನ ಹಾಲೇಬೇಲೂರು ಗ್ರಾಮದ ಗಂಗಾಧರ್ ಹಾಗೂ ಪಾರ್ವತಿ ಎಂಬುವರ ಪುತ್ರ ಅನಿಲ್ ಅದೇ ಗ್ರಾಮದ ಶಿವರಾಂ ಹಾಗೂ ಸವಿತಾ ಎಂಬುವರ ಪುತ್ರಿ ಭಾವನಾ ಎಂಬ ಯುವತಿಯನ್ನು ಸುಮಾರು 6 ವರ್ಷಗಳಿಂದ ಪ್ರೀತಿಸುತ್ತಿದ್ದು ಮೊದಲಿಗೆ ಇವರ ಪ್ರೀತಿಯನ್ನು ವಿರೋಧಿಸುತ್ತಿದ್ದ ಎರಡು ಕುಟುಂಬಗಳು ಬಳಿಕ ಸಮ್ಮತಿ ನೀಡಿದ್ದರು ಎಂದು ತಿಳಿದು ಬಂದಿದೆ.
ಆದರೆ ಕಳೆದ 15 ದಿನಗಳ ಹಿಂದೆ ಏಕಾಏಕಿ ಕವನಳನ್ನು ಮನೆಯಲ್ಲಿ ಕೂಡಿಹಾಕಿದ ಆಕೆಯ ಪೋಷಕರು ಬೇರೆ ಸಂಬಂಧವನ್ನು ಹುಡುಕುತ್ತಿದ್ದರು. ಈ ವಿಚಾರ ತಿಳಿದ ಅನಿಲ್ ಹುಡಗಿಯ ಮನೆಗೆ ಮೇ. 28 ರಂದು ಹೋಗಿದ್ದಾನೆ. ಈ ಸಂದರ್ಭಲ್ಲಿ ಹುಡುಗಿಯ ಮನೆಯವರು ನೀನು ಯಾರು ಗೊತ್ತಿಲ್ಲ, ನೀನು ಏಕೆ ಇಲ್ಲಿಗೆ ಬಂದಿದ್ದೀಯಾ ಎಂದು ಅವಮಾನ ಮಾಡಿದ್ದಾರೆ. ಇದರಿಂದ ಆತಂಕಕ್ಕೆ ಒಳಗಾದ ಅನಿಲ್ ಭಾವನಾ ಜೊತೆ ನನ್ನ ಮದುವೆ ಮಾಡದಿದ್ದರೆ ವಿಷ ಕುಡಿಯುತ್ತೇನೆ ಎಂದಿದ್ದಾನೆ. ಇದಕ್ಕೆ ಹುಡಗಿಯ ಪೋಷಕರು ಆಯಿತು ಇಲ್ಲೇ ವಿಷ ಕುಡಿ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅನಿಲ್ ಹುಡುಗಿಯ ಮನೆಯಲ್ಲೆ ವಿಷ ಕುಡಿದಿದ್ದಾನೆ.
ವಿಷಯ ತಿಳಿದ ಹುಡುಗನ ಮನೆಯವರು ಸಕಲೇಶಪುರದ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಹಾಸನದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲು ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೆ ಯುವಕ ಮೇ. 31 ರಂದು ಮೃತಪಟ್ಟಿದ್ದಾನೆ. ಯುವತಿಯ ಕುಟುಂಬದವರು ಪರಾರಿಯಾಗಿದ್ದು ಈ ಕುರಿತು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಾಸನದ ಜಿಲ್ಲಾಸ್ಪತ್ರೆಯಲ್ಲಿ ಶವಪರೀಕ್ಷೆ ಮಾಡಲಾಗಿದ್ದು ಹಾಲೇಬೇಲೂರು ಗ್ರಾಮದಲ್ಲಿರುವ ಯುವಕನ ಜಮೀನಿನಲ್ಲಿ ಅಂತ್ಯಸAಸ್ಕಾರ ಬುಧವಾರ ಸಂಜೆ ನಡೆಯಿತು.
ಯುವಕನ ಕುಟುಂಬದವರು `?ವನಾ ಹಾಗೂ ಅವರ ಕುಟುಂಬದ ಮೇಲೆ ತೀವ್ರ ಆಕೊ?ರೀಷ ವ್ಯಕ್ತಪಡಿಸಿದ್ದಾರೆ. ಅನಿಲ್‌ಗೆ ಯಾವುದೆ ದುಶ್ಚಟಗಳಿರಲಿಲ್ಲ ಪಾಪದ ಹುಡಗನಾಗಿದ್ದ ಅನಿಲ್‌ನಿಂದ ಯುವತಿ ಹಾಗೂ ಅವರ ಕುಟುಂಬದವರು ಲಕ್ಷಾಂತರ ರೂ ಪೀಕಿದ್ದಾರೆ. ಯುವತಿ ಹಾಗೂ ಅವರ ಕುಟುಂಬದವರು ಮಾಡಿದ ಮೋಸದಿಂದ ನಮ್ಮ ಹುಡುಗ ವಿನಾಕಾರಣ ಸಾವನ್ನಪ್ಪಿದ್ದಾನೆ. ಅವನ ಸಾವಿಗೆ ನ್ಯಾಯ ಕೊಡಿಸಬೇಕು ಎಂದು ತೀವ್ರ ಆಕೊ?ರೀಷ ವ್ಯಕ್ತಪಡಿಸಿದ್ದಾರೆ. ಯುವಕನ ಜೊತೆ ಯುವತಿ ಹಾಗೂ ಅವಳ ಪೋಷಕರ ಪೋಟೋಗಳಿಗೆ ಹಾರ ಹಾಕಿ ಯುವಕನಿಗೆ ಆಗಿರುವ ಅನ್ಯಾಯದ ಕುರಿತು ಮಾಹಿತಿ ಹಾಕಿ ಪೋಟೋ ಹಾಗೂ ವಿಡಿಯೋ ಕ್ಲಿಪ್‌ವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಯುವಕನ ಆಪ್ತರು ಹರಿದು ಬಿಟ್ಟಿರುವುದು ವೈರಲ್ ಆಗಿದೆ.