ಅರಕಲಗೂಡು: ತಾಲ್ಲೂಕಿನ ರಾಮನಾಥ ಪುರದಲ್ಲಿರುವ ಹೊಗೆಸೊಪ್ಪು ಮಾರುಕಟ್ಟೆ ಯಿಂದ ವಿತರಿಸಿರುವ ರಸಗೊಬ್ಬರ ಕಳಪೆಯಾಗಿದೆ ಎಂದು ರೈತ ಸಂಘದ ಅಧ್ಯಕ್ಷ ಸೀಬಳ್ಳಿ ಯೋಗಣ್ಣ ಆರೋಪಿಸಿದ್ದಾರೆ.
ಹೊಗೆಸೊಪ್ಪು ಮಾರುಕಟ್ಟೆ ವಿರಣೆ ಮಾಡಿರುವ ರಸಗೊಬ್ಬರ ದಲ್ಲಿ ರಸಗೊಬ್ಬರದ ಬದಲಿಗೆ ರಂಗೋಲಿ ಪುಡಿ ಇತ್ತು.ಕೆಲವು ರಸಗೊಬ್ಬರ ನೀರಿಗೆ ಬೆರೆಸಿದರೆ ಕರಗಿಲ್ಲ .ಮೇಲ್ನೋಟಕ್ಕೆ ಕಳಪೆ ರಸಗೊಬ್ಬರ ವಿತರಿಸಿರುವುದು ಕಂಡುಬಂದಿದೆ ಎಂದು ರೈತರು ಆರೋಪಿಸುತ್ತಿದ್ದಾರೆ.
ರಸಗೊಬ್ಬರ ವಿತರಿಸಿರುವ ಕಂಪನಿಗಳು ರೈತರಿಗೆ ಮೋಸ ಮಾಡಿದ್ದಾರೆ. ಕಂಪನಿಗಳಿಗೆ ಬಿಲ್ ತಡೆ ಹಿಡಿದು ಸರ್ಕಾರ ರೈತರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು. ಇಲ್ಲದಿದ್ರೆ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ರೈತರು ಮತ್ತು ರೈತ ಸಂಘದ ಅಧ್ಯಕ್ಷ ಸೀಬಳ್ಳಿ ಯೋಗಣ್ಣ ಆಗ್ರಹಿಸಿದರು.
ವರದಿ. ವೆಂಕಟೇಶ್. ಎಂ
Tags
ಅರಕಲಗೂಡು