ಅರಕಲಗೂಡಿನ ತಾಪಂ ಇಒ ಎನ್.‌ ರವಿಕುಮಾರ್ ವರ್ಗಾವಣೆ

ಅರಕಲಗೂಡು: ಪಟ್ಟಣದ ತಾಪಂ ಸಭಾಂಗಣದಲ್ಲಿ ಇತ್ತೀಚೆಗೆ ವರ್ಗಾವಣೆಯಾದ ತಾಪಂ ಇಒ ರವಿಕುಮಾರ್ ಅವರಿಗೆ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ತಹಸೀಲ್ದಾರ್ ಕೆ.ಆರ್. ಶ್ರೀನಿವಾಸ್ ಮಾತನಾಡಿ, ಪಂಚಾಯಿತಿಯ ಎಲ್ಲ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಾಪಂ‌ ಇಒ ಆಗಿ‌ ರವಿಕುಮಾರ್ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ ಎಂದರು.

ಮಲ್ಲಿಪಟ್ಟಣ ಗ್ರಾಪಂ ಅಧ್ಯಕ್ಷ ಎಂ.ಆರ್. ರಂಗಸ್ವಾಮಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಮೂಲ ಸೌಕರ್ಯಗಳ ಕೊರತೆ ಕಂಡುಬಂದ ಕೂಡಲೇ ಎಚ್ಚೆತ್ತು ತಕ್ಷಣ ಸ್ಪಂದಿಸುತ್ತಿದ್ದ ರವಿಕುಮಾರ್ ಅವರು ಉತ್ತಮವಾಗಿ ಕಾರ್ಯ ನಿರ್ವಹಿಸಿ ಪಂಚಾಯಿತಿಗಳ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ಶ್ಲಾಘಿಸಿದರು.

ತಾಲೂಕು ಸಹಾಯಕ ಕೃಷಿ ನಿರ್ದೇಶಕ ರಮೇಶ್ ಕುಮಾರ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್, ರೇಷ್ಮೆ ಇಲಾಖೆ ಅಧಿಕಾರಿ ಸೀತಾರಾಮ್ ಭಟ್, ತಾಪಂ ಲೆಕ್ಕಾಧಿಕಾರಿ ಸುರೇಶ್, ವಿವಿಧ ಗ್ರಾಪಂ ಪಿಡಿಒ ಮತ್ತು ಸಿಬ್ಬಂದಿ ಹಾಜರಿದ್ದು ವರ್ಗಾವಣೆಯಾದ ರವಿಕುಮಾರ್ ಅವರನ್ನು ಅದ್ದೂರಿಯಾಗಿ ಸನ್ಮಾನಿಸಿ ಬೀಳ್ಕೊಟ್ಟರು. 
ಸಮಾರಂಭದಲ್ಲಿ ಹಾಜರಿದ್ದು ಬಹುತೇಕ ಪಿಡಿಒಗಳು ರವಿಕುಮಾರ್ ಅವರ ಕರ್ತವ್ಯ ನಿಷ್ಠೆ, ಸಹಕಾರ ಸ್ಮರಿಸಿ ಭಾವುಕರಾಗಿ ಬೀಳ್ಕೊಡುಗೆ ನೀಡಿದರು.

Post a Comment

Previous Post Next Post