ಆಡಂಬರದ ಬದುಕಿಗಿಂತ ಸಂಸ್ಕಾರಯುತ ಬದುಕು ಮಾತ್ರ ಶ್ರೇಷ್ಠ

ಅರಸೀಕೆರೆ :- ಮನದ ಅಂಧಕಾರವನ್ನು ನೀಗಿ ಸನ್ಮಾರ್ಗವನ್ನು ತೋರುವವನು ಮಾತ್ರ ನಿಜವಾದ ಗುರು ಹಾಗಾಗಿಯೇ ಹರ ಮುನಿದರೂ ಗುರು ಕಾಯುವನು ಎಂದು ಹಿರಿಯರು ಹೇಳಿರುವ ಮಾತು ಸುಳ್ಳಲ್ಲ ಎಂದು ಹಾಸನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಂಭುನಾಥ ಸ್ವಾಮೀಜಿ ಹೇಳಿದರು.

     ಅಹಲ್ಯಾಬಾಯಿ ಹೋಳ್ಕರ್ ಹಾಗೂ ಕುರುಬ ಸಮಾಜದ ವತಿಯಿಂದ ತಾಲೂಕಿನ ಬಾಣಾವರದಲ್ಲಿ ಆಯೋಜಿಸಿದ್ದ ಅಹಲ್ಯಾಬಾಯಿ ಹೋಳ್ಕರ್ ರವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದ ಶ್ರೀಗಳು ಹಣ.ಆಡಂಬರದ ಬದುಕಿಗಿಂತ ಸಂಸ್ಕಾರಯುತ ಬದುಕು ಮಾತ್ರ ಶ್ರೇಷ್ಠವೆನಿಸಿಕೊಳ್ಳುತ್ತದೆ.ಸಂಸ್ಕಾರ ಎಂದರೆ ಗುರು ಹಿರಿಯರನ್ನು.ಮನೆಯ ಹೆಣ್ಣು ಮಕ್ಕಳನ್ನು ಗೌರವದಿಂದ ಎಲ್ಲಿ ನಡೆಸಿಕೊಳ್ಳುತ್ತಾರೆ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಅಂತಹ ನಡೆ-ನುಡಿಯ ಬದುಕು ಸಂಸ್ಕಾರ ಎನಿಸಿಕೊಳ್ಳುತ್ತದೆ ಎಂದರು.
    ಕಾಗಿನೆಲೆ ಕನಕ ಗುರುಪೀಠದ ಶಿವಾನಂದ ಪುರಿ ಶ್ರೀಗಳ ಮಾರ್ಗದರ್ಶನದಲ್ಲಿ ಜಿಲ್ಲೆಯಲ್ಲಿ  ಕುರುಬ ಸಮಾಜವು ಸಂಘಟಿತವಾಗಿ ಬೆಳೆಯುತ್ತಿದ್ದು ಪಟೇಲ್ ಶಿವಪ್ಪನವರು ಜಿಲ್ಲಾಧ್ಯಕ್ಷರಾದ ಬಳಿಕ ಮತ್ತಷ್ಟು ಸಂಘಟನೆ ಬಲಗೊಂಡಿದೆ ಅಲ್ಲದೆ ಜಿಲ್ಲಾ ಕೇಂದ್ರ ಸೇರಿದಂತೆ ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಕನಕ ಸಮುದಾಯ ಭವನಗಳು ನಿರ್ಮಾಣಗೊಂಡಿರುವುದು ಸಂಘಟನೆಯ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಕಾಗಿನೆಲೆ ಕನಕ ಗುರುಪೀಠದ ಶಿವಾನಂದಪುರಿ ಸ್ವಾಮೀಜಿಗಳು ಆಶೀರ್ವಚನ ನೀಡಿ ನಾಡು-ನುಡಿ ಅಷ್ಟೇ ಅಲ್ಲದೆ ದೇಶದ ಬೆಳವಣಿಗೆ ಸಮಾಜದ ಕೊಡುಗೆ ಅಪಾರವಾಗಿದೆ ದಾರ್ಶನಿಕರು ಸ್ವಾತಂತ್ರ್ಯಕ್ಕಾಗಿ ಹೋರಾಡಲು ವೀರ ಸೇನಾನಿಗಳು ಹಾಗೂ ಸಾಮಾಜಿಕ ಕ್ಷೇತ್ರದ ಸೇವೆಗಾಗಿ ಶತಶತಮಾನಗಳಿಂದ ಸಮಾಜದಲ್ಲಿ ಜನಿಸಿದ ಮಹನೀಯರು ನೀಡಿರುವ ಕೊಡುಗೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಹಾಗಾಗಿಯೇ ಕುರುಬ ಸಮಾಜಕ್ಕೆ ತನ್ನದೇ ಆದ ಗೌರವ ಇದೆ ಎಂದು ಹೇಳಿದರು.

   ಜಿಲ್ಲಾ ಕುರುಬ ಸಮಾಜದ ಅಧ್ಯಕ್ಷ ಗೊಲ್ಲರಹಳ್ಳಿ ಪಟೇಲ್ ಶಿವಣ್ಣ ಮಾತನಾಡಿ ಕೆಆರ್ ನಗರ ಕಾಗಿನೆಲೆ ಕನಕ ಗುರುಪೀಠದ ಶಿವಾನಂದಪುರಿ ಸ್ವಾಮೀಜಿಗಳು ಧಾರ್ಮಿಕತೆಯ ಚೌಕಟ್ಟಿನಲ್ಲಿ ಮಾರ್ಗದರ್ಶನಕ್ಕೆ ಮಾತ್ರ ಸೀಮಿತವಾಗಿಲ್ಲ ಸಮಾಜದ ಸಂಘಟನೆಗೆ ಅವರದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಾ ಬಂದಿದ್ದು ಕೆಆರ್ ನಗರ ಮೈಸೂರು.ಹಾಸನ.ಚಾಮರಾಜನಗರ ಹೀಗೆ ತಮ್ಮ ವ್ಯಾಪ್ತಿಯಲ್ಲಿ ಸಮಾಜದ ಸಂಘಟನೆಯ ಜೊತೆಜೊತೆಗೆ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ವಸತಿ ಶಾಲೆಗಳು ವಿಶೇಷವಾಗಿ ವಿದ್ಯಾರ್ಥಿನಿಯರಿಗೆ ಒದಗಿಸಿ ಕೊಟ್ಟಿರುವುದು ಸಮಾಜದ ಬೆಳವಣಿಗೆ ಸ್ವಾಮೀಜಿ ಅವರ ಕೊಡುಗೆ ಅಪಾರ ಎಂದು ತಮ್ಮ ನುಡಿನಮನ ಸಲ್ಲಿಸಿದರು.

    ಸಮಾರಂಭದಲ್ಲಿ ದಸರಿಘಟ್ಟ ಆದಿಚುಂಚನಗಿರಿ ಶಾಖಾಮಠದ ಚಂದ್ರಶೇಖರನಾಥ ಸ್ವಾಮೀಜಿ. ಚಿತ್ರದುರ್ಗ ಕಬೀರ್ ಆಶ್ರಮದ ಶಿವಲಿಂಗನಂದ ಸ್ವಾಮೀಜಿ.ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಗುಣನಾಥ ಸ್ವಾಮೀಜಿ.ಆದಿಹಳ್ಳಿ ಶಾಖಾಮಠದ ಶಿವಪುತ್ರನಾಥ ಸ್ವಾಮೀಜಿ. ಯಳನಾಡು ಮೂರು ಕಳಸ ಮಠದ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ.ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಹಾಗೂ ಅಹಲ್ಯಾಬಾಯಿ ಹೋಳ್ಕರ್ ಸಂಘದ ಅಧ್ಯಕ್ಷ ಪ್ರೇಮ ನಿಂಗಪ್ಪ.ಕುರುಬ ಸಮಾಜದ ಮುಖಂಡರಾದ ಬಿಳಿಚೌಡಯ್ಯ.ಶ್ರೀನಿವಾಸ್. ಅಶೋಕ್.ಲಕ್ಷ್ಮಿ ಶ್ರೀಧರ್. ಮತ್ತಿತರರು ಉಪಸ್ಥಿತರಿದ್ದರು.

Post a Comment

Previous Post Next Post