ರಾಜಕೀಯ ಪ್ರೇರಿತ ಕೊಲೆ: ಸಿಬಿಐ ತಿನಿಖೆಗೆ ಒಪ್ಪಿಸಲು ಸಾ.ರಾ.ಗೋವಿಂದ್ ಒತ್ತಾಯ

ಹಾಸನ:  ಪ್ರಶಾಂತ್ ನಾಗರಾಜ್ ಅವರ ಕೊಲೆ ರಾಜಕೀಯ ಪ್ರೇರಿತವಾಗಿದೆ. ಇಲ್ಲಿಯ ಪೊಲೀಸರು ಇದನ್ನು ತನಿಖೆ ನಡೆಸುವುದು ಬೇಡ. ತನಿಖೆಯನ್ನು ಸಿಬಿಐಗೆ ಒಪ್ಪಿಸಲಿ ಎಂದು ಡಾ.ರಾಜ್ ಕುಮಾರ್ ಅಭಿಮಾನಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಾ.ರಾ.ಗೋವಿಂದ್ ಒತ್ತಾಯಿಸಿದರು.  
ಪ್ರಶಾಂತ್ ಮೃತದೇಹದ ಅಂತಿಮ ದರ್ಶನ ಪಡೆಯಲು ನಗರದ ಹಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.  
ಇದೊಂದು ರಾಜಕೀಯ ಪ್ರೇರಿತ ಕೊಲೆ. ಪ್ರಶಾಂತ್ ಅವರ ತಂದೆ ಹಾ.ರಾ.ನಾಗರಾಜ್ ಅವರನ್ನೂ ಕೊಲೆ ಮಾಡಲಾಗಿತ್ತು. ಪ್ರಶಾಂತ್ ತಂದೆಗೆ ತಕ್ಕ ಮಗನಂತೆ ಬದುಕಿದ್ದರು. ಪ್ರಶಾಂತ್ ಅವರ ತಂದೆ ಕೊಲೆಯಾದಾಗಲೂ ನಾನು ಬಂದಿದ್ದೆ ಎಂದು ನೆನಪಿಸಿದ ಅವರು, ಪ್ರಶಾಂತ್ ಹಾಗೂ ಅವರ ತಂದೆ ನಾಗರಾಜ್, ಡಾ.ರಾಜ್ಕುಮಾರ್ ಅವರ ಅಭಿಮಾನಿಯಾಗಿದ್ದರು.  ಪ್ರಶಾಂತ್ ಕೊಲೆ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

Post a Comment

Previous Post Next Post