ಹಠದಿಂದಲೇ ಹೋಗುತ್ತಿದ್ದೇನೆ ಡೆತ್ ನೋಟ್ ಬರೆದು ನವ ವಿವಾಹಿತೆ ಆತ್ಮಹತ್ಯೆ

ಅರಕಲಗೂಡು :-ಪ್ರೀತಿಸಿ ಮದುವೆಯಾಗಿ 4ತಿಂಗಳಲ್ಲೇ  ತಾಲ್ಲೂಕಿನ ನವ ವಿವಾಹಿತೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಂಗಳೂರಿನ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ .
ಮಹಿಳಾ ಎಂಜಿನಿಯರ್ ಅಂಜು ಆತ್ಮಹತ್ಯೆ ಮಾಡಿಕೊಂಡ ಮೃತ ದುರ್ದೈವಿಯಾಗಿದ್ದು ,ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಬರೆದಿಟ್ಟ ಡೆತ್ ನೋಟ್ ನಲ್ಲಿ ತಾನು ಮಾನಸಿಕ ಖಿನ್ನತೆಗೆ ಒಳಗಾಗಿರುವ ಕುರಿತು ಹೇಳಿಕೊಂಡಿದ್ದಾರೆ. ಅಲ್ಲದೆ ಅಮ್ಮನ ಬಳಿ ಕ್ಷಮೆ ಯಾಚಿಸಿದ್ದಾರೆ " ಹಠ ಮಾಡಿ ಮದುವೆಯಾಗಿ ಇಲ್ಲಿಗೆ ಬಂದೆ ಅದೇ ರೀತಿ ಆಟದಿಂದಲೇ ಇಲ್ಲಿಂದ ಹೋಗುತ್ತಿರುವುದಾಗಿ " ಬರೆದಿದ್ದಾರೆ .

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕು ಬೋಳನಹಳ್ಳಿ ಗ್ರಾಮದ ರವಿಕುಮಾರ್ ಹೇಮಾವತಿ ದಂಪತಿಯ ಎರಡನೇ ಪುತ್ರಿಯಾಗಿರುವ ಅಂಜು ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು ಹಾಸನ ನಗರದ ಕಾಲೇಜಿನಲ್ಲಿ  ಸಿವಿಲ್ ಎಂಜಿನಿಯರಿಂಗ್ ನಲ್ಲಿ ಬಿಇ ವ್ಯಾಸಂಗ ಮಾಡುತ್ತಿದ್ದಾಗ ಅರಕಲಗೂಡು ನಿವಾಸಿ ಅಂಜನ್ (28 )ಕಣಿಯಾರ್ ಎಂಬಾತನನ್ನು  ಪ್ರೀತಿಸಿ ಕಳೆದ 4ತಿಂಗಳ ಹಿಂದಷ್ಟೇ ಪೋಷಕರನ್ನು ಒಪ್ಪಿಸಿ ಕಳೆದ ಫೆಬ್ರವರಿಯಲ್ಲಿ ಕಡೂರಿನ ಬಳ್ಳೆಕೆರೆಯಲ್ಲಿ ವಿವಾಹವಾಗಿ ಬೆಂಗಳೂರಿನಲ್ಲಿ ವಾಸವಿದ್ದರು .

ಯುವತಿ ಪೋಷಕರ ಆರೋಪ :
ನನ್ನ ಮಗಳು ಅಂಜುಗೆ ಅವಳ ಪತಿ ಅಂಜನ್ ಕಣಿಯಾರ್ ಎಂಬುವವರು ಮದುವೆಯಾದ ನಂತರ ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಕೇಳಿ ಬಂದಿತ್ತು,ಈ ವಿಚಾರವಾಗಿ ತನ್ನ ಮಗಳು ನನ್ನೊಡನೆ ಹೇಳಿಕೊಂಡಿದ್ದಳು .
ನನ್ನ ಮಗಳನ್ನು ಇವರಿಗೆ ಸಾಕಲು ಯೋಗ್ಯತೆ  ಇಲ್ಲದಿದ್ದರೆ ನನ್ನ ಮಗಳನ್ನು ನನ್ನ ಮನೆಗೆ ವಾಪಸ್ ಕಳುಹಿಸಿ ಕೊಡಬೇಕಿತ್ತು ಅದನ್ನು ಬಿಟ್ಟು ಈ ರೀತಿ ಕೊಲೆ ಮಾಡಿರುವುದು ಸರಿಯಲ್ಲ ನನ್ನ ಮಗಳ ಸಾವಿಗೆ ಅವಳ ಪತಿ ಹಾಗೂ ಅವರ ಕುಟುಂಬಸ್ಥರೇ ನೇರ ಹೊಣೆ ಎಂದು ಮೃತಳ ತಾಯಿ ಆರೋಪಿಸಿದ್ದಾರೆ .

ಅಂಜನ್ ಕಣಿಯಾರ್ ಹೇಳಿಕೆ :
ವಿವಾಹವಾದ ನಂತರ ನಾವಿಬ್ಬರೂ ಜೊತೆಯಲ್ಲಿ ಸಂತೋಷವಾಗಿಯೇ ಇದ್ದೆವು ಇದುವರೆಗೂ ನಾವು ಅವಳಿಗೆ ಯಾವುದೇ ವರದಕ್ಷಿಣೆ ಕಿರುಕುಳವನ್ನು ನೀಡಿಲ್ಲ, ನಿನ್ನೆ ಬೆಳಿಗ್ಗೆ ಸಂಬಂಧಿ ಹುಟ್ಟುಹಬ್ಬಕ್ಕೆ ಕುಟುಂಬಸ್ಥರ ಜತೆ ತೆರಳಿದ್ದೆ ಅಂಜು ಮನೆಯಲ್ಲೇ ಇದ್ದಳು ಈ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಕಾರ್ಯಕ್ರಮ ಮುಗಿಸಿ ಸಂಜೆ 6ಗಂಟೆಗೆ ವಾಪಸ್ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ಅಂಜುಗೆ ಅನಾರೋಗ್ಯ ಸಮಸ್ಯೆ ಇತ್ತು ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿದ್ದ ಅಂಜುಗೆ ಹಲವು ಕಡೆಗಳಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು ಆದರೂ ಅವರು ಈ ರೀತಿಯ ಕೃತ್ಯವನ್ನು ಮಾಡಿಕೊಂಡಿದ್ದಾರೆ ಎಂದು ಅಂಜನ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ .ವಿಷಯ ತಿಳಿದ ಬೆಂಗಳೂರಿನ ಸುಬ್ರಹ್ಮಣ್ಯನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ .

Post a Comment

Previous Post Next Post