ಪ್ರಶಾಂತ್ ಹತ್ಯೆ ಪ್ರಕರಣ ಇಬ್ಬರ ಬಂಧನ: ಉಳಿದವರ ಸೆರೆಗೆ ಶೋಧಕಾರ್ಯ

ಹಾಸನ: ನಗರಸಭೆ ಸದಸ್ಯ ಪ್ರಶಾಂತ್ ನಾಗರಾಜ್ ಹತ್ಯೆ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಶ್ರೀನಿವಾಸ್‌ಗಡ ತಿಳಿಸಿದರು. ಇಂದು ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಅವರು, ಕೃತ್ಯದಲ್ಲಿ ಸುಮಾರು 7ಮಂದಿ ಭಾಗಿಯಾಗಿದ್ದಾರೆ ಎಂಬುದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ ಎಂದರು.
ಪ್ರಕರಣದಲ್ಲಿ ಎ-1 ಸೇರಿ ಇನ್ನೂ ಹಲವು ಆರೋಪಿಗಳನ್ನು ಬಂಧಿಸಬೇಕಿದೆ. ಪ್ರಮುಖ ಆರೋಪಿ ಸಿಕ್ಕ ನಂತರ ಇಡೀ ಘಟನೆಗೆ ಏನು ಕಾರಣ ಎಂಬುದು ತಿಳಿಯಲಿದೆ ಎಂದು ಹೇಳಿದರು.
ಹಾಲಿ ಬಂಧಿಸಿರುವ ಸಂತೋಷ್ ಮತ್ತು ವಿಶ್ವ ಎಂಬ ಇಬ್ಬರು ಆರೋಪಿಗಳ ವಿಚಾರಣೆ ವೇಳೆ ಹಳೇ ದ್ವೇಷ ಹಿನ್ನೆಲೆಯಲ್ಲಿ ಮುಖ್ಯ ಆರೋಪಿ ಪ್ರಶಾಂತ್ ಅವರನ್ನು ಕೊಲೆ ಮಾಡಿದ್ದಾರೆ. ನಾವು ಅವರಿಗೆ ಬೆಂಬಲ ನೀಡಿದ್ದೇವೆ ಅಷ್ಟೇ ಎಂದು ಹೇಳಿದ್ದಾರೆ ಎಂದರು.
ಮೇಲಧಿಕಾರಿಗಳ ತೀರ್ಮಾನ:
ಪ್ರಶಾಂತ್ ಹತ್ಯೆ ಪ್ರಕರಣವನ್ನು ಸಿಒಡಿಗೆ ಒಪ್ಪಿಸುವ ಬಗ್ಗೆ ಮೇಲಧಿಕಾರಿಗಳು ತೀರ್ಮಾನ ಮಾಡಲಿದ್ದಾರೆ ಎಂದು ಪ್ರಶ್ನೆಗೆ ಉತ್ತರಿಸಿದ ಎಸ್ಪಿ, ಸದ್ಯಕ್ಕೆ ನಾವೇ ವಿಚಾರಣೆ ಮಾಡುತ್ತಿದ್ದೆವೆ ಎಂದು ಸ್ಪಷ್ಟಪಡಿಸಿದರು.
ಆದರೆ ಮೂಲಗಳ ಪ್ರಕಾರ, ಸಿಒಡಿ ಅಧಿಕಾರಿಗಳ ತಂಡ ಈಗಾಗಲೇ ನಗರಕ್ಕೆ ಆಗಮಿಸಿ ಕೃತ್ಯದ ಬಗ್ಗೆ ಮಾಹಿತಿ ಪಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಪ್ರಶಾಂತ್ ಕೊಲೆ ಕೇಸ್ ತನಿಖೆ ಸಿಒಡಿಗೆ ಹಸ್ತಾಂತರವಾಗುವ ಸಾಧ್ಯತೆ ಇದೆ. ಪೆನ್‌ಶೆನ್ ಮೊಹಲ್ಲಾ ಸಿಪಿಐ ರೇಣುಕಾ ಪ್ರಸಾದ್ ಅವರ ವಿರುದ್ಧ ಕೇಳಿ ಬಂದ ಆರೋಪ ಹಿನ್ನೆಲೆಯಲ್ಲಿ ಐಜಿಪಿ ತನಿಖೆಗೆ ಆದೇಶ ಮಾಡಿದ್ದು, ತನಿಖೆ ಪ್ರಗತಿಯಲ್ಲಿದೆ, ನಾನೂ ಕೂಡ ನೋಟಿಸ್ ನೀಡಿದ್ದೇನೆ ಎಂದು ಎಸ್ಪಿ ಹೇಳಿದರು.
ಅರಸೀಕೆರೆ ತಾಲೂಕು ದೊಡ್ಡ ಮೇಟಿಕುರ್ಕೆ ಮೊದಲಾದ ಕಡೆಗಳಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಪಡಿತರ ಅಕ್ಕಿ ಪತ್ತೆ ಪ್ರಕರಣಕ್ಕೆ ಸಂಬAಧಿಸಿದAತೆ ಪೊಲೀಸರ ಸಹಕಾರದೊಂದಿಗೆ ತಹಸೀಲ್ದಾರ್ ಅವರು ಉತ್ತಮ ಕಾರ್ಯಾಚರಣೆ ಮಾಡಿದ್ದಾರೆ. ನಂತರ ನಮಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದೇನೆ. ಸಂಬAಧ ಪಟ್ಟ ಇಲಾಖೆಯಿಂದ ಪೂರ್ಣ ಮಾಹಿತಿ ಸಿಕ್ಕ ನಂತರ ತನಿಖೆ ಆರಂಭಿಸಲಾಗುವುದು ಎಂದು ತಿಳಿಸಿದರು.

Post a Comment

Previous Post Next Post