ಬೇಲೂರು : ಭದ್ರಾ ನದಿಯಿಂದ ತರೀಕೆರೆ, ಕಡೂರು, ಚಿಕ್ಕಮಗಳೂರು ಭಾಗದ ಕೆರೆಗಳಿಗೆ ನೀರು ತುಂಬಿಸುವ ೧೨೮೧ ಕೋಟಿ ರೂ. ಯೋಜನೆ ಹಾಗೂ ೧೨೭ ಕೋಟಿ ರೂ. ವೆಚ್ಚದ ರಣಘಟ್ಟ ಯೋಜನೆಗೆ ಮಂಜೂರು ಮಾಡಿಸಿದ ನಂತರ ನಾನು ನನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಹೇಳಿದರು.
![]() |
ಬೇಲೂರು ತಾಲ್ಲೂಕು ರಣಘಟ್ಟ ನೀರಾವರಿ ಯೋಜನೆ ವೀಕ್ಷಣೆಗೆ ಆಗಮಿಸಿದ್ದ ಸಿ.ಟಿ.ರವಿ ಕಾಮಗಾರಿ ವೀಕ್ಷಿಸಿದರು |
ಬೇಲೂರು ತಾಲ್ಲೂಕಿನ ರಣಘಟ್ಟ ಕುಡಿಯುವ ನೀರಿನ ಕಾಮಗಾರಿ ವೀಕ್ಷಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಯಲು ಸೀಮೆ ನೂರಾರು ಕೆರೆಗಳಿಗೆ ನೀರು ತುಂಬಿಸುವ ಈ ಯೋಜನೆಗೆ ಡಿಪಿಆರ್ ಮಾಡಿಸಿ ಕ್ಯಾಬಿನೆಟ್‌ನಲ್ಲಿ ಹಣಕಾಸು ಇಲಾಖೆ ಒಪ್ಪಿಗೆ ಪಡೆದು ಕೆಲಸಕ್ಕೆ ಚಾಲನೆ ಕೊಟ್ಟಿದ್ದೇವೆ. ಕೆಲಸ ಪೂರ್ಣಗೊಂಡರೆ ಹಳೇಬೀಡು, ಬೆಳವಾಡಿ ಸೇರಿದಂತೆ ಸಣ್ಣಪುಟ್ಟ ಕೆರೆಗಳ ಭರ್ತಿಗೆ ಸಹಾಯವಾಗಲಿದೆ. ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ಆಗುವುದಕ್ಕಿಂತ ಮುಂಚೆ ಅಂದು ಮುಖ್ಯಮಂತ್ರಿ ಆಗಿದ್ದಂತ ಯಡಿಯೂರಪ್ಪ ಅವರಿಂದ ಈ ೨ ಕಾಮಗಾರಿಗೆ ಒಪ್ಪಿಗೆ ಪಡೆದಿದ್ದೇನೆ. ನೀರಿನ ಲಭ್ಯತೆ ಆಧರಿಸಿ ನೂರಾರು ಕೆರೆಗಳಿಗೆ ನೀರು ಹರಿಯಲಿದೆ. ರಣಘಟ್ಟ ಯೋಜನೆಯಲ್ಲಿ ಆರಂಭಿಕ ೩ ಕಿ.ಮೀ.ತೆರೆದ ನಾಲೆ ನಂತರ ೬೦೦ ಮೀಟರ್ ಸುರಂಗಮಾರ್ಗ ಇರಲಿದೆ ಎಂದ ಸಿ.ಟಿ.ರವಿ, ಯೋಜನೆ ಬಜೆಟ್‌ನಲ್ಲಿ ಘೋಷಣೆ ಮಾತ್ರ ಆಗಿತ್ತು, ಬಿಜೆಪಿ ಸರ್ಕಾರ ಬಂದನAತರ ಅನುಷ್ಠಾನಗೊಂಡಿದೆ ಎಂದು ಸ್ಪಷ್ಟಪಡಿಸಿದರು.
ಕರಗಡ ಏತ ನೀರಾವರಿ ಯೋಜನೆ ನಾವು ಅಂದುಕೊAಡAತೆ ಆಗಲಿಲ್ಲ. ಡಿಪಿಆರ್ ತಯಾರಿಸುವಲ್ಲೇ ವಿಫಲವಾಗಿದೆ. ತಾಂತ್ರಿಕ ಸಂಗತಿಗಳು ನಮಗೆ ತಿಳಿಯದ ಕಾರಣ ನ್ಯೂನ್ಯತೆ ಆಗಿದೆ. ತಾಂತ್ರಿಕ ಸಂಗತಿಗೆ ನಾನು ಹೊಣೆಯಾಗೊಲ್ಲ. ಸರ್ಕಾರದ ಒಳ್ಳೆಯ ಕೆಲಸ, ಕೆಟ್ಟಕೆಲಸ ಎರಡೂ ಸಹ ಚುನಾವಣೆ ಮೇಲೆ ಭಾಗಷಃ ಬೀರಲಿದೆ. ಇಂತಹ ಯೋಜನೆಗಳು ಸ್ವಲ್ಪ ಮಟ್ಟಿಗೆ ಅನುಕೂಲ ಆಗಲಿದೆ ಎಂದು ತಿಳಿಸಿದರು. ಯೋಗೇಶ್ವರ್ ಒಳ್ಳೆಯ ಕೆಲಸ ಮಾಡಿದ್ದರೂ ಸೋತರು. ಚುನಾವಣೆ ಏನೆಲ್ಲಾ ಆಗಬಹುದು. ಆದರೂ ನನ್ನ ಕ್ಷೇತ್ರದಲ್ಲಿ ನನ್ನ ಎದುರಾಳಿಯಾಗಿ ಸ್ಪರ್ಧಿಸುವವರು ನೂರು ಸಾರಿ ಯೋಚಿಸಬೇಕಿದೆ ಎಂದು ಹೇಳಿದರು. ಈ ಸಂದರ್ಭ ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಚ್.ಕೆ.ಸುರೇಶ್, ತಾ.ಬಿಜೆಪಿ ಅಧ್ಯಕ್ಷ ಅಡಗೂರು ಆನಂದ್, ಪ್ರಾಧೀಕಾರದ ಅಧ್ಯಕ್ಷ ಬಸವರಾಜು, ಪ್ರಮುಖರಾದ ಗಂಗೂರುಶಿವಕುಮಾರ್, ತೆಂಡೇಕೆರೆ ರಮೇಶ್, ಜುಂಜಯ್ಯ ಇತರರು ಇದ್ದರು.