ರಸ್ತೆಗೆ ಜಲ್ಲಿ ಹಾಕುವ ಕೆಲಸ ಸ್ಥಗಿತ: ನಿವಾಸಿಗಳ ಆಕ್ರೋಶ

ಬೇಲೂರು : ಪಟ್ಟಣದ ನೆಹರೂನಗರದಲ್ಲಿರುವ ಹೊಯ್ಸಳ ಬೀದಿಯ ಮೊದಲನೇ ರಸ್ತೆಗೆ ಜಲ್ಲಿ ಹಾಕಲು ಆರಂಭಿಸಿ ೩ ತಿಂಗಳಾದರೂ ಇನ್ನೂ ಪೂರ್ಣಗೊಳ್ಳದ ಬಗ್ಗೆ ನಿವಾಸಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಬೇಲೂರು ಪಟ್ಟಣದ ಹೊಯ್ಸಳ ಬೀದಿಗೆ ಜಲ್ಲಿ ಹಾಕುವ ಕೆಲಸ ನಿಂತಿರುವುದು


೧೦ ಲಕ್ಷರೂ. ವೆಚ್ಚದ ಕಾಮಗಾರಿ ಇದಾಗಿದ್ದು ಜಲ್ಲಿಯನ್ನೂ ಸಹ ಸಮರ್ಪಕವಾಗಿ ಹಾಕಿಲ್ಲ, ಗುಣಮಟ್ಟವೂ ಇಲ್ಲ. ಕಾಮಗಾರಿ ೨ ತಿಂಗಳಲ್ಲಿ ಪೂರ್ಣಗೊಳ್ಳಬೇಕೆಂಬ ನಿಯಮ ಇದ್ದರೂ ಪೂರ್ಣಗೊಳಿಸಿಲ್ಲ. ಇದಕ್ಕೆ ಪುರಸಭೆಯ ಎಂಜಿನಿಯರ್ ಹಾಗೂ ಗುತ್ತಿಗೆದಾರರ ನಿರ್ಲಕ್ಷö್ಯವೇ ಕಾರಣ ಎಂದು ನಿವಾಸಿ ಕುಮಾರ್ ಎಂಬುವರು ದೂರಿದ್ದಾರೆ.

ಹೊಯ್ಸಳ ಬಡಾವಣೆಯ ಮನೆಗಳಿಗೆ ಹೋಗಲು ಹೊಯ್ಸಳ ಬೀದಿ ಹೆಸರಿನಲ್ಲಿ ೨ ರಸ್ತೆಗಳಿದ್ದರೂ ಒಂದರ ಮುಂದೆ ಮಲಮೂತ್ರದ ಮಲೀನ ನೀರು ಸಂಗ್ರವಾಗಿದೆ, ಇನ್ನೊಂದರಲ್ಲಿ ಜಲ್ಲಿ ಹಾಕುವ ಕೆಲಸ ಅರ್ಧಕ್ಕೆ ನಿಂತಿರುವುದರಿAದ ಓಡಾಡಲು ತೊಂದರೆಯಾಗುತ್ತಿದೆ ಎಂದು ಜನತೆ ಆರೋಪಿಸಿದ್ದಾರೆ. ಅಧಿಕಾರಿಗಳು ಕೂಡಲೇ ಕಾಮಗಾರಿ ಮುಗಿಸಿಕೊಡುವಂತೆ ಆಗ್ರಹಿಸಿದ್ದಾರೆ.



Post a Comment

Previous Post Next Post