ಹಾಸನ (ಜೂ 4) : ನಗರಸಭೆ ಸದಸ್ಯ ಪ್ರಶಾಂತ್ ಕೊಲೆಗೆ ಪೊಲೀಸ್ ವೈಫಲ್ಯವೇ ಕಾರಣ, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಮಾಜಿ ಶಾಸಕ ಹೆಚ್.ಡಿ ರೇವಣ್ಣ ಆರೋಪಿಸಿದ್ದಾರೆ. ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಆ ಹುಡುಗನಿಗೆ ಸಾಕಷ್ಟು ಕಿರುಕುಳ ಕೊಟ್ಟಿದ್ದಾರೆ.
ಮೂರು ವರ್ಷದ ಹಳೆಯ ಪ್ರಕರಣಕ್ಕೆ ಹೇಳಿಕೆ ಪಡೆದು 307 ಕೇಸ್ ಹಾಕಿದ್ದಾರೆ. ಉದ್ದರು ಗ್ರಾಮದಲ್ಲಿ ಗಲಾಟೆ ನಡೆದಾಗ ಪ್ರಶಾಂತ್ ಅಲ್ಲಿ ಇರಲಿಲ್ಲ ಆದರ ಕೇಸ್ ದಾಖಲಿಸಿದ್ದಾರೆ. ಹಾಸನ ನಗರ ಹಾಗೂ ಪೆನ್‌ಷನ್‌ಮೊಹಲ್ಲಾ ಪೊಲೀಸ್ ಠಾಣೆ ರೌಡಿಗಳ ತಾಣವಾಗಿದೆ.ಹೊಸ ಬಾಂಬ್ ಸಿಡಿಸಿದ ರೇವಣ್ಣ
ಒಂದು ಐದು ಜನ ಇದ್ದಾರೆ ದಿನ ಬೆಳಿಗ್ಗೆ ಬಂದು ಸ್ಟೇಷನ್‌ನಲ್ಲಿ ಕುಳುತ್ಕಳೋದು, ಅವರೆಲ್ಲಿರಗೂ ಪೊಲೀಸ್ ಠಾಣೆಯಲ್ಲೇ ಊಟ ತಿಂಡಿ. ಅಮಾಯಕರ ಮೇಲೆ ಕಂಪ್ಲೆಂಟ್ ಕೊಡ್ಸೊದು, ತೀರ್ಮಾನ ಮಾಡೋದು ಮಾಡ್ತಿದ್ದಾರೆ. ಆರ್.ಟಿ.ಐ. ಅಡಿಯಲ್ಲಿ ಪೊಲೀಸ್ ಠಾಣೆಯ ಸಿಸಿಟಿವಿ ಫೂಟೇಜ್ ಕೇಳಿದ್ರೆ ಎಸ್ಪಿ ಆಫೀಸ್‌ನಲ್ಲಿ ಸಿಗಲ್ಲ, ಇದರ ಬಗ್ಗೆ ಪರಿಶೀಲಿಸಿ ಅಂತ ಆಯಾ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಕ್ರಮ ಕೈಗೊಳ್ಳಿ ಅಂತ ಹಿಂಬರಹ ಕೊಡುತ್ತಾರೆ.
ಪ್ರಶಾಂತ್ ಕೊಲೆಯಾಗುತ್ತಿದ್ದಂತೆ ಗಾನ್, ಆಪರೇಷನ್ ಸಕ್ಸಸ್ ಅಂಥ ಒಬ್ಬನಿಗೆ ಒಂದು ಫೋನ್ ಹೋಗುತ್ತೆ. ವಿಜಯನಗರದಲ್ಲಿ ಪಟಾಕಿ ಹೊಡಿತಾರೆ, ಒಂದು ಆಫೀಸ್‌ನಲ್ಲಿ ಕೇಕ್ ಕಟ್ ಮಾಡ್ತಾರೆ ಎಂದು ರೇವಣ್ಣ ಹೊಸ ಬಾಂಬ್ ಸಿಡಿಸಿದರು.
Murder: ಪತ್ನಿ ಕರೆದೊಯ್ಯಲು ಮುಂಬೈನಿಂದ ಬಂದ; ಹೆಣ್ಣು ಕೊಟ್ಟ ಅತ್ತೆಯನ್ನೇ ಕೊಂದ, ಕಾರಣ ಏನು ಗೊತ್ತಾ?
ಪೊಲೀಸರು ಯಾರನ್ನು ಬಂಧಿಸಿಲ್ಲ
ಜಿಲ್ಲಾ ಉಸ್ತುವಾರಿ ಸಚಿವರು ಇಬ್ಬರನ್ನು ಬಂಧಿಸಿದ್ದೇವೆ ಎಂದು ಹೇಳ್ತಾರೆ, ಐಜಿಪಿ ಯಾರನ್ನು ಬಂಧಿಸಿಲ್ಲ ಅಂತಾರೆ. ಉದಯ್‌ಭಾಸ್ಕರ್, ರೇಣುಕಾಪ್ರಸಾದ್ ಈ ಇಬ್ಬರು ಅಧಿಕಾರಿಗಳು ಗಾಂಜಾ ಮಾರಿಸುತ್ತಾರೆ, ಮಟ್ಕಾ ಆಡುಸ್ತಾರೆ. ಇವೆಲ್ಲಾ ಮಾಡದೆ ಇನ್ಸ್‌ಪೆಕ್ಟರ್ ಐದು ಕೋಟಿ ಮನೆ ಕಟ್ಟಲು ಆಗುತ್ತಾ, ಮರಳು ದಂಧೆ, ಮಟ್ಕಾ ಆಡ್ಸದೆ ಈ ಇಬ್ಬರು ಅಧಿಕಾರಿಗಳ ಕೆಲಸವಾಗಿದೆ. ಪ್ರಾಮಾಣಿಕ ಅಧಿಕಾರಿಗಳಿಗೆ ಇಲ್ಲಿ ಬೆಲೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿಷ್ಪಕ್ಷಪಾತವಾಗಿ ತನಿಖೆ ಆಗ್ರಹ
ಪ್ರಶಾಂತ್ ಕೊಲೆ ಪ್ರಕರಣವನ್ನು ಹೊಳೆನರಸೀಪುರ ಇನ್ಸ್‌ಪೆಕ್ಟರ್‌ನಿಂದ ತನಿಖೆ ಮಾಡಿಸುತ್ತೇನೆ ಅಂತ ಎಸ್ಪಿ ಹೇಳಿದ್ರು. ನಾನು ಬೇಡ ಬೇರೆಯಾರಿಗಾದರು ವಹಿಸಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂದು ಹೇಳಿದ್ದೆ. ಅರಸೀಕೆರೆ ಸರ್ಕಲ್ ಇನ್ಸ್‌ಪೆಕ್ಟರ್ ವಸಂತ್‌ಗೆ ತನಿಖೆ ವಹಿಸಿದ್ದರು. ಅವರು ಪ್ರಶಾಂತ್ ಮನೆಗೆ ಹೋಗಿ ಹೇಳಿಕೆ ತೆಗೆದುಕೊಂಡು ಬಂದ ಮೇಲೆ ಉದಯ್‌ಭಾಸ್ಕರ್ ಹೇಗೆ ಪೊಲೀಸ್ ಠಾಣೆಗೆ ಬಂದ, ಇಬ್ಬರನ್ನು ಹೆದರಿಸಿ ಮತ್ತೆ ಬೇರೆ ಕಂಪ್ಲೆಂಟ್ ಬರೆಸಿಕೊಂಡು ಎಫ್.ಐ.ಆರ್. ಹಾಕಿದ್ದಾನೆ.
ಹದಿನೆಂಟು ಕೇಸ್‌ಗಳನ್ನು ಬಿ ರಿಪೋರ್ಟ್ ಹಾಕಿದ್ದೇನೆ
ಹಾಸನ ಸಿಟಿ, ಪೆನ್‌ಷನ್ ಠಾಣೆಯಲ್ಲಿ ಹಗಲು ದರೋಡೆ ನಡೆಯುತ್ತಿದೆ. ಅಧಿಕಾರಿಗಳ ಫೊನ್ ಪರಿಶೀಲನೆ ಮಾಡಿ, ಸಿಸಿಟಿವಿ ಚೆಕ್ ಮಾಡಲಿ, ಎಲ್ಲಾ ಸತ್ಯಾಂಶ ಹೊರಗಡೆ ಬರುತ್ತೆ ಎಂದು ಒತ್ತಾಯಿಸಿದರು. ಶಾಸಕರ ಅಪ್ಪಣೆ ಇಲ್ಲದೆ ಯಾವ ಪೊಲೀಸರು ಹಾಸನಕ್ಕೆ ಬರುವ ಹಾಗಿಲ್ಲ, ಶಾಸಕರ ಲೆಟೆರ್ ಇಲ್ಲದೆ ಪೊಲೀಸರು ಹಾಸನಕ್ಕೆ ಬರಲು ಆಗುತ್ತ. ಒಬ್ಬ ಸರ್ಕಲ್ ಇನ್ಸ್‌ಪೆಕ್ಟರ್ ಶಾಸಕರ ಮೇಲಿದ್ದ ಹದಿನೆಂಟು ಕೇಸ್‌ಗಳನ್ನು ಬೀ ರಿಪೋರ್ಟ್ ಹಾಕಿದ್ದೇನೆ ಎಂದು ಫೋನ್‌ನಲ್ಲಿ ಮಾತನಾಡುವ ಆಡಿಯೋ ವೈರಲ್ ಆಗಿತ್ತು ಎಂದರು.
ಪ್ರೀತಂಗೌಡ ಹೇಳಿಕೆಗೆ ತಿರುಗೇಟು
ಚನ್ನರಾಯಪಟ್ಟಣದಲ್ಲಿ ನಾಲ್ಕು ಕೊಲೆಗಳಾಗಿದ್ದವು ಅದಕ್ಕೆ ಶಾಸಕರು, ಸಂಸದರು ಕಾರಣ ಅನ್ನಲು ಆಗುತ್ತಾ, ಶಾಸಕ ಪ್ರೀತಂಗೌಡ ಹೇಳಿಕೆಗೆ ತಿರುಗೇಟು ನೀಡಿದ ರೇವಣ್ಣ ಅಲ್ಲಿ ಕೊಲೆಯಾದವರು ಬೇರೆಯವರು, ಹಾಸನದಲ್ಲಿ ಎಷ್ಟು ಕೊಲೆಗಳಾಗಿವೆ. ಇಲ್ಲಿ ಕೊಲೆಯಾಗಿರುವುದು ನಮ್ಮ ಪಕ್ಷದ ನಗರಸಭೆ ಸದಸ್ಯ, ನಾವೇನಾದ್ರು ಬಿಜೆಪಿ ಕಾರ್ಯಕರ್ತರನ್ನ ಕೊಲೆ ಮಾಡ್ಸಿದ್ವಾ, ನೆಕ್ಸ್ಟ್ ನಮ್ಮ ಪಕ್ಷದ ಅಗಿಲೆ ಯೋಗೀಶ್‌ನೇ ಟಾರ್ಗೆಟ್, ಅವನೊಬ್ಬನೆ ಶಾಸಕರ ವಿರುದ್ಧ ಮಾತಾಡ್ತಿರೋದು ಎಂದು ಗಂಭೀರ ಆರೋಪ ಮಾಡಿದರು. ಸಿಪಿಐ ರೇಣುಕಾಪ್ರಸಾದ್, ಡಿವೈಎಸ್‌ಪಿ ಉದಯ್‌ಭಾಸ್ಕರ್ ಇಬ್ಬರು ಹಿರಿಯ ಅಧಿಕಾರಿಗಳನ್ನೇ ಕಂಟ್ರೋಲ್ ಮಾಡ್ತಾರೆ ಎಂದರು.
ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ 2ನೇ ಬೆಂಬಲ
ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಎರಡನೇ ಬೆಂಬಲ ನೀಡದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಕಾಂಗ್ರೆಸ್‌ನವರು ಜೆಡಿಎಸ್ ಓಟು ಕೇಳಲ್ಲ ಅಂದವ್ರೆ, ಬಿಜೆಪಿಯವರ ಓಟು ಕೇಳ್ತಾರೇನೋ ಗೊತ್ತಿಲ್ಲ. ಹತ್ತನೇ ತಾರೀಕು ಕಳೆದ ಮೇಲೆ ಎಲ್ಲಾ ಗೊತ್ತಾಗುತ್ತೆ. ಕೋಮುವಾದಿಗಳನ್ನ ದೂರ ಇಡಬೇಕು ಅಂತಾರೆ, ಅವರ ಹತ್ರನೇ ಓಟು ಕೇಳ್ತಾರೆ. ರಾಹುಲ್‌ಗಾಂಧಿ ಹಾಸನಕ್ಕೆ ಬಂದು ಬಿಜೆಪಿ-ಜೆಡಿಎಸ್ ಎ ಟೀಂ, ಬೀ ಟಿಂ ಅಂದಿದ್ದರು. ನಾವು ಮೇಡಂ ಕೇಳಿದ್ವಿ, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಮಾತಿಗೆ ಬೆಲೆ ಇಲ್ಲ ಅಂದರೆ ನಾವೇನ್ ಮಾಡೋಣ ಎಂದರು