ಒಬಿಸಿ ಪಟ್ಟಿಗೆ ಸೇರಿಸಲು ಆಗ್ರಹ ಆ.1 ರಂದು ವೀರಶೈವ-ಲಿಂಗಾಯತ ಪಂಗಡಗಳಿಂದ ಮೆರವಣಿಗೆ

ಹಾಸನ: ವೀರಶೈವ-ಲಿಂಗಾಯತ ಸಮುದಾಯದ ಎಲ್ಲಾ ಪಂಗಡಗಳನ್ನೂ ಕೇಂದ್ರದ ಹಿಂದುಳಿದ ವರ್ಗಗಳ ಓಬಿಸಿ ಪಟ್ಟಿಯಲ್ಲಿ ಸೇರಿಸಲು ಆಗ್ರಹಿಸಿ ಆಗಸ್ಟ್ 1 ರಂದು ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ವಿವಿಧ ಕಲಾತಂಡದೊAಡನೆ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್ ತಿಳಿಸಿದರು.
ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಇಲ್ಲಿಂದ ಡಿಸಿ ವರೆಗೂ ಮೆರವಣಿಗೆ ನಡೆಸಿ ಮನವಿ ಸಲ್ಲಿಸಲಾಗುವುದು. ಜಾತಿ ರಹಿತ ಸಮ ಸಮಾಜದ ಪರಿಕಲ್ಪನೆಯನ್ನು ಸಮಾಜಕ್ಕೆ ನೀಡಿದ ಬಸವಾದಿ ಶರಣರು ಕೊಟ್ಟಂತಹ ಮಾರ್ಗದಲ್ಲಿಯೇ ಸಾಗಿದ ವೀರಶೈವ-ಲಿಂಗಾಯತ ಸಮಾಜ ಬಾಂಧವರು ಎಲ್ಲರನ್ನೂ ಒಪ್ಪಿಕೊಂಡು ಅಪ್ಪಿಕೊಂಡು ಬಂದವರು ಎಂದರು.
ಜಾತಿ, ಧರ್ಮದ ಭೇದವಿಲ್ಲದೇ ಎಲ್ಲ ವರ್ಗದವರಿಗೂ ಶಿಕ್ಷಣ, ವಸತಿ ಮತ್ತು ದಾಸೋಹ ನೀಡುವ ಮೂಲಕ ರಾಷ್ಟçದ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸಿದವರು. ಇಂದು ನಮ್ಮ ಸಾಮಾಜಿಕ ನ್ಯಾಯಕ್ಕಾಗಿ ನಾವೇ ಹೋರಾಟ ಮಾಡುವ ಪ್ರಸಂಗ ಬಂದಿದೆ. ರಾಜ್ಯದಲ್ಲಿ ಕಳೆದ 60 ವರ್ಷಗಳಿಂದ ವೀರಶೈವ - ಲಿಂಗಾಯತ ಸಮುದಾಯ ರಾಜ್ಯದ ಇತರೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿದ್ದರೂ ಈ ವರ್ಗವನ್ನು ಕೇಂದ್ರದ ಹಿಂದುಳಿದ ವರ್ಗಗಳ (ಓಬಿಸಿ) ಪಟ್ಟಿಗೆ ಸೇರಿಸದೆ ಇರುವುದು ದುರದೃಷ್ಟಕರ ಎಂದು ವಿಷಾದಿಸಿದರು. 
ವೀರಶೈವ - ಲಿಂಗಾಯತ ಸಮುದಾಯದ ಪ್ರತಿಭಾವಂತರು ದಶಕಗಳಿಂದ ಹತ್ತು ಹಲವಾರು ಅವಕಾಶಗಳಿಂದ ವಂಚಿತರಾಗಿದ್ದಾರೆ. ಇದರಿಂದಾಗಿ ಕೇಂದ್ರ ಸರ್ಕಾರದ ಐಎಎಸ್, ಐಪಿಎಸ್, ಐಆರ್‌ಎಸ್ ಮೊದಲಾದ ಅಖಿಲ ಭಾರತ ಸೇವೆಗಳಲ್ಲಿ ಹೆಚ್ಚು ಮಂದಿಗೆ ಅವಕಾಶ ಸಿಗುತ್ತಿಲ್ಲ. ಅದೇ ರೀತಿ ಕೇಂದ್ರ ಸ್ವಾಮ್ಯದ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳಾದ ಐಐಟಿ, ಎನ್‌ಐಟಿ, ನೀಟ್ ಮೊದಲಾದ ಕಡೆ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವಕಾಶ ಪಡೆಯಲು ಎಲ್ಲಾ ಪಂಗಡಗಳೂ ಸೇರಿ ಸೋಮವಾರ ಬೆಳಗ್ಗೆ 10 ಗಂಟೆಗೆ ಮೆರವಣಿಗೆ ಹಮ್ಮಿಕೊಂಡಿದ್ದೇವೆ ಎಂದರು. ಪ್ರತಿಕಾಗೋಷ್ಟಿಯಲ್ಲಿ ಮಹಾಸಭಾದ ರಾಜ್ಯ ಸಮಿತಿ ನಿರ್ದೇಶಕ ಗುರುನಾಥ್, ಉಪಾಧ್ಯಕ್ಷ ಶೋಭನ್ ಬಾಬು, ಸಹ ಕಾರ್ಯದರ್ಶಿ ಕೆ.ಟಿ. ನಾಗೇಶ್, ಖಜಾಂಚಿ ಸಿ.ಎಸ್. ಕುಮಾರಸ್ವಾಮಿ, ಕಾರ್ಯದರ್ಶಿ ಹೆಚ್.ಆರ್. ಒಂಬೇಶ್, ಸಂಪತ್ತು ಇದ್ದರು.

Post a Comment

Previous Post Next Post