ತುಮಕೂರಿಗೆ ಹೇಮಾವತಿ ನೀರು : ಕೆ.ಗೋಪಾಲಯ್ಯ

ತುಮಕೂರು: ಜಿಲ್ಲೆಗೆ ಹೇಮಾವತಿ ನೀರು ಬಿಡಲು ಸರ್ಕಾರ ಮುಂದಾಗಿದೆ. ಇಂದು (ಸೋಮವಾರ) ರಾತ್ರಿ ಜಿಲ್ಲೆಗೆ ನೀರು ಬಿಡಲಾಗುತ್ತದೆ ಎಂದು ಹಾಸನ ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.


ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇಷ್ಟು ದಿನ ನಾಲೆಯಲ್ಲಿ ಕಾಮಗಾರಿ ನಡೆಯುತ್ತಿತ್ತು. ಹಾಗಾಗಿ ನೀರು ಬಿಡಲು ಆಗಲಿಲ್ಲ. ಈಗಾಗಲೇ ನೀರು ಬಿಡುವ ಕುರಿತು ಸಭೆ ಮಾಡಲಾಗಿದೆ. ಜಿಲ್ಲೆಗೆ ಅಗತ್ಯ ನೀರನ್ನು ಬಿಡಲಾಗುತ್ತದೆ. ಬುಗುಡನಹಳ್ಳಿ ಸೇರಿದಂತೆ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಲಾಗುವುದು. ಜಿಲ್ಲೆಗೆ ನೀರಿನ ವಿಷಯವಾಗಿ ಯಾವುದೇ ತೊಂದರೆಯಾಗದಂತೆ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ನೋಡಿಕೊಳ್ಳುತ್ತಿದೆ ಎಂದರು.

ಜುಲೈ 17ರಂದು ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ ವಿಧಾನಸಭಾ ಕ್ಷೇತ್ರದಲ್ಲಿ ಬಸವಣ್ಣ, ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಪ್ರತಿಮೆ ಅನಾವರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

Post a Comment

Previous Post Next Post